
ಕಲಬುರಗಿ:ನ.2:ಪ್ರತಿ ಮಗುವಿನಲ್ಲೂ ಒಂದು ವಿಶೇಷ ಪ್ರತಿಭೆ ಇದೆ, ಮಕ್ಕಳ ಸವಾರ್ಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಂಗೀತ, ಚಿತ್ರಕಲೆ, ಕ್ರೀಡೆ, ನೃತ್ಯಗಳಂತಹ ಚಟುವಟಿಕೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ಡಾ.ಎಸ್.ಎಂ.ನೀಲಾ ಹೇಳಿದರು.
ಕನ್ನಡ ರಾಜ್ಯೋತ್ಸವ ನಿಮಿತ್ತ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಆಯೋಜಿಸಿದ ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆಯ ಮುಖ್ಯ ಅತಿಥಿಗಳಾಗಿ ಖ್ಯಾತ ಚಿತ್ರಕಲಾವಿದ ಡಾ.ಎಸ್.ಎಂ.ನೀಲಾ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ದಿನಗಳಲ್ಲಿಯೇ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪೆÇೀಷಕರು ಹಾಗೂ ಶಿಕ್ಷಕರು ಬೆಳೆಸಬೇಕು ಎಂದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆಯಚಿತ್ರಕಲಾ ವಿಷಯ ಪರಿವೀಕ್ಷಕರಾದ ಶಿವಾನಂದ ಕೊಪ್ಪದ ಮಾತನಾಡಿ ಮಕ್ಕಳು ನೌಕರಿ ಪಡೆಯಲು ಓದದೇ, ಉತ್ತಮ ನಾಗರಿಕರಾಗಲು ಓದಬೇಕು. ನಮ್ಮ ಭಾಷೆ, ಕಲೆ, ಸಂಸ್ಕøತಿ, ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ಅರಿಯಬೇಕು ಎಂದು ಹೇಳಿದರು.
ಕಿರಿಯರ ವಿಭಾಗದಲ್ಲಿ ಸೆಂಟ್ ಮೇರಿ ಶಾಲೆಯ ಅಂಚನ್ ವೆಂಕಟೇಶ ಪ್ರಥಮ,ತಜೆಸ್ವಿನಿ ಮಾನಾಜೀ ತೃತೀಯ ಹಾಗೂ ವಿವಿಎನ್ ಶಾಲೆಯ ಕೃತಿಕಾ ರಾಜು ದ್ವಿತೀಯಬಹುಮಾನ ಪಡೆದರು.
ಹಿರಿಯರ ವಿಭಾಗದಲ್ಲಿ ಎಸ್.ಬಿ ಆರ್ ಶಾಲೆಯ ಕೃತಿಕಾ ಕೋಬಾಳ ಪ್ರಥಮ,ವಿವಿಎನ್ ಶಾಲೆಯ ಸಾನ್ವಿ ಸಂತೋಷದ್ವಿತೀಯ ಹಾಗೂ ರಕ್ಷಿತಾ ಅರವಿಂದ ತೃತೀಯ ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಒಟ್ಟು 138 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಅಂಬಿಕಾ ರೆಡ್ಡಿ, ಚಿತ್ರಕಲಾ ಶಿಕ್ಷಕಿ ಸುಖದೇವಿ, ವಿವಿಧ ಶಾಲೆಗಳ ಶಿಕ್ಷಕರು, ಪೆÇೀಷಕರು, ಹಾಗೂ ಮಕ್ಕಳು ಉಪಸ್ಥಿತರಿದ್ದರು.

























