ಐಸಿಸ್ ಉಗ್ರ ಸಂಘಟನೆಗೆ ತಕ್ಕ ಶಾಸ್ತಿ: ಟ್ರಂಪ್ ಗುಡುಗು

ವಾಷಿಂಗ್ಟನ್, ಡಿ.೨೬- ವಾಯುವ್ಯ ನೈಜೀರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧ ಅಮೆರಿಕ ಮಾರಕ ದಾಳಿ” ನಡೆಸಿದ್ದು ಅಮೆರಿಕಾ ಸೇರಿದಂತೆ ಜಗತ್ತಿನ ಯಾವುದೇ ಭಾಗದಲ್ಲಿ ಭಯೋತ್ಪಾದಕ ದಾಳಿ ನಡೆಸಿದರೆ ಐಸಿಸ್ ಉಗ್ರ ಸಂಘಟನೆಯನ್ನು ಹತ್ತಿಕ್ಕದೆ ಬಿಡುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಪಥ ಮಾಡಿದ್ದಾರೆ.

ಐಸಿಸ್ ಸಂಘಟನೆ “ಭಯೋತ್ಪಾದಕ ವಿಷ ಬೀಜಾಸುರ ಎಂದು ಬಣ್ಣಿಸಿದ ಅವರು ಆ ಗುಂಪು “ಮುಖ್ಯವಾಗಿ ಅಮಾಯಕ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಕ್ರೂರವಾಗಿ ಕೊಲ್ಲುತ್ತಿದೆ” ಸಂಘಟನೆಯನ್ನು ಹತ್ತಿಕ್ಕದೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಐಸಿಸ್ ಗುರಿಯಾಗಿಸಿಕೊಂಡು ಅಮೆರಿಕದ ಸೇನೆ ಹಲವು ದಾಳಿ ನಡೆಸಿದೆ”ಆದರೆ ಅಮೆರಿಕದ ಆಫ್ರಿಕಾ ಕಮಾಂಡ್ ನಂತರ ದಾಳಿಯನ್ನು ಸೊಕೊಟೊ ರಾಜ್ಯದಲ್ಲಿ ನೈಜೀರಿಯಾದೊಂದಿಗೆ ಸಮನ್ವಯದಿಂದ ನಡೆಸಲಾಗಿದೆ ಎಂದು ಹೇಳಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, ತಮ್ಮ ನಾಯಕತ್ವದಲ್ಲಿ, ದೇಶ ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ಏಳಿಗೆ ಹೊಂದಲು ಬಿಡುವುದಿಲ್ಲ” ಜೊತೆಗೆ ಅಮೆರಿಕಾ ಸೇರಿದಂತೆ ಜಗತ್ತಿನ ಯಾವುದೇ ಮೂಲೆಯಲ್ಲಿ ದಾಳಿ ಮಾಡಿದರೂ ಮಟ್ಟ ಹಾಕದೆ ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.

ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳನ್ನು ಹತ್ತಿಕ್ಕಲು ನೈಜೀರಿಯಾದಲ್ಲಿ ಕ್ರಮ ಕೈಗೊಳ್ಳಲು ಸಿದ್ಧರಾಗುವಂತೆ ಅಮೆರಿಕದ ಸೇನೆಗೆ ಇದೇ ಸಂದರ್ಭದಲ್ಲಿ ಅವರು ಆದೇಶಿಸಿದ್ದಾರೆ.

ಎರಡೂ ದೇಶಗಳ ನಾಯಕತ್ವ ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು” ಅವಲಂಬಿಸಿದೆ ಎಂದು ಹೇಳುವ ಮೂಲಕ ಐಸಿಸ್ ಉಗ್ರ ಸಂಘಟನೆ ವಿರುದ್ದ ಮತ್ತಷ್ಟು ದಾಳಿಗಳನ್ನು ತಳ್ಳಿಹಾಕುವಂತಿಲ್ಲ ಎನ್ನುವ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಏತನ್ಮಧ್ಯೆ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಪ್ರತಿಕ್ರಿಯೆ ನೀಡಿ “ನೈಜೀರಿಯಾ ಸರ್ಕಾರದ ಬೆಂಬಲ ಮತ್ತು ಸಹಕಾರಕ್ಕಾಗಿ ಕೃತಜ್ಞರಾಗಿರುತ್ತದೆ ಎಂದು ತಿಳಿಸಿದ್ದಾರೆ.

ನೈಜೀರಿಯಾದ ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದರಲ್ಲಿ, ದೇಶದ ಅಧಿಕಾರಿಗಳು “ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರವಾದದ ನಿರಂತರ ಬೆದರಿಕೆಯನ್ನು ಪರಿಹರಿಸುವಲ್ಲಿ ಅಮೆರಿಕಾ ಸೇರಿದಂತೆ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ರಚನಾತ್ಮಕ ಭದ್ರತಾ ಸಹಕಾರದಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಹೇಳಿದರು.

ವಾಯುವ್ಯದಲ್ಲಿ ವಾಯುದಾಳಿಗಳ ಮೂಲಕ ನೈಜೀರಿಯಾದಲ್ಲಿನ ಭಯೋತ್ಪಾದಕ ಗುರಿಗಳ ಮೇಲೆ ನಿಖರವಾದ ದಾಳಿಗೆ ಕಾರಣವಾಗಿದೆ” ಎಂದು ಹೇಳಿಕೆ ತಿಳಿಸಿದೆ.

ಈ ನಡುವೆ ನೈಜೀರಿಯಾದ ವಿದೇಶಾಂಗ ಸಚಿವ ಯೂಸುಫ್ ಮೈತಮಾ ತುಗ್ಗರ್ ಪ್ರತಿಕ್ರಿಯಿಸಿ “ಭಯೋತ್ಪಾದಕರನ್ನು” ಗುರಿಯಾಗಿಸಿಕೊಂಡು ನಡೆಸಲಾದ “ಜಂಟಿ ಕಾರ್ಯಾಚರಣೆ”ಯಾಗಿದ್ದು, “ಒಂದು ನಿರ್ದಿಷ್ಟ ಧರ್ಮದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.