ಸ್ವಚ್ಚತೆಗೆ ಆದ್ಯತೆ ನೀಡಲು ಪುರಸಭೆ ಅಧಿಕಾರಿಗಳಿಗೆ ಸೂಚನೆ

ತಾಳಿಕೋಟೆ:ಡಿ.೨೫: ಪಟ್ಟಣದ ಪ್ರತಿವಾರ್ಡುಗಳಲ್ಲಿ ಚರಂಡಿ, ರಸ್ತೆ ಒಳಗೊಂಡು ಇನ್ನಿತರ ಗಲಿಜು ಕಾಣಿಸದಂತೆ ಏಚ್ಚರ ವಹಿಸಬೇಕು ಸಾರ್ವಜನಿಕರಿಂದ ದೂರುಗಳು ಬರದ ಹಾಗೆ ಕ್ರಮ ವಹಿಸಲು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರಿಗೆ ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಸೂಚಿಸಿದರು.
ಬುಧವಾರರಂದು ಪಟ್ಟಣದ ರಾಜವಾಡೆ ಬಡಾವಣೆಯ ವಾರ್ಡ ನಂ.೨೧, ೨೨, ೧೭ಕ್ಕೆ ಬೆಳಿಗ್ಗೆ ೮ ಗಂಟೆಗೆ ಆಗಮಿಸಿದ ಶಾಸಕ ನಾಡಗೌಡ ಅವರು ವಾರ್ಡ ನಾಗರಿಕರಿಂದ ಅಹವಾಲುಗಳನ್ನು ಸ್ವಿಕರಿಸಿದರು ಈ ಸಮಯದಲ್ಲಿ ವಾರ್ಡ ನಾಗರಿಕರು ವಾರ್ಡಿನಲ್ಲಿ ಚರಂಡಿ ಸ್ವಚ್ಚತೆಗೆ ವಾರಕ್ಕೊಮ್ಮೆ ಬರುತ್ತಿದ್ದು ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಪುರಸಭೆ ಕಾರ್ಮಿಕರು ಬರುವಂತಾಗಬೇಕು ಕೆಲವುಕಡೆಗಳಲ್ಲಿ ಬೀದಿ ದೀಪಗಳು ಹತ್ತುತ್ತಿಲ್ಲಾವೆಂದು ದೂರಿದರು. ಈ ಸಮಯದಲ್ಲಿ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಪುರಸಭೆ ಮುಖ್ಯಾಧಿಕಾರಿಗಳಿಗೆ ವಾರ್ಡಗಳ ಸ್ವಚ್ಚತೆಗೆ ಹೆಚ್ಚಿಗೆ ಆದ್ಯತೆ ನೀಡಿ ದೊಡ್ಡ ಬಡಾವಣೆಗಳಿಗೆ ಎರಡುದಿನಕ್ಕೊಮ್ಮೆಯಾದರೂ ಸ್ವಚ್ಚತಾ ಸಿಬ್ಬಂದಿಗಳನ್ನು ಕಳುಹಿಸಿ ಚರಂಡಿ ಮತ್ತು ರಸ್ತೆ ಮೇಲೆ ಕಸ ನೀರು ನಿಲ್ಲದಂತೆ ನೋಡಿಕೊಳ್ಳಿ ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬರದ ಹಾಗೆ ಕ್ರಮ ವಹಿಸಿ ಎಂದು ಸೂಚಿಸಿದರು. ನಂತರ ಶ್ರೀ ಗ್ರಾಮದೇವತೆ ದೇವಸ್ಥಾನಕ್ಕೆ ಬೆಟ್ಟಿ ನೀಡಿದ ಶಾಸಕ ನಾಡಗೌಡರು ಪೂಜೆ ಸಲ್ಲಿಸಿದರು ಈ ಸಮಯದಲ್ಲಿ ರಾಜವಾಡೆ ಬಡಾವಣೆಯ ನಾಗರಿಕರು ಶ್ರೀಗ್ರಾಮದೇವತೆ ದೇವಸ್ಥಾನವು ಪುರಾತನ ದೇವಸ್ಥಾನವಾಗಿದೆ ಅಭಿವೃದ್ದಿಯಿಂದ ವಂಚಿತಗೊAಡಿದೆ ಮತ್ತು ಶ್ರೀ ಮಹಾದೇವರ ಮಂದಿರವು ಪುರಾತನವಾಗಿದೆ ಈ ಎರಡು ದೇವಸ್ಥಾನಗಳ ಅಭಿವೃದ್ದಿ ಯಾವುದಾರೂ ಯೋಜನೆಯೊಳಗೆ ಸೇರಿಸಿ ಅಭಿವೃದ್ದಿ ಪಡಿಸಬೇಕೆಂದು ಮನವಿ ಮಾಡಿದರು, ಈ ಸಮಯದಲ್ಲಿ ಶಾಸಕ ನಾಡಗೌಡರು ಶ್ರೀ ಗ್ರಾಮದೇವತೆ ದೇವಸ್ಥಾನಕ್ಕೆ ಸಂಬAದಿಸಿದAತೆ ಮತ್ತು ಶ್ರೀ ಮಹಾದೇವರ ಮಂದಿರಕ್ಕೆ ಸಂಬAದಿಸಿ ಉತ್ತಾರೆ ದಾಖಲೆಗಳನ್ನು ಕೊಡಿ ಮುಜರಾಯಿ ಇಲಾಖೆಯಡಿ ಹಣ ಒದಗಿಸಿ ಅಭಿವೃದ್ದಿಗೆ ಮುಂದಾಗುತ್ತೇನೆ ಈ ಕುರಿತು ಮುಜರಾಯಿ ಇಲಾಖೆ ಸಚೀವರಾದ ರಾಮಲಿಂಗರಾಡ್ಡಿಯವರೊAದಿಗೆ ಚರ್ಚಿಸುತ್ತೇನೆ ಆದಷ್ಟು ಬೇಗನೇ ಉತ್ತಾರೆ ದಾಖಲೆಗಳನ್ನು ಕೊಡಿ ಎಂದು ಹೇಳಿದರು.
ನಂತರ ರಾಜವಾಡೆಯ ಅಗಸಿ ಭಾಗಿಲು ಹಳೆಯದಾಗಿದೆ ಮತ್ತು ಯಾವುದೇ ವಾಹನಗಳು ಒಳಗಡೆ ಬರುತ್ತಿಲ್ಲಾ ಗಣೇಶೋತ್ಸವ ಸಮಯದಲ್ಲಿ ದಸರಾ ಉತ್ಸವ ಸಮಯದಲ್ಲಿ ಊರಿನಲ್ಲಿರುವ ಎಲ್ಲ ಉತ್ಸವ ಮೂರ್ತಿಗಳು ರಾಜವಾಡೆಗೆ ಆಗಮಿಸಿ ಹೋಗುತ್ತವೆ ಇಕ್ಕಲಿನ ಅಗಸಿ ಬಾಗಿಲುದಿಂದ ತೊಂದರೆಯಾಗುತ್ತಿದೆ ನೂತನ ಅಗಸಿ ಭಾಗಿಲು ನಿರ್ಮಾಣಕ್ಕೆ ಕ್ರಮ ವಹಿಸಲು ಬಡಾವಣೆ ನಾಗರಿಕರು ಶಾಸಕ ನಾಡಗೌಡರಿಗೆ ಮನವಿ ಮಾಡಿದರು. ಇದೇ ಸಮಯದಲ್ಲಿ ಉಪಸ್ಥಿತರಿದ್ದ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಮತ್ತು ಪುರಸಭೆ ಕಿರಿಯ ಅಭಿಯಂತರ ಸಂದೀಪ ವಠಾರ ಅವರಿಗೆ ಈ ಅಗಸಿ ಭಾಗಿಲು ನಿರ್ಮಾಣಕ್ಕೆ ಅಂದಾಜು ಪತ್ರಿಕೆ ಮತ್ತು ಡೀಸಾಯಿನ್ ತಯಾರಿಸಿ ಕೊಡಿ ಇದು ಬಡಾವಣೆಯ ನಾಗರಿಕರ ಬಹುದಿನಗಳ ಬೇಡಿಕೆ ಇದ್ದು ಆದಷ್ಟು ಬೇಗನೇ ಈ ಕಾಮಗಾರಿ ಕೈಗೆತ್ತಿಕೊಳ್ಳೋಣವೆಂದು ಸೂಚಿಸಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ನ್ಯೂಕೆಬಿಎಸ್) ಗೆ ಬೆಟ್ಟಿ ನೀಡಿ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಿದರಲ್ಲದೇ ಶಾಲೆಯ ಸುತ್ತಲು ಸ್ವಚ್ಚತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ವಾರ್ಡ ನಂ.೧೯ ಮಹಲ್‌ಗಲ್ಲಿ ಬಡಾವಣೆಗೆ ಕಾಲ್ನಡಿಗೆಯ ಮೂಲಕ ತೆರಳಿಸಿದ ಶಾಸಕ ನಾಡಗೌಡರು ಚರಂಡಿ ಸ್ವಚ್ಚತೆ ವಾರ್ಡಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಈ ಸಮಯದಲ್ಲಿ ಕೆಪಿಸಿಸಿ ಸದಸ್ಯರಾದ ಬಿ.ಎಸ್.ಪಾಟೀಲ(ಯಾಳಗಿ), ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಸಿದ್ದನಗೌಡ ಪಾಟೀಲ(ನಾವದಗಿ), ಅಣ್ಣಾಜಿ ಜಗತಾಪ, ಡಿ.ವ್ಹಿ.ಪಾಟೀಲ, ಶ್ರೀಮತಿ ನೀಲಮ್ಮ ಪಾಟೀಲ, ಸಂಗಮೇಶ ದೇಸಾಯಿ, ಮಹಿಬೂಬ ಕೇಂಭಾವಿ, ಶಾಂತಗೌಡ ಪಾಟೀಲ, ವಿಠ್ಠಲ ಜಗತಾಪ, ಮುದಕಣ್ಣ ಬಡಿಗೇರ, ಫಯಾಜ್ ಉತ್ನಾಳ, ಪುರಸಭೆ ಅಧಿಕಾರಿಗಳು ಒಳಗೊಂಡು ವಾರ್ಡಿನ ಜನರು ಉಪಸ್ಥಿತರಿದ್ದರು.

ತಾಳಿಕೋಟೆ ಪಟ್ಟಣದ ೨೩ ವಾರ್ಡಿಗಳಿಗೂ ವಾರ್ಡ ಸಭೆಯನ್ನು ನಡೆಸಲಾಗುತ್ತಿದೆ ಆಯಾ ವಾಡುಗಳಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಲಾಗುತ್ತಿದೆ ಚರಂಡಿ ಮತ್ತು ರಸ್ತೆ ಸ್ವಚ್ಚತೆ ಅಲ್ಲದೇ ಬೀದಿ ದೀಪಗಳು ಹತ್ತುತ್ತಿಲ್ಲಾವೆಂದು ನಾಗರಿಕರಿಂದ ದೂರುಗಳು ಬಂದಿದ್ದು ಸಾರ್ವಜನಿಕರಿಂದ ಈ ರೀತಿ ಇನ್ನೋಮ್ಮೆ ದೂರುಗಳು ಬರದಂತೆ ನಿಗಾ ವಹಿಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
                                    ಸಿ.ಎಸ್.ನಾಡಗೌಡ(ಅಪ್ಪಾಜಿ)
                                      ಶಾಸಕರು ಮುದ್ದೇಬಿಹಾಳ ಮತಕ್ಷೇತ್ರ