
ಕಮಲನಗರ:ಜೂ.೨೩:ಡಾ|| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ ಹಾಗೂ ಶ್ರೀ ಗುರಪ್ಪ ಟೊಣ್ಣೆ ಪ್ರಾಥಮಿಕ ಶಾಲೆ, ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯೋಗಪಟುಗಳಾದ ಶ್ರೀನಿವಾಸ ಪಟವಾರಿ ಆಗಮಿಸಿ ಯೋಗದ ಮಹತ್ವ ತಿಳಿಸುವುದರೊಂದಿಗೆ ಯೋಗಮಾಡುವ ವಿಧಾನವನ್ನು ಹೇಳಿಕೊಟ್ಟರು
ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಆಡಳಿತಾಧಿಕಾರಿಗಳಾದ ಚನ್ನಬಸವ ಘಾಳೆಯವರು ಯೋಗ ಮಾಡುವುದರಿಂದ ನಮಗೆ ಯಾವುದೆ ರೋಗಗಳು ಬರದಂತೆ ತಡೆಗಟ್ಟಬಹುದು ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು
ಶಾಲೆಯ ಶಿಕ್ಷಕಿಯಾದ ಪೂಜಾ.ಬಿ ಶಾಲಾಮಕ್ಕಳಿಂದ ಯೋಗ ನೃತ್ಯ ಮಾಡಿಸಿದರು
ಕ್ರಾರ್ಯಕ್ರಮದಲ್ಲಿ ಅತಿಥಿಗಳಾಗಿ ಪತ್ರಕರ್ತರಾದ ಮಾಹಾದೇವ ಬಿರಾದರ, ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ನಿಲಕಂಠ ಪಾಂಡ್ರೆ ದೈಹಿಕ ಶಿಕ್ಷಕರಾದ ಜ್ಞಾನೋಬಾ ಹಂಡೆ, ದೇವಿದಾಸ ಡಾಂಗೆ, ರಾಜಕುಮಾರ ರಾಂಪೂರೆ ಸೂರ್ಯಕಾಂತ ಭೋಸಗೆ ಹಾಗೂ ಶಾಲೆಯ ಶಿಕ್ಷಕರಾದ ಭರತ ನಂದನವರೆ, ಅರ್ಚನಾ ಮುಚಳಂಬೆ, ಪರಮೇಶ್ವರ ಕುಂದನ, ವಿವೇಕಾನಂದ ಬಿರಾದ, ಸೌಂದರ್ಯ ಶೇಖರ ಖೆಳಗೆ, ಮತ್ತು ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು