Home ಜಿಲ್ಲೆ ಕಲಬುರಗಿ ಅಂತಾರಾಷ್ಟ್ರೀಯ ಸಹಕಾರ, ಸೌಹಾರ್ದತೆ,ಶಾಂತಿ ಅಗತ್ಯ

ಅಂತಾರಾಷ್ಟ್ರೀಯ ಸಹಕಾರ, ಸೌಹಾರ್ದತೆ,ಶಾಂತಿ ಅಗತ್ಯ

ಕಲಬುರಗಿ :ಫೆ.23: ವಿಶ್ವ ಅಭಿವೃದ್ಧಿ, ಆರ್ಥಿಕ ಸ್ಥಿರತೆಗಾಗಿ ಅಂತಾರಾಷ್ಟ್ರೀಯ ಸಹಕಾರ, ಸೌಹಾರ್ದೆತೆ, ಶಾಂತಿ ಅಗತ್ಯವಾಗಿದೆ. ಭಯೋತ್ಪಾಸನೆಯನ್ನು ಮಟ್ಟಹಾಕಲು ಎಲ್ಲಾ ರಾಷ್ಟ್ರಗಳು ಕೈಜೋಡಿಸಬೇಕು. ಜಾಗತಿಕ ಶಾಂತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿ, ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕನಲ್ಲಿನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ಅಂತಾರಾಷ್ಟ್ರೀಯ ಶಾಂತಿ ಮತ್ತು ತಿಳುವಳಿಕೆ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು. ಈ ದಿನವು ಸೇವೆ, ನೈತಿಕ ನಾಯಕತ್ವ ಮತ್ತು ಅಂತರರಾಷ್ಟ್ರೀಯ ಸಹಕಾರದ ಮೂಲಕ ಜಾಗತಿಕ ಶಾಂತಿಯನ್ನು ನಿರ್ಮಿಸಲು ಇದು ಒತ್ತು ನೀಡುತ್ತದೆ. ‘ರೋಟರಿ ಇಂಟನ್ರ್ಯಾಷನಲ್’ನ ‘ವಿಶ್ವ ತಿಳುವಳಿಕೆಯ ಮಾಸ’ದ ಒಂದು ಭಾಗವಾಗಿದೆ.ಯುದ್ಧ ಸಂಘರ್ಷ ನಿಲ್ಲಲಿ, ಶಾಂತಿ, ಮಾನವೀಯತೆ ನೆಲಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್. ಬಿರಾದಾರ, ಓಂಕಾರ ವಠಾರ, ಮಹಾದೇವಪ್ಪ ಎಚ್.ಬಿರಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.