ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಓರ್ವನ ಬಂಧನ

ಕಲಬುರಗಿ,ಮೇ.28-ಇಲ್ಲಿನ ಸುನೀಲ ನಗರದ ಫಿಲ್ಟರ್ ಬೆಡ್‍ನ ಹನುಮಾನ ಗುಡಿಯ ಹಿಂಭಾಗದ ಕಟ್ಟೆಯ ಮೇಲೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆಯ ಎಎಸ್‍ಐ ಶಿವಶರಣಪ್ಪ, ಸಿಬ್ಬಂದಿಗಳಾದ ಶಿವಾನಂದ, ಸುರೇಶ, ಮೋಸಿನ್, ಸೈಯದ್ ತೌಸಿಫ್ ಹುಸೇನ್ ಅವರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ಮಹಾರುದ್ರಪ್ಪ ತಂದೆ ಚನ್ನಮಲ್ಲಪ್ಪ ಗುಮ್ಮಾ (34) ಎಂಬಾತನನ್ನು ಬಂಧಿಸಿ 5 ಸಾವಿರ ರೂ.ನಗದು ಜಪ್ತಿ ಮಾಡಿದ್ದಾರೆ.
ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.