Home ಜಿಲ್ಲೆ ಕಲಬುರಗಿ ಪಿಎಂ ಶ್ರಮ ಯೋಜನೆಯಡಿ ಶೇ.100 ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಸೂಚನೆ

ಪಿಎಂ ಶ್ರಮ ಯೋಜನೆಯಡಿ ಶೇ.100 ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಸೂಚನೆ

ಕಲಬುರಗಿ: ಫೆ.13:ಜಿಲ್ಲೆಯ ಅಸಂಘಟಿತ ಕಾರ್ಮಿಕರ ಉಜ್ವಲ ಭವಿಷ್ಯಕ್ಕಾಗಿ ‘ಪಿಎಂ ಶ್ರಮಯೋಗಿ ಮಾನ್-ಧನ್’ ( ಪಿ.ಎಂ.-ಎಸ್.ವೈ.ಎಂ. )ಯೋಜನೆಯಡಿ ವಿಶೇಷ ನೋಂದಣಿ ಪ್ರಕ್ರಿಯೆನ್ನು ಜನವರಿ 15 ರಿಂದ ಮಾರ್ಚ್ 15 ರ ವರಗೆ 100% ಪ್ರಗತಿ ಸಾಧಿಸಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (Pಒ-Sಙಒ) ಯೋಜನೆಯಡಿ ವಿಶೇಷ ನೋಂದಣಿ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿ ಅವರನ್ನು ನೊಂದಣಿ ಮಾಡಿಕೊಳ್ಳುವಂತೆ ಪೆÇ್ರೀತ್ಸಾಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 8,014 ಕಾರ್ಮಿಕರು ನೋಂದಣಿಯಾಗಿದ್ದಾರೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ 30,000 ಕಾರ್ಮಿಕರನ್ನು ನೋಂದಾಯಿಸುವ ಗುರಿಯನ್ನು ಇಟ್ಟುಕೊಳ್ಳುವಂತೆ ಸೂಚಿಸಿದರು.
ವಿಶೇಷ ನೋಂದಣಿ ಶಿಬಿರಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಿ ಆಯೋಜಿಸಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರ ನೀಡುವ ಗುರಿಗಿಂತಲೂ ಮಿಗಿಲಾಗಿ ನಾವು ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡೋಣ. ಅಸಂಘಟಿತ ಕಾರ್ಮಿಕರ ವೃದ್ಧಾಪ್ಯದ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸೋಣ ಎಂದು ಹೇಳಿದರು.
18 ರಿಂದ 40 ವರ್ಷ ವಯೋಮಿತಿಯೊಳಗಿನ ಅಸಂಘಟಿತ ಕಾರ್ಮಿಕರು ಅರ್ಹರಾಗಿದ್ದು, ಮಾಸಿಕ ಆದಾಯ 15,000 ಕ್ಕಿಂತ ಕಡಿಮೆ ಇರಬೇಕು.
ಇSI, Pಈ ಅಥವಾ ಆದಾಯ ತೆರಿಗೆ ವ್ಯಾಪ್ತಿಗೆ ಬರುವವರು ಈ ಯೋಜನೆಗೆ ಅರ್ಹರಲ್ಲ. ವಯಸ್ಸಿಗೆ ಅನುಗುಣವಾಗಿ ಮಾಸಿಕವಾಗಿ 55 ರೂ.ನಿಂದ 200 ರೂ.ವರಗೆ ವಂತಿಗೆ ಪಾವತಿ ಮಾಡಬೇಕು. ಕೇಂದ್ರ ಸರಕಾರದ ವತಿಯಿಂದ ಅμÉ್ಟೀ ವಂತಿಗೆ ಪಾವತಿಸಿ ಬ್ಯಾಂಕ್ ಖಾತೆಯಲ್ಲಿ ಆ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. 60 ವರ್ಷ ಪೂರ್ಣಗೊಂಡ ಅನಂತರ ಮಾಸಿಕ 3,000 ರೂ. ಪಿಂಚಣಿ ಸೌಲಭ್ಯ ಪಡೆಯಬಹುದು. 60 ವರ್ಷದೊಳಗೆ ಫಲಾನುಭವಿಯು ಮರಣ ಹೊಂದಿದಲ್ಲಿ, ಅವರ ಸಂಗಾತಿಗೆ ಶೇ. 50 ರಷ್ಟು ಕುಟುಂಬ ಪಿಂಚಣಿ ಸೌಲಭ್ಯ ಸಿಗಲಿದೆ ಎಂದರು.
ಕಾರ್ಮಿಕರು ತಮ್ಮ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ (ಆಧಾರ್‍ಗೆ ಲಿಂಕ್ ಆಗಿರಬೇಕು) ಮತ್ತು ಇ-ಶ್ರಮ್ ಕಾರ್ಡ್‍ನೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (ಅSಅ) ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.
ಮೊದಲ ಕಂತಿನ ಮೊತ್ತವನ್ನು ಕಾರ್ಮಿಕರು ಪಾವತಿಸಬೇಕಾಗಿದ್ದು, ನಂತರದ ಕಂತುಗಳು ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ ಆಗುತ್ತವೆ.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,ಬಿಸಿಯೂಟ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ನರೇಗಾ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ಮೀನುಗಾರರು ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳು ತಮ್ಮ ಸದಸ್ಯರಲ್ಲಿ ಜಾಗೃತಿ ಮೂಡಿಸಿ ನೋಂದಣಿಗೆ ಸಹಕರಿಸುವಂತೆ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಹಾಗೂ ಸರ್ಕಾರದ ಕಾರ್ಮಿಕ ಇಲಾಖೆ ಕಛೇರಿಗಳು, ಎಲ್.ಐ.ಸಿಯ ಶಾಖಾ ಕಛೇರಿಗಳು, ಇ.ಪಿ.ಎಫ್.ಒ ಮತ್ತು ಇ.ಎಫ್.ಐ.ಸಿ ಕಚೇರಿಗಳು ಹಾಗೂ ಕಾರ್ಮಿಕ ಸಹಾಯವಾಣಿ #155214 , ಟೋಲ್ ಪ್ರೀಕಾಲ್ ಸೆಂಟರ್ ಸಂಖ್ಯೆ 1800-267-6888 ಗೆ ಸಂಪರ್ಕಿಸಬಹುದು ಎಂದು ಹೇಳಿದರು.
ಕಲಬುರಗಿ ಉಪವಿಭಾಗ ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಶರಣಪ್ಪ ಅರ್. ಹಳಿಮನಿ, ಕಾರ್ಯಕ್ರಮದ ಬಗ್ಗೆ ಪಿ.ಪಿ.ಟಿ. ಮೂಲಕ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ವಿಭಾಗ ಕಲಬುರಗಿ ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ್ ಬಷೀರ್ ಅನ್ಸಾರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶಂಕ್ರಮ್ಮ ಡವಳಗಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೋಸೈಟಿ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಸೇರಿದಂತೆ ಆಶಾಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತೆಯರು ಅಸಂಘಟಿತ ಕಾರ್ಮಿಕರು ಹಲವಾರು ಇದ್ದರು.