
ಕಮಲನಗರ:ಡಿ.೧೫: ಹೊಸ ಮಾನವೀಯ ಸಮಾಜ ಉದಯವಾಗಲು ಶೋಷಣೆಯ ಸಮಾಜಕ್ಕೆ ಕೊನೆಯಾಗಬೇಕಾದರೇ ಅಂತ:ಕರಣದಿAದ ಧರ್ಮ, ವಿಶ್ವರಕ್ಷಣೆಯ ಮಂತ್ರವಾಗಬೇಕು.ಹೀಗಾಗಿ ಅಂತ: ಕರಣವೇ ಹೊಸ ಸಮಾಜದ ತಾಯಿಬೇರು ಎಂದು ಹೂವಿನಶಿಗ್ಲಿ-ಸೋನಾಳ ವಿರಕ್ತಮಠದ ಪೀಠಾಧಿಪತಿ ಚನ್ನವೀರ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಸೋನಾಳ ಗ್ರಾಮದ ವಿರಕ್ತಮಠದಲ್ಲಿ ಲಿಂ.ನಿರAಜನ ಮಹಾಸ್ವಾಮೀಗಳವರ ೧೬ನೇ ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವ ಮತ್ತು ರಾಜ್ಯ ಮಟ್ಟದ ನಿರಂಜನ ಪ್ರಭು ಪ್ರಶಸ್ತಿ ಪ್ರಧಾನ ಪ್ರಯುಕ್ತ ಹಮ್ಮಿಕೊಳ್ಳಲಾದ ಅಕ್ಕಮಹಾದೇವಿ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪೂಜ್ಯರು ಮಾತನಾಡಿದರು.
ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಮಕ್ಕಳಿಗೆ ಪ್ರಸ್ತೂತ್ ಸಮಾಜದಲ್ಲಿ ಉತ್ತಮ ಸಂಸ್ಕಾರದಿAದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಎಲ್ಲರೂ ಕಾರಣಭೂತರು ಎಂದು ಕಳವಳ ವ್ಯಕ್ತಪಡಿಸಿದರು.
ಪ್ರವಚನಕಾರ ಗದುಗಿನ ಪ್ರವೀಣ ಶ್ರೀ ಶಿವಲಿಂಗ ಶಾಸ್ತ್ರೀ ಸಿದ್ಧಾಪುರ ಮಾತನಾಡಿ, ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಇವರು ಶರಣ ಚಳವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ. ಸಾಕ್ಷಾತ್ ಶಿವ (ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ ಎಂದು ವಿವರಿಸಿದರು.
ಪ್ರವಚನಕಾರ ಪ್ರವೀಣ, ಶರಣಯ್ಯ ಸ್ವಾಮಿ, ಮಲ್ಲಿಕಾರ್ಜುನ ಗವಾಯಿಗಳು ಹಿರೇಮಠ, ಬಾಲಾಜಿ ಕಟ್ಟಿಸಾಂಗವಿ, ಮುಖ್ಯಶಿಕ್ಷಕ ನಾಗರಾಜ, ಕಲ್ಯಾಣರಾವ ಬಿರಾದಾರ, ಶಿವಯೋಗಿ ಪಟವಾರಿ, ವಿಜಯಕುಮಾರ, ರಮೇಶ, ಶಾಂತಪ್ಪ, ಶಿವಕುಮಾರ ಸೇರಿದಂತೆ ಪ್ರಮುಖರು ಇದ್ದರು.

























