೧೫ ನಿಮಿಷದಲ್ಲಿ ಹೂಡಿಕೆದಾರರ ಸಂಪತ್ತು ೧೩ಲಕ್ಷ ಕೋಟಿ ವೃದ್ಧಿ

ಮುಂಬೈ, ಫೆ. ೩- ಭಾರತದ ಉತ್ಪನ್ನಗಳ ಮೇಲಿನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. ೧೮ಕ್ಕೆ ಇಳಿಸಿದ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ಇಂದು ವಹಿವಾಟು ಆರಂಭವಾದ ೧೫ ನಿಮಿಷದಲ್ಲೇ ಹೂಡಿಕೆದಾರರ ಸಂಪತ್ತು ೧೩ಲಕ್ಷ ಕೋಟಿ ವೃದ್ಧಿಯಾಗಿದೆ.


ವಿದೇಶಿ ಸಾಂಸ್ಥಿತಿಕ ಹೂಡಿಕೆದಾರರು ಮತ್ತೇ ಭಾರತದ ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಮಾರುಕಟ್ಟೆ (ಎನ್‌ಎಸ್‌ಸಿ) ಸೂಚ್ಯಂಕ ನಿಫ್ಟಿ ಏರಿಕೆಯಾಗಿದೆ.


ಷೇರು ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ ೩,೫೦೦ ಅಂಕ ಏರಿಕೆ ಕಂಡರೆ ನಿಫ್ಟಿ ೧,೨೦೦ ಅಂಕ ಏರಿಕೆ ಕಂಡಿತ್ತು. ಈ ಮೂಲಕ ಬಿಎಸ್‌ಸಿ ಪಟ್ಟಿ ಮಾಡಿದ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ೪೬೮.೩೨ ಲಕ್ಷ ಕೋಟಿ ರೂ.ಗಳಿಗೆ ಏರಿತು.


ಆರಂಭದಲ್ಲಿ ಅಮೆರಿಕಾ ಶೇ. ೨೫ ಸುಂಕ ವಿಧಿಸಿತ್ತು. ಭಾರತ- ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರತಿಯಾಗಿ ಶೇ. ೨೫ ರಷ್ಟು ದಂಡವಿಧಿಸಿತ್ತು. ಹೀಗಾಗಿ ಒಟ್ಟು ಸುಂಕ ೫೦ ರಷ್ಟು ಏರಿಕೆಯಾಗಿತ್ತು.


ವಿದೇಶಿ ಹೂಡಿಕೆದಾರರು ಮರಳಿ ಭಾರತಕ್ಕೆ ಬರುತ್ತಿರುವ ಕಾರಣ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ ಕಂಡಿದೆ. ಈ ಎಲ್ಲಾ ಕಾರಣದಿಂದಾಗಿ ಇಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯಾಗಿದೆ.