
ದಾವೋಸ್, ಜ.೨೪- ಇರಾನ್ ನಲ್ಲಿ ಪ್ರತಿಭಟನಾಕಾರರನ್ನು ಕೊಲ್ಲುವುದು ಅಥವಾ ಪರಮಾಣು ಕಾರ್ಯ ಕ್ರಮ ಪುನರಾರಂಭಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಗೆ ಖಡಕ್ ಎಚ್ಚರಿಕೆ ನೀಡಿದೆ.
ಟ್ರಂಪ್ ಹೇಳಿಕೆಗೆ ಇರಾನ್ ಕೂಡ ತಿರುಗೇಟು ನೀಡಿದ್ದು ಪರಸ್ಪರ ಎಚ್ಚರಿಕೆ, ತಿರುಗೇಟು ನೀಡಿರುವುದು ಅಂತರರಾಷ್ಟ್ರೀಯ ಉದ್ವಿಗ್ನತೆಗೆ ಕಾರಣವಾಗಿದೆ.
ಅಮೆರಿಕಾ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ ವಿಮಾನವಾಹಕ ನೌಕೆಯೊಂದು ಇರಾನ್ ಕಡೆಗೆ ಸಾಗುತ್ತಿದೆ. ’ಈ ಬಾರಿ, ನಾವು ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳುತ್ತೇವೆ ಎಂದು ಯುದ್ಧದೊಂದಿಗೆ ಎಂದು ಧಮ್ಕಿ ಹಾಕಿದ್ದಾರೆ
ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಬರುವ ವೇಳೆ ಏರ್ ಪೋರ್ಸ್ ಒನ್ ನಲ್ಲಿ ಸುದ್ಸಿಗಾರೊಂದಿಗೆ ಮಾತನಾಡಿದ ಅವರು ಇರಾನ್ ವಿರುದ್ಧ ನೇರ ಎಚ್ಚರಿಕೆ ನೀಡಿರುವುದು ಅಂತರರಾಷ್ಟ್ರೀಯ ಉದ್ವಿಗ್ನತೆ ಹೆಚ್ಚಿಸುವಂತೆ ಮಾಡಿದೆ.
“ಇರಾನ್ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ… ನಮ್ಮಲ್ಲಿ ಬಹಳಷ್ಟು ಹಡಗುಗಳು ಇರಾನ್ ಕಡೆ ತೆರಳುತ್ತಿವೆ. ನಮ್ಮ ಬಳಿ ದೊಡ್ಡ ನೌಕಾಪಡೆ ಇದೆ. ಇರಾನ್ ನಲ್ಲಿ ಪ್ರತಿಭಟನೆ ಮಂದುವರಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ
ಇರಾನ್ ತಿರುಗೇಟು
ಡೊನಾಲ್ಡ್ ಟ್ರಂಪ್‌ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಇರಾನಿನ ಹಿರಿಯ ಅಧಿಕಾರಿಯೊಬ್ಬರು ಇರಾನ್ ವಿರುದ್ಧ ಯಾವುದೇ ದಾಳಿಯನ್ನು “ಸಂಪೂರ್ಣ ಯುದ್ಧ” ಎಂದು ಪರಿಗಣಿಸುತ್ತದೆ ಎಂದು ಹೇಳಿದ್ದಾರೆ
“ಈ ಮಿಲಿಟರಿ ಜಮಾವಣೆ ನಿಜವಾದ ಮುಖಾಮುಖಿಗಾಗಿ ಉದ್ದೇಶಿಸಿಲ್ಲ ಎಂದು ಭಾವಿಸುತ್ತೇವೆ ಆದರೆ ಮಿಲಿಟರಿ ಕೆಟ್ಟ ಪರಿಸ್ಥಿತಿಗೆ ಸಿದ್ಧವಾಗಿದೆ. ಅದಕ್ಕಾಗಿಯೇ ಇರಾನ್‌ನಲ್ಲಿ ಎಲ್ಲವೂ ಹೆಚ್ಚಿನ ಎಚ್ಚರಿಕೆಯಲ್ಲಿದೆ ನಾವೂ ಗಮನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ
ಈ ಬಾರಿ ಯಾವುದೇ ದಾಳಿಯನ್ನು ಸೀಮಿತ, ಅನಿಯಮಿತ,, ಚಲನಶೀಲ ಸೇರಿದಂತೆ ಅದನ್ನು ಏನೇ ಕರೆದರೂ ನಮ್ಮ ವಿರುದ್ಧದ ಬಂದರೆ ಅದನ್ನು ಸಂಪೂರ್ಣ ಯುದ್ಧವೆಂದು ಪರಿಗಣಿಸುತ್ತೇವೆ. ಪರಿಹರಿಸಲು ನಾವು ಸಾಧ್ಯವಾದಷ್ಟು ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ” ಎಂದು ಗುಡುಗಿದ್ದಾರೆ.
ಇರಾನ್‌ನಲ್ಲಿ ಅಂತರರಾಷ್ಟ್ರೀಯ ಉದ್ವಿಗ್ನತೆ ಉಂಟುಮಾಡಿದ ಸರ್ಕಾರಿ ವಿರೋಧಿ ಪ್ರತಿಭಟನೆಗಳ ವೇಗ ಕಳೆದ ವಾರ ಕಡಿಮೆಯಾಯಿತು, ದೇಶದಿಂದ ಅಶಾಂತಿಯ ಇತ್ತೀಚಿನ ವರದಿಗಳು ಅಥವಾ ವೀಡಿಯೊಗಳು ಸೋರಿಕೆಯಾಗಿಲ್ಲ, ಏಕೆಂದರೆ ಹಲವು ದಿನಗಳಿಂದ ಇಂಟರ್ ನೆಟ್ ಸಂಪರ್ಕ ಕಡಿತಗೊಂಡಿತ್ತು ಉದ್ವಿಗ್ನತೆ ಹೆಚ್ಚುವಂತೆ ಮಾಡಿದೆ

























