
ಬೀದರ:ಮಾ.21:ಬಲಗೈ ಸಮುದಾಯದ ನಾಯಕರಿಗೆ ಅವಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಸ್ವಯಂ ದೂರು ದಾಖಲಿಸಲು ಬೀದರ ನ್ಯೂಟೌನ್ ಪೆÇಲೀಸ್ ಠಾಣೆಯ ಸಿ.ಪಿ.ಐ ವಿಜಯಕುಮಾರ ಬಾವುಗೆ ಅವರಿಗೆ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ, ಬೀದರ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಸಮಿತಿಯವರು ಮಾರ್ಚ್ 19, 2026 ರಂದು ಸಲ್ಲಿಸಿದ ಮನವಿಯಲ್ಲಿ, ಮಾದಿಗ ದಂಡೋರಾ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಮಂದಕೃಷ್ಣ ಮಾದಿಗ ಅವರು ಮಾರ್ಚ್ 12, 2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಸಭೆಯಲ್ಲಿ ನೀಡಿದ ಹೇಳಿಕೆಗಳಿಂದ ಬಲಗೈ ಸಮುದಾಯಕ್ಕೆ ಅವಮಾನ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಹಾಗೆಯೇ, ಕರ್ನಾಟಕದ ಭಾಸ್ಕರ್ ಪ್ರಸಾದ್ ಎಂಬ ಫೇಸ್‍ಬುಕ್ ಖಾತೆಯ ವ್ಯಕ್ತಿ ದಿನನಿತ್ಯ ಬಲಗೈ ಸಮುದಾಯದ ನಾಯಕರಾದ ಡಾ. ಹೆಚ್.ಸಿ. ಮಹಾದೇವಪ್ಪ, ಡಾ. ಜಿ. ಪರಮೇಶ್ವರ ಹಾಗೂ ಪ್ರಿಯಾಂಕ ಖರ್ಗೆ ಅವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುತ್ತಿದ್ದಾರೆ ಎಂದು ದೂರಲಾಗಿದೆ.
ಇನ್ನೋರ್ವ ವ್ಯಕ್ತಿಯಾದ ಅರುಣಕುಮಾರ ವಕೀಲರು ಸಹ ಫೇಸ್‍ಬುಕ್ ಲೈವ್, ಪತ್ರಿಕಾ ಗೋಷ್ಠಿ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಜಾತಿ ವೈಷಮ್ಯ ಉಂಟುಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಪರಿಶಿಷ್ಟ ಜಾತಿಗಳಾದ ಹೊಲೆಯರು ಮತ್ತು ಮಾದಿಗರ ನಡುವೆ ಅಶಾಂತಿ ಉಂಟಾಗುತ್ತಿದೆ ಎಂದು ಸಮಿತಿ ತಿಳಿಸಿದೆ.
ಇದಲ್ಲದೆ, ಮಾರ್ಚ್ 6, 2026 ರಂದು ಬೀದರದಲ್ಲಿ ಎಡಗೈ ಸಮುದಾಯದ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಅವರ ಭಾವಚಿತ್ರಗಳನ್ನು ದಹನ ಮಾಡಲಾಗಿದೆ ಎಂಬುದನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಂವಿಧಾನಾತ್ಮಕವಾಗಿ ಹಕ್ಕುಗಳಿಗಾಗಿ ಹೋರಾಟ ನಡೆಸಲು ಎಲ್ಲರಿಗೂ ಅವಕಾಶವಿದ್ದರೂ, ಜಾತಿ ಆಧಾರಿತ ನಿಂದನೆ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು ಸರಿಯಲ್ಲ. ಆದ್ದರಿಂದ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಸ್ವಯಂ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಮಹೇಶ್ ಗೋರನಾಳಕರ್, ಕರ್ನಾಟಕ ರಾಜ್ಯ ಬಲಗೈ ಒಕ್ಕೂಟದ ಕಲಬುರಗಿ ವಿಭಾಗೀಯ ಅಧ್ಯಕ್ಷ ಪ್ರದೀಪ್ ಜಂಜಿರೆ, ಕಾರ್ಯಕಾರಿ ಸದಸ್ಯರಾದ ಪವನ ಮಿಠಾರೆ, ಪ್ರಕಾಶ ರಾವಣ, ರಾಹುಲ್ ಡಾಂಗೆ, ಭೀಮರಾವ ಮಾಲಗತ್ತಿ, ಸೂರ್ಯಕಾಂತ ಸಾದುರೆ, ಅರುಣ ಪಟೇಲ್ ಸೇರಿದಂತೆ ಪ್ರಮುಖರಾದ ರಾಜಕುಮಾರ ಮೂಲಭಾರತಿ, ಚಂದ್ರಕಾಂತ ನಿರಾಟೆ, ದೇವೇಂದ್ರ ಚಿದ್ರಿ, ದೀಲಿಪ್ ಭೋಸ್ಲೆ, ರವಿ ವಾಘಮಾರೆ, ಸಂಜುಕುಮಾರ ಮೇತ್ರೆ, ಶಿವಕುಮಾರ ತುಂಗಾ, ಮುಕೇಶ್ ರಾಯ್, ವಿಷ್ಣುವರ್ಧನ್ ವಾಲ್ದೊಡ್ಡಿ, ವಿಶಾಲ ದೊಡ್ಡಿ, ರಾಜಕುಮಾರ ಗೂನಳ್ಳಿ, ದೀಲಿಪ್ ವರ್ಮಾ, ಶಿವಮೂರ್ತಿ ಸುಬಾನೆ, ಶ್ರೀಕಾಂತ ಭವಾನಿ, ಗೌತಮ ಭೋಸ್ಲೆ, ಸುಬ್ಬಣ್ಣಾ ಕರಕನಳ್ಳಿ, ರವಿ ಚಿದ್ರಿ, ವಿಶ್ವನಾಥ ಗಾಯಕವಾಡ, ನಾಗೇಶ ಗಾಯಕವಾಡ, ನರಸಿಂಗ ಸಾಮ್ರಾಟ, ಪ್ರವೀಣ ಕರಂಜೆ, ಶರಣಪ್ಪ ರಾಜಪೂರೆ, ಪ್ರಲಾದ ಮಾಲೆಕರ್, ರಘುನಾಥ ಶಿಂದೆ, ಗೌತಮ ಮುತಂಗಿಕರ್, ಪ್ರೀತಮ್ ಅರ್ಜುನ, ಲಕ್ಷ್ಮಣ ಶೆರಿಕರ್, ರಾಜಶೇಖರ ಸಾಗರ, ಚಂದ್ರಕಾಂತ ನಿಡೊದಾ ಸೇರಿದಂತೆ ಅನೇಕರು ಪತ್ರಕ್ಕೆ ಸಹಿ ಹಾಕಿ ಒತ್ತಾಯಿಸಿದ್ದಾರೆ.




















