ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ ಆಚರಣೆ

ವಿಜಯಪುರ,ಜು.4: ತಾಲೂಕಿನ ನಾಗಠಾಣ ಗ್ರಾಮದಲ್ಲಿ ಗುರುವಾರ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ ಆಚರಿಸಲಾಯಿತು.
ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ, ಶ್ರೀನಿಧಿ ಬಂಡೆ, ಸಾಕ್ಷಿ, ದೀಪಾ, ದುಂಡಮ್ಮ, ಸಾನ್ವಿ, ಸನ್ನಿಧಿ ಅವರು ಬಟ್ಟೆಯ ಕೈಚೀಲಗಳನ್ನು ಪ್ರದರ್ಶಿಸಿ, ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು ಆಚರಿಸಿದರು.
ಇದು ಪ್ಲಾಸ್ಟಿಕ್ ಚೀಲಗಳನ್ನು ನಿರ್ಮೂಲನೆ ಮಾಡುವ ಮತ್ತು ಸುಸ್ಥಿರ ಪರ್ಯಾಯಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಜಾಗತಿಕ ಉಪಕ್ರಮವಾಗಿದೆ. ಈ ದಿನವು ಪ್ಲಾಸ್ಟಿಕ್ ಚೀಲಗಳ ಪರಿಸರ ಪರಿಣಾಮವನ್ನು ಎತ್ತಿ ತೋರಿಸುತ್ತದೆ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ನಮ್ಮನ್ನು ಪೆÇ್ರೀತ್ಸಾಹಿಸುತ್ತದೆ.