
ಕೋಲಾರ,ಮೇ.೪- ಬಿಜೆಪಿ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘವಾದ ೫೦ ವರ್ಷದ ಸೇವೆಯ ಗೌರವಾರ್ಥವಾಗಿ ಆಯೋಜಿಸಿರುವ ಅಭಿಮಾನೂತ್ಸವ ಕಾರ್ಯಕ್ರಮದಲ್ಲಿ ೫೦ ಮಠಗಳ ಶ್ರೀಗಳು ನೀಡುವ ಆಶೀರ್ವಾದ ಕಾರ್ಯಕ್ರಮಕ್ಕೆ ಕೋಲಾರ ತಾಲ್ಲೂಕಿನ ಶ್ರೀ ನಾಗಲಾಪುರ ಸಂಸ್ಥಾನ ಮಠದ ಷ.ಬ್ರ. ಶ್ರೀತೇಜೇಶಲಿಂಗ ಶಿವಚಾರ್ಯರನ್ನು ಆಹ್ವಾನಿಸಲು ಮಾಲೂರಿನ ಮಾಜಿ ಶಾಸಕ ಮಂಜುನಾಥ್ ಗೌಡರು ಇತ್ತೀಚೆಗೆ ನಾಗಲಾಪುರ ಮಠಕ್ಕೆ ಭೇಟಿ ನೀಡಿ ಮೇ ೯ ರಂದು ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಿ ಶ್ರೀಗಳಿಂದ ಅಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗ ಒಡೆಯರ್ ಹಾಗೂ ಇತರೇ ಭಕ್ತಾಧಿಗಳು ಹಾಜರಿದ್ದರು.

























