ಚನ್ನಮ್ಮನ ಕಿತ್ತೂರು,ಅ17: ಮೇವು ತರಲು ಹೋದ ಹಿರೇನಂದಿಹಳ್ಳಿ ಗ್ರಾಮದ ರೈತ ತೀರ್ಥಗೌಡ ಶಂಕರಗೌಡ ಪಾಟೀಲರಿಗೆ ವಿದ್ಯುತ್ ತಂತಿ ತಗಲಿ ಮೃತಪಟ್ಟ ಹಿನ್ನೆಲೆ ಅವರ ಕುಟುಂಬಕ್ಕೆ ಹೆಸ್ಕಾಂದಿಂದ ಪರಿಹಾರ 5 ಲಕ್ಷ ರೂ. ಗಳ ಚೆಕ್‍ನ್ನು ತಾಲೂಕಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ವಿತರಿಸಿದರು.
ಈ ವೇಳೆ ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಹಶೀಲ್ದಾರ ಕಲ್ಲನಗೌಡ ಪಾಟೀಲ, ಹೆಸ್ಕಾಂ ಎಇಇ ಶಿವಾನಂದ ಬಾಗಲಕೋಟಿ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‍ಐ ಪ್ರವೀಣ ಗಂಗೋಳ, ಎಸ್.ಓ ಶ್ರೀಶೈಲ ಸವದತ್ತಿ, ಮುಖಂಡರುಗಳಾದ ಗಂಗಪ್ಪ ಹುರಕಡ್ಲಿ, ಅಶಪಾಕ ಹವಾಲ್ದಾರ, ಮಡಿವಾಳಪ್ಪ ಹುಜರಾತಿ, ಸೇರಿದಂತೆ ರೈತ ಕುಟುಂಬಸ್ಥರು, ಅಧಿಕಾರಿಗಳು, ಗಣ್ಯರಿದ್ದರು.






















