Home ಜಿಲ್ಲೆ ಲಿಂಗರಾಜಪ್ಪ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಲಿಂಗರಾಜಪ್ಪ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಬೀದರ್: ಮಾ.5:ನಗರದ ಹೊರವಯದಲ್ಲಿರುವ ಲಿಂಗರಾಜ ಅಪ್ಪ್ ತಾಂತ್ರಿಕ ಮಾಹದ್ಯಾಲಯದಲ್ಲಿ ,ನಡೆಸಲು ನೀಡಿ”ಎಂಬ ಈ ವರ್ಷದ ಶೀರ್ಷಿಕೆ ಅಡಿಯಲ್ಲಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ಶರಣಬಸವ ವಿಶ್ವವಿದ್ಯಾಲಯದ ಕುಲ ಸಚಿವರಾದ ಡಾಕ್ಟರ್ ಲಕ್ಷ್ಮೀಮಾಕ ಅವರು ಮಾತನಾಡಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ದಾಕ್ಷಾಯಿಣಿ ಅವ್ವಾಜಿ ಅವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ ಎಂದು ತಿಳಿಸಿದರು, ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟ ಮೊದಲ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ಈ ಸಂದರ್ಭದಲ್ಲಿ ತಿಳಿಸಿದರು ಕಾಯಕ ರತ್ನ ಪ್ರಶಸ್ತಿ ಭಾಜನರಾದ ಕರ್ನಾಟಕ ಮಹಿಳಾ ಸಹಕಾರ ಮಹಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಬೆಲ್ದಾಳೆ ಅವರು ಮಾತನಾಡಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ, ಮಹಿಳೆಯರು ಸ್ವಾಲಂಬಿಗಳಾಗಿ ಸಮಾಜದಲ್ಲಿ ಉತ್ತಮ ಕಾರ್ಯವನ್ನು ಮಾಡಲು ಈ ಸಂಸ್ಥೆಯು ಮೊದಲಿನಿಂದಲೂ ಮತ್ತು ನೀಡಿದೆ ಎಂದು ಸಂಸ್ಥೆಯ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದರು, ಕಾರ್ಯಕ್ರಮದ ಮುಖ್ಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಮಹಾವಿದ್ಯಾಲಯದ ನಿರ್ದೇಶಿಕೆಯಾದ ಡಾ. ಉಮಾತಾಯಿ ದೇಶಮುಖ ಅವರು ಮಾತನಾಡಿ ನಮ್ಮ ಸಂಸ್ಥೆವು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ಮಾಡಿದ್ದಕ್ಕಾಗಿ,ಈ ವರ್ಷದ ಕಾಯಕ ರತ್ನ ಪ್ರಶಸ್ತಿಯನ್ನು ಶ್ರೀಮತಿ ಶಕುಂತಲಾ ಬೆಲ್ದಾಳೆ ಅವರಿಗೆ ಮಹಾ ವಿದ್ಯಾಲಯದಿಂದ ನೀಡಿ ಗೌರವಿಸಲಾಯಿತು, ಮಹಿಳಾ ಸಮಾಜಕ್ಕೆ ವಿಶೇಷವಾದ ಸೇವೆ ಸಲ್ಲಿಸದಕ್ಕಾಗಿ ಸ್ತ್ರೀ ರತ್ನ ಪ್ರಶಸ್ತಿಯನ್ನು ತಲ್ವಾಡೇ ಗ್ರೂಪ್ ಆಫ್ ಹಾಸ್ಪಿಟಲ್ ನ ನಿರ್ದೇಶಕರಾದ ಶ್ರೀಮತಿ ಶೈಲಜಾ ಅನಿಲ್ ಕುಮಾರ್ ತಲ್ವಡೇ ಅವರಿಗೆ ನೀಡಿ ಗೌರವಿಸಲಾಯಿತು, ಸ್ತ್ರೀ ತ್ರಗ್ನರಾಗಿ ವಿಶೇಷವಾಗಿ ಸಮಾಜ ಸೇವೆ ಮಾಡಿದಕ್ಕಾಗಿ ಮಹಾವಿದ್ಯಾಲಯದ ನಿರ್ದೇಶಿಕೀಯದ ಡಾ. ಉಮಾತಾಯಿ ದೇಶಮುಖ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು, ಮುಂಜಾನೆಯ ಅವಧಿಯಲ್ಲಿ ಡಾ. ಶಿಲ್ಪಾ ಬುಳ್ಳ ಮಹಿಳೆಯರ ಆರೋಗ್ಯದ ಬಗ್ಗೆ ವಿಚಾರಗೋಷ್ಠಿಯನ್ನು ನಡೆಸಿಕೊಟ್ಟರು,ಕೊನೆಯಲ್ಲಿ ವಿದ್ಯಾರ್ಥಿನಿಯರಿಗೆ ಆಯೋಜಿಸಲಾದ ವಿಶೇಷ ಸ್ಪರ್ಧೆಗಳಾದ ಪ್ರಬಂಧ ರಂಗೋಲಿ ಕುಕ್ ವಿಥೌಟ್ ಫೈರ್ ಮತ್ತು ಬೆಸ್ಟ್ ಆಫ್ ವೇಸ್ಟ್ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು . ಪ್ರಾಂಶುಪಾಲರಾದ ಡಾ. ವಿನೀತಾ ಪಾಟೀಲ್ ಅವರು ಸ್ವಾಗತಿಸಿದರು,ಎಲ್ಲಾ ವಿಭಾಗದ ಮುಖ್ಯಸ್ಥರು ಅಧ್ಯಾಪಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು , ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪೆÇ್ರಫೆಸರ್ ದೀಪಿಕಾ ಅವರು ನಿರೂಪಿಸಿ ವಂದಿಸಿದರು