Home ಜಿಲ್ಲೆ ಕಲಬುರಗಿ ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್ ನೆಲದಲ್ಲಿ ಖರ್ಗೆಅವರಿಗೆ ಅವಮಾನಿಸಿರುವುದು ಹೀನ ಕೃತ್ಯ: ಪ್ರೊ. ಪೋತೆ

ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್ ನೆಲದಲ್ಲಿ ಖರ್ಗೆಅವರಿಗೆ ಅವಮಾನಿಸಿರುವುದು ಹೀನ ಕೃತ್ಯ: ಪ್ರೊ. ಪೋತೆ

ಕಲಬುರಗಿ: ಡಾ. ಬಿ. ಆರ್. ಅಂಬೇಡ್ಕರ್ ಅವರು ಕೇವಲ ಶೋಷಿತರಿಗೆ ಮಾತ್ರ ಸಂವಿಧಾನ ಬರೆದಿಲ್ಲ. ಪ್ರತಿಯೊಬ್ಬ ವ್ಯಕ್ತಿ ಕೂಡ ಸಂವಿಧಾನದ ಸೌಲಭ್ಯ ಅನುಭವಿಸುತ್ತಿದ್ದಾನೆ. ಸಂವಿಧಾನ ರಕ್ಷಕರಾಗಿ ಶ್ರಮಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನಿಸಿರುವುದು ಬುದ್ಧ-ಬಸವ-ಗಾಂಧಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ನೆಲದಲ್ಲಿ ನಡೆದ ಹೀನ ಕೃತ್ಯವಾಗಿದೆ, ಪ್ರಜ್ಞಾವಂತರೆಲ್ಲರು ಈ ನಿಟ್ಟಿನಲ್ಲಿ ಯೋಚಿಸುವುದು ಅಗತ್ಯವಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನರು ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪೆÇ್ರ. ಎಚ್. ಟಿ. ಪೆÇೀತೆ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ ‘ಕನ್ನಡ ಸಾಹಿತ್ಯ ಮತ್ತು ಅಸ್ಪøಶ್ಯತೆ: ಸಮಕಾಲೀನ ತಲ್ಲಣಗಳು’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಮನುಸ್ಮøತಿ ಸುಡುವ ಹಾಗೂ ಮಾಹಡ್ ಚಳವಳಿಗೆ ಈಗ ನೂರು ವರ್ಷಗಳಾಗಿವೆ. ಹುಟ್ಟಿನಿಂದ ಸಂಕಟ, ಅವಮಾನ, ಅಪಮಾನ ಅನುಭವಿಸಿದ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಇಂದಿಗೂ ಅವಮಾನಿಸಲಾಗುತ್ತಿದೆ. ಸಾಂಪ್ರದಾಯವಾದಿಗಳ ವ್ಯವಸ್ಥೆ ಮತ್ತು ಗುಲಾಮಗಿರಿಯಿಂದ ಹೊರಬಂದು ಅನ್ಯಾಯ ಮತ್ತು ಅವಮಾನಗಳನ್ನು ಖಂಡಿಸದಿದ್ದರೆ ಶೋಷಣೆಯಿಂದ ಮುಕ್ತಿ ಸಾಧ್ಯವಿಲ್ಲ ಎಂದರು.
ವೈಚಾರಿಕ ಚಿಂತಕ ಹಾಗೂ ಶರಣ ಸಾಹಿತಿ ಡಾ. ಜೆ. ಎಸ್. ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿ ಭಾರತ ಸಂಘÀರ್ಷ ಮತ್ತು ಚಳವಳಿಗಳ ನೆಲ. ಮನುಸ್ಮøತಿ ನೆಲೆಯಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ಅಸ್ಪøಶ್ಯರ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಇಡೀ ವ್ಯವಸ್ಥೆಯನ್ನು ತಾರತಮ್ಯ ನೆಲೆಯಲ್ಲಿ ಕಟ್ಟಿ ಹಾಕುವ ಹುನ್ನಾರ ಹೆಚ್ಚಾಗುತ್ತಿದೆ. ಕಲಬುರಗಿಯ ಪ್ರಜ್ಞಾವಂತ ಸಮಾಜದ ಬುದ್ದಿಜೀವಿಗಳು, ಹೋರಾಟಗಾರರು ಧ್ವನಿ ಮಾಡದಿರುವುದು ವಿಷಾದಕರ ಸಂಗತಿ. ಬುದ್ಧ, ಬಸವಣ್ಣನ ಕಾಲದಿಂದಲೂ ಸಮಾನತೆಯ ಸಮಾಜಕ್ಕಾಗಿ, ಶೋಷಿತರ ಏಳಿಗೆಗಾಗಿ ಚಳವಳಿ ನಡೆದಿವೆ. ಅನ್ಯಾಯಗಳ ವಿರುದ್ಧ ಧ್ವನಿ ಮಾಡದೆ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಮನುಷ್ಯ ಸಮಾಜದ ದೈನಂದಿನ ಬದುಕಿಗೆ ಬೇಕಾದ ಜ್ಞಾನವನ್ನು ಶರಣರು ಕೊಟ್ಟಿದ್ದಾರೆ. ಅದನ್ನು ಅನುಸರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಡಾ. ಎಂ.ಬಿ.ಕಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿರು. ಕಾರ್ಯಕ್ರಮದಲ್ಲಿ ಸಂದರ್ಶಕ ಪ್ರಾಧ್ಯಾಪಕ ಡಾ. ಸೂರ್ಯಕಾಂತ್ ಸುಜ್ಯಾತ್, ವಿವಿಧ ವಿಭಾಗಗಳ ಅಧ್ಯಾಪಕರು, ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಂಶೋಧನ ಸಂಘ, ಕನ್ನಡ ಸಾಹಿತ್ಯ ಸಂಘದ ಪದಾಧಿಕಾರಿಗಳು, ಅಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಅಧ್ಯಾಪಕಿ ಡಾ. ಜಯ ದಾನಮ್ಮ ವಚನ ಗಾಯನ ಪ್ರಸ್ತುತಪಡಿಸಿದರು. ಡಾ. ಶಿವಗಂಗಾ ಬಿಲಗುಂದಿ ವಂದಿಸಿದರು. ಡಾ. ನಂದಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರುದ್ಯೋಗವಿದೆ. 371ಜೆ ತಿದ್ದುಪಡಿ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಗೆ ಹಲವು ನಾಯಕರ ಹೋರಾಟವಿದೆ. 371ಜೆ ತಿದ್ದುಪಡಿಗೆ ರಾಷ್ಟ್ರ ಮಟ್ಟದಲ್ಲಿ ಶ್ರಮವಹಿಸಿದ ರಾಷ್ಟ್ರ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭಾಷಣ ಮಾಡಿದ ಸ್ಥಳ ಸ್ವಚ್ಛಗೊಳಿಸಿರುವುದು ದೇಶಕ್ಕೆ ಅಪಮಾನ, ರಾಜ್ಯ ಮತ್ತು ರಾಷ್ಟ್ರದ ಯಾವ ನಾಯಕರು ಈ ಕೃತ್ಯದ ವಿರುದ್ಧ ಮಾತನಾಡದೆ ಮೌನವಹಿಸಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ರಾಷ್ಟ್ರದ ವಿದ್ಯಾರ್ಥಿ ಸಮುದಾಯ ಎಚ್ಚೆತ್ತುಕೊಳ್ಳಬೇಕು.
– ಡಾ. ಜೆ. ಎಸ್. ಪಾಟೀಲ
ವೈಚಾರಿಕ ಚಿಂತಕರು ಹಾಗೂ ಶರಣ ಸಾಹಿತಿಗಳು

ಕಲ್ಯಾಣ ಕರ್ನಾಟಕ ಒಂದು ಕಾಲದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಗೆ ಒಳಗಾಗಿತ್ತು. ರಾಷ್ಟ್ರ ನಾಯಕರು ಹಾಗೂ 371ಜೆ ರುವಾರಿಗಳಾದ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದಾಗಿ ಕಲ್ಯಾಣ ಕರ್ನಾಟಕವು ಶೈಕ್ಷಣಿಕ ಪ್ರಗತಿಯ ಕೇಂದ್ರವಾಗಿ ಮಾರ್ಪಟ್ಟಿದಲ್ಲದೆ ಸಮಾಜೋ-ರಾಜಕೀಯ ಕ್ಷೇತ್ರವನ್ನು ಒಳಗೊಂಡಂತೆ, ವೈದ್ಯಕೀಯ, ತಾಂತ್ರಿಕ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಇಂದು ಪ್ರಗತಿ ಕಾಣುತ್ತಿದೆ. ಪ್ರತಿವರ್ಷ ಕನಿಷ್ಠ 2000 ವೈದ್ಯಕೀಯ ಸೀಟುಗಳು, ಅಂದಾಜು 4000 ಎಂಜಿನಿಯರಿಂಗ್ ಸೀಟುಗಳು ಈ ಭಾಗದ ಮಕ್ಕಳಿಗೆ ಲವ್ಯವಾಗುತ್ತಿರುವುದು 371ಜೆ ಕಾರಣದಿಂದ ಎಂಬುದನ್ನು ಮರೆಯುವಂತಿಲ್ಲ.

  • ಪೆÇ್ರ. ಎಚ್.ಟಿ. ಪೆÇೀತೆ ಡೀನರು, ಕಲಾನಿಕಾಯ
    ಗುಲಬರ್ಗಾ ವಿಶ್ವವಿದ್ಯಾಲಯ