
ಕನಕಪುರ.ಫೆ೨೨:ವಿಶ್ವದ್ಯಾಂತ ಮಾತೃಭಾಷೆ ಸಾಂಸ್ಕೃತಿಕ ವೈವಿದ್ಯತೆ ಹಾಗೂ ಬಹು ಭಾಷೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಮಾತೃಭಾಷೆ ದಿನದಾನಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ. ನಮನ ಚಂದ್ರು ತಿಳಿಸಿದ್ದಾರೆ.
ತಾಲೂಕಿನ ಹೊಸಕೋಟೆ ಮೋರಾಜಿ ದೇಸಾಯಿ ಉನ್ನತೀಕರಿಸಿದ ವಸತಿ ಶಾಲೆ ಸಭಾಂಗಣದಲ್ಲಿ ಮಾತೃ ಶ್ರೀ ನಮನ ಚಾರಿಟಬಲ್ ಟ್ರಸ್ಟ್ ಕನಕಪುರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಕೈಗಾರಿಕೀಕರಣ ಮತ್ತು ಜಾಗರೀಕರಣದ ಹಾವಳಿಯಿಂದಾಗಿ ಸ್ಥಳೀಯ ಖಾಸಗಿ ವಿದ್ಯಾ ಸಂಸ್ಥೆ ಕೈಗಾರಿಕೆಗಳಲ್ಲಿ ಇತರೆ ಭಾಷಿಕರು ಹೆಚ್ಚಾಗಿದ್ದು ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡದೆ ಪರಭಾಷಿಕರ ಹಾವಳಿಯಿಂದಾಗಿ ಕನ್ನಡ ಭಾಷೆಗೆ ಪೆಟ್ಟಾಗುತ್ತಿದ್ದು ಇಂತಹ ಸಂದರ್ಭಧಲ್ಲಿ ಖಾಸಗಿ ಸಂಸ್ಥೆಗಳು ಪರಿಣಾಮಕಾರಿಯಾಗಿ ತಮ್ಮ ನೌಕರರು ಮತ್ತು ಸಿಬ್ಬಂದಿಗಳಿಗೆ ಕನ್ನಡ ಕಲಿಕಾ ಶಿಭಿರಗಳನ್ನು ಆಯೋಜಿಸಿ ತಮ್ಮ ಕನ್ನಡ ಪ್ರೇಮ ಮತ್ತು ಬದ್ಧತೆತೋರಿಸುವಂತಾಗಲಿ ಎಂದು ಅಭಿಪ್ರಾಯಪಟ್ಟರು.
ಮೂರಾರ್ಜಿ ದೇಸಾಯಿ ಉನ್ನತಿಕರಿಸಿದ ವಸತಿ ಶಾಲೆ ಪ್ರಾಂಶುಪಾಲ ಬಿ.ಸಿ. ಹನುಮೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕನ್ನಡ ಮಾತೃಭಾಷೆಯನ್ನು ಶ್ರೀಮತ ಗೊಳಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರದು ಎಂದರು
ಮರಳೆಗವಿ ಮಠದ ಭೂಗೋಳಶಾಸ್ತ್ರ ಉಪನ್ಯಾಸಕ ನಗೆ ಮಳೆರಾಜ, ಸಿ.ಚಂದ್ರಾಜ್ ಉಪನ್ಯಾಸ ನೀಡಿ ಕಲಿಯೋಕೆ ಕೋಟಿ ಭಾಷೆಯಾದರೂ ಸರ್ವರನ್ನು ಪ್ರೀತಿಸುವ ನಮ್ಮ ಕನ್ನಡ ಭಾಷೆ ಶ್ರೇಷ್ಠ ಎಂದರು.
ಕಾರ್ಯಕ್ರಮದ ಅಂಗವಾಗಿ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಗಾಯಕರಾದ ಸಿದ್ಧಾರ್ಥ ಹೆಚ್‌ಎಸ್. ಲೋಕೇಶ್, ಬಿಂದು, ಪಿ.ಪುನೀತ್ ಸಂಗಡಿಗರಿಂದ ಜಾನಪದ ಗೀತಗಾಯನ ನಡೆಸಿಕೊಟ್ಟರು.
























