Home ಜಿಲ್ಲೆ ಮಲಘಾಣ ಸರಕಾರಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಮಲಘಾಣ ಸರಕಾರಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕೊಲ್ಹಾರ:ಜೂ.23: ಸಮೀಪದ ಸರಕಾರಿ ಪದವಿಪೂರ್ವ ಕಾಲೇಜು ಮಲಘಾಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗದ ಮಹತ್ವ ಕುರಿತು ಮಾತನಾಡಿದ ಪ್ರಾಂಶುಪಾಲ ಬಸವರಾಜ ಜಾಲವಾದಿ ವ್ಯಕ್ತಿತ್ವ ವಿಕಾರತೆಯಿಂದ ಅವನತಿ ಹೊಂದುತ್ತಿರುವ ಸಮಾಜದ ಪುನರುತ್ಥಾನ ಶಿಕ್ಷಣದಿಂದ ಮಾತ್ರ ಸಾಧ್ಯ .ಆ ಶಿಕ್ಷಣ ನಿಮ್ಮನ್ನು ಯೋಗದ ಕಡೆಗೆ ಕೊಂಡಯ್ಯಬೇಕು ಆ ಯೋಗ ಅಹಂಕಾರ ತುಂಬಿದ ಮತ್ತು ಪಾಪಕೃತ್ಯಗಳ ತುಂಬಿದ ಮನುಷ್ಯನ ವ್ಯಕ್ತಿತ್ವವನ್ನು ವಿಶಾಲಗೊಳಿಸುವು ದಾಗಿದೆ.

ಯೋಗದಿಂದ ನಿಮ್ಮನ್ನು ನೀವೇ ಮರು ರೂಪಿಸಿಕೊಳ್ಳುವುದಾಗಬೇಕು ನಿಮ್ಮ ಚೈತನ್ಯವು
ಉನ್ನತಸ್ಥಾಯಿಯಲ್ಲಿದ್ದರೆ ನಿಮ್ಮ ಶರೀರವು ಬಹಳ ಸುಲಭವಾಗಿ ಕೆಲಸ ಮಾಡುತ್ತದೆ. ದೈಹಿಕವಾಗಿ ಸಕ್ರಿಯವಾಗಿ ಮಾಡುವ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂದಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯಿಂದ ಬಳಲುತ್ತಿರುವವರಿಗೆ ಯೋಗ ಒಂದು ವರದಾನ ಎಂದರು. ಯೋಗವನ್ನು ದೇಹ ಮನಸ್ಸು ಮತ್ತು ಆತ್ಮವನ್ನು ಪುನರ್ ಯೌವ್ವನಗೊಳಿಸುವ ಸಾಮರಸ್ಯ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ ಇದು ವಿದ್ಯಾರ್ಥಿಗಳ ಏಕಾಗ್ರತೆಗೂ ಅನುಕೂಲವಾಗಿದೆ. ಅದರಲ್ಲೂ ಇಂತಹ ತಂತ್ರಜ್ಞಾನದ ಕಾಲಘಟ್ಟದಲ್ಲಿ ಯೋಗಕ್ಕೆ ಮೊರೆ ಹೋಗಬೇಕಾದ ಅವಶ್ಯಕತೆ ಇದೆ ಎಂದರು.
ಯೋಗದ ಮಹತ್ವ ಕುರಿತು ಅತಿಥಿ ಉಪನ್ಯಾಸಕರಾದ ಪಾಂಡುರಂಗ ಕರಾಬಿ, ದುರ್ಗೇಶ್ ಹಾಗೂ ಮಂಜುಳಾ ಮಾತನಾಡಿದರು.

ವಿದ್ಯಾರ್ಥಿನಿಯರಾದ ಸೌಮ್ಯ ಸೃಷ್ಟಿ, ಗಂಗೂಬಾಯಿ ಯೋಗದ ಮಹತ್ವದ ಕುರಿತು ತಮ್ಮ ಸಿದ್ದ ಭಾಷಣ ಮಾಡಿದರು. ಕುಮಾರಿಯರಾದ ದೀಪಾ ರೇಣುಕಾ ಹಾಗೂ ಲಕ್ಷ್ಮಿ ಪ್ರಾರ್ಥಿಸಿದರು. ಕುಮಾರಿಯರಾದ ಸುಧಾ, ಅಕ್ಷತಾ, ರಶ್ಮಿ ಸ್ವಾಗತಗೀತೆ ಹಾಡಿದರು. ಅತಿಥಿ ಉಪನ್ಯಾಸಕ ಯಲ್ಲಪ್ಪ ಹಳಬರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಉಪನ್ಯಾಸಕಿ ನಿಸರ್ಗ ಕಾಸ್ತರ್ ವಂದಿಸಿದರು. ಕುಮಾರ ದುಂಡಪ್ಪ ಹರಿಜನ ಹಾಗೂ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.