
ಇಂಡಿ : ಮೇ.೨೭:ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗAಡ ಸಮುದಾಯದ ಜನರ ಯಾವುದೇ ಸಮಸ್ಯೆ ಇರಲಿ ಅವುಗಳನ್ನು ತಕ್ಷಣವೇ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಗ್ರಾಮೀಣ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಹೇಳಿದರು.
ಪಟ್ಟಣದ ಪೋಲಿಸ ಉಪವಿಬಾಗಾಧಿಕಾರಿಗಳ ಸಬಾಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗAಡ ಸಮುದಾಯದ ಜನರ ಕುಂದುಕೊರತೆ ಸಭೆಯಲ್ಲಿ ಮಾತನಾಡುತ್ತಿದ್ದರು.
ಡಿವೈಎಸ್‌ಪಿ ಜಗದೀಶ ಎಚ್ ಮಾತನಾಡಿ ಯಾವದೆ ತೊಂದರೆ ಉಂಟಾದಾಗ ಎಸ್ ಸಿ ಎಸ್‌ಟಿ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಮತ್ತು ಅವುಗಳ ಮಹತ್ವ ತಿಳಿಸಿದ ಅವರು ಆಕ್ರಮ ಚಟುವಟಿಕೆ ನಡೆದರೆ ಕೂಡಲೇ ಮಾಹಿತಿ ನೀಡಬೇಕು ಎಂದರು.
ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ ಮಾತನಾಡಿ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು, ಮೂಲ ಸೌಕರ್ಯ ಮತ್ತು ವಿವಿಧ ಗಂಭಿರ ಸಮಸ್ಯೆ ಇದ್ದಾಗ ನೇರವಾಗಿಯೇ ಗಮನಕ್ಕೆ ತರಲು ಹೇಳಿದರು.
ದೌರ್ಜನ್ಯ ಸಮಿತಿ ಸದಸ್ಯ ಬಾಬು ಗುಡುಮಿ, ಚಡಚಣ ಸಿಪಿಐ ಸುರೇಶ ಬೆಂಡೆಗುAಬಳ ಮುಖಂಡರಾದ ವಿನಾಯಕ ಗುಣಸಾಗರ, ಮಲ್ಲಿಕಾರ್ಜುನ ಮಡ್ಡಿಮನಿ, ಸುರೇಶ ನಡಗಡ್ಡಿ, ಚಂದ್ರಶೇಖರ ಹೊಸಮನಿ,ಧರ್ಮರಾಜ ಸಾಲೋಟಗಿ, ನಾಗೇಂದ್ರ ಮೇತ್ರಿ, ಯಲ್ಲಪ್ಪ ಬಂಡೆನವರ, ಹುಚ್ಚಪ್ಪ ತಳವಾರ ಧರ್ಮ ವಾಲಿಕಾರ ಮಾತನಾಡಿದರು.
ದಲಿತ ಮುಖಂಡರಾದ ರಮೇಶ ನಿಂಬಾಳಕರ, ಶಿವಾನಂದ ಮೂರಮನ, ಧರೆಪ್ಪ ಮಂದೋಲಿ, ಕಲ್ಲಪ್ಪ ಅಂಜುಟಗಿ, , ಇಂಡಿ ಶಹರ ಸಿಪಿಐ ಪ್ರದೀಪ ಬಿಸೆ, ಪಿಎಸ್ ಐ ಸೋಮೇಶ ಗೆಜ್ಜಿ ಮತ್ತಿತರಿದ್ದರು.