ರೈತರ ಹಿತದೃಷ್ಟಿಯಿಂದ ಮಧ್ಯಂತರ ಹೋರಾಟ ಕೈ ಬಿಡಲಾಗುತ್ತಿದೆ ; ಮಾಲಿಕಯ್ಯಾ ಗುತ್ತೇದಾರ

ಅಫಜಲಪುರ:ನ.20: ಕಬ್ಬಿನ ಬೆಲೆ ಹೆಚ್ಚಳಕ್ಕಾಗಿ ತಾಲೂಕಿನ ರೈತರು ಧರಣಿ ನಡೆಸಿದ್ದಕ್ಕೆ 3,165ರೂ. ಬೆಲೆ ನಿಗದಿಯಾಗಿದ್ದರೂ, ಈ ಕೊಡಲು ಒಪ್ಪದ ಕಾರ್ಖಾನೆ ವಿರುದ್ದ ಧರಣಿಗೆ ಮುಂದಾಗಿದ್ದರೈತ ಮುಖಂಡರಿಗೆ ಕೃಷಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಧರಣಿ ಕೈಬಿಡುವಂತೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ
ಮನವಿ ಮಾಡಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಸಂಘಟಿತ ರೈತ ಸಂಘಟನೆಯಿಂದ ಸಕ್ಕರೆ ಕಾರ್ಖಾನೆ
ಯವರು ರೈತರಿಗೆ ನಿರಂತರವಾಗಿ ಮೋಸ ಮಾಡುತ್ತಲೆ ಬರುತ್ತಿದ್ದಾರೆ. ಇದನ್ನು ವಿರೋಧಿಸಿ ಸ್ವಾಭಿಮಾನಿ ರೈತ
ಮುಖಂಡರು ಅನಿರ್ದಿಷ್ಟ ಧರಣಿ ಕೈಗೊಂಡು ಒತ್ತಡ ಹೇರಿದ್ದಕ್ಕೆ ಕಾರ್ಖಾನೆಯವರು 3,165ರೂ. ನೀಡಲು ಒಪ್ಪಿದ್ದರು.

ಈಗ ಒಪ್ಪಿದ ಬೆಲೆಯನ್ನು ಕೊಡದಕ್ಕೆ ಮತ್ತೇ ಹೋರಾಟಕ್ಕೆ ಮುಂದಾದರೆ ಕಟಾವಿಗೆ ಬಂದಿರುವ ಕಬ್ಬು ಹಾಳಾಗಲಿದೆ. ಹೀಗಾಗಿ ಸರಕಾರ ಆದೇಶಿಸಿದ ಬೆಲೆಗೆ ಒಪ್ಪದ ಕಾರ್ಖಾನೆಯವರ ನಡೆಯನ್ನು ಮುಖ್ಯಮಂತ್ರಿಗಳೊಂದಿಗೆ
ಚರ್ಚಿಸಿ ಹೆಚ್ಚಿನ ಬೆಲೆ ಕೊಡಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ
ನಿರಂತರ ಸಭೆ ನಡೆಸಿ 3,000 ರೂ. ಬೆಲೆಗೆ ಒಪ್ಪಿಸಿದ್ದಾರೆ. ಅಲ್ಲದೇ ಮನವಿಗೆ ಸ್ಪಂದಿಸಿ ಧರಣಿ ಕೈಬಿಟ್ಟ ರೈತ ಮುಖಂಡರಿಗೆ ಧನ್ಯವಾದ ಎಂದು ತಿಳಿಸಿದರು.

ರೈತ ಮುಖಂಡರಾದ ಶ್ರೀಮಂತ ಬಿರಾದಾರ, ಗುರು ಚಾಂದಕವಟೆ ಮಾತನಾಡಿ, ತಾಲೂಕಿನ ರೈತರೆಲ್ಲರೂ ಸೇರಿ ಕಬ್ಬಿನ ಬೆಲೆ ಹೆಚ್ಚಳ ಮಾಡುವಂತೆ ಧರಣಿ
ಮಾಜಿ ಸಚಿವರು ನಾವು ಮಾಡಿದ್ದೆವು. ಶಾಸಕರು, ಅಧಿಕಾರಿಗಳು ಬೆಲೆ ಹೆಚ್ಚಳದ ಆದೇಶ ಪತ್ರದ ಮೂಲಕ ಧರಣಿ ಸ್ಥಳಕ್ಕೆ 3,165 ನೀಡಲಾಗುವುದು.
ಬೆಲೆ ಒಪ್ಪದ ಕಾರ್ಖಾನೆಯವರನ್ನು ಒಪ್ಪಿಸಲಾಗುವುದು ಎಂದಾಗ ಧರಣಿ ಕೈಬಿಡಲಾಗಿತ್ತು. ಆದರೆ ಏಕಾಏಕಿ ಕಾರ್ಖಾನೆಯವರು 3,000ರೂ.ಗೆ ಒಪ್ಪಿದ್ದಾರೆ. ಸದ್ಯದ
ಮಟ್ಟಿಗೆ ರೈತರು ಕಬ್ಬ ಕಟಾವು ಮಾಡುತ್ತಿದ್ದಾರೆ. ಸರಕಾರದ ಆದೇಶ ಪತ್ರದಂತೆ ನಾವು ಕಾನೂನಾತ್ಮಕ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದರು.

ಮುಖಂಡರಾದ ರಮೇಶ ಶೆಟ್ಟಿ ಚಿದಾನಂದ ಮಠ, ಶಾಂತು ಅಂಜುಟಗಿ, ಬಸಣ್ಣ ಗುಣಾರಿ, ರಾಚಯ್ಯ ಮಠ, ಲತೀಪ್ ಪಟೇಲ್, ಗುರುಲಿಂಗಪ್ಪ ನಿರೋಣಿ, ಕಲ್ಲಪ್ಪ ಪ್ಯಾಟಿ, ರಮೇಶ ಪಾಟೀಲ ಹವಳಗಾ, ಅಣ್ಣಾರಾಯಗೌಡ
ಪಾಟೀಲ, ಬಸವರಾಜ ಪಾಟೀಲ, ದತ್ತುಗೌಡ ಪಾಟೀಲ, ಗುರುದತ್ತ ಹಳ್ಳಿ, ಮಲ್ಲಣ್ಣಗೌಡ ಪಾಟೀಲ, ನಬಿಲಾಲ್
ಮಾಶಾಳಕರ್, ಮಹಾಂತಗೌಡ ಪಾಟೀಲ ಗೌರ, ಬಸುವರಾಜ ಕಲಶೆಟ್ಟಿ ಆನೂರ ಇನ್ನಿತರರು ಇದ್ದರು.