ಬಿದ್ದಾಗ ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ:ಅಕ್ಷಯಾ ಗೋಖಲೆ

ತಾಳಿಕೋಟೆ:ಜ.18: ತಂದೆ ತಾಯಿ ಹುಟ್ಟಿನಿಂದ ನೀಡುವ ಸಂಸ್ಕಾರವು ಮಗುವಿನ ಭವಿಷ್ಯ ನಿರ್ಧರಿಸುತ್ತದೆ. ಈ ಮಣ್ಣಿನ ಸಂಸ್ಕೃತಿಯನ್ನು ಅಳವಡಿಸುವಂತಹ ಕಾರ್ಯ ಮಾಡಿದರೆ ಪ್ರತಿ ಮನೆಯಲ್ಲಿಯೂ ರಾಜ ಮಹಾರಾಜರನ್ನು ಕಾಣಲು ಸಾಧ್ಯವಾಗಲಿದೆ. ಬಿದ್ದಾಗ ಕೈ ಹಿಡಿದೆತ್ತಿಕೊಂಡು ಜೋಪಾನ ಮಾಡುವ ಸಂಸ್ಕಾರವನ್ನು ಮಕ್ಕಳಲ್ಲಿ ಪಾಲಕರು ಬಿತ್ತಬೇಕು ಎಂದು ಕಾರ್ಕಳದ ಅಂಕಣಕಾರರು ಹಾಗೂ ಉಪನ್ಯಾಸಕರಾದ ಖ್ಯಾತ ವಾಗ್ಮಿ ಶ್ರೀಮತಿ ಅಕ್ಷಯಾ ಗೋಖಲೆ ಹೇಳಿದರು.
ಶನಿವಾರರಂದು ಪಟ್ಟಣದ ಮೈಲೇಶ್ವರ ಕ್ರಾಸ್ ಹತ್ತಿರದ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಆರಂಭಗೊಂಡ ಎರಡು ದಿನಗಳ ಬ್ರಿಲಿಯಂಟ್ ಕಲಾ ವೈಭವ-2026 ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು ಇಂದು ಮಕ್ಕಳು ಸಾಮಾಜಿಕ ಜಾಲತಾಗಳ ಮೊರೆ ಹೋಗುತ್ತಿರುವ ಕಾರಣ ಪಾಲಕರ ಮೇಲಿನ ಗೌರವ ಕಡಿಮೆಯಾಗುತ್ತಿದೆ ಎಂದರು. ಇವತ್ತಿನ ಕಾಲದಲ್ಲಿ ಮಕ್ಕಳು ಎಡವಿದರೆ ಮೇಲೆತ್ತಬಹುದು ಮುಂದೆ ನೀವು ಎಡವಿಬಿದ್ದಾಗ ನಿಮ್ಮ ಮಗು ನಿಮ್ಮನ್ನು ಎತ್ತಿಕೊಂಡು ಹೋಗಿ ಬೆಳೆಸಬೇಕು ಅಂತಹ ಶಿಕ್ಷಣ ಮಕ್ಕಳಲ್ಲಿ ನೀಡಿ ಎಂದರು. ಶಿವಾಜಿ ಮಹಾರಾಜರು ಎಂದಾಗ ಅವರ ತಾಯಿ ಜೀಜಾಬಾಯಿ ನೆನಪಿಗೆ ಬರುತ್ತಾರೆ. ಅಂತಹ ಜೀಜಾಬಾಯಿಯಂತೆ ಪ್ರತಿಯೊಬ್ಬ ತಾಯಿಯಾಗಬೇಕು. ಅಂದಾಗ ನಮ್ಮ ಭಾರತ ದೇಶವನ್ನು ತಾಯಿಯ ಸ್ವರೂಪದಂತೆ ಮಗು ಪ್ರೀತಿಸುತ್ತಾನೆಂದು ಹೇಳಿದರು. ಮಕ್ಕಳಿಗೆ ಸರಿಯಾದ ದಾರಿಯನ್ನು ತೋರಿಸುವ ಹೊಣೆ ಪಾಲಕರ ಮೇಲಿದೆ ಮಕ್ಕಳ ಮೇಲೆ ಒತ್ತಡದ ಓದಿನ ಪ್ರಭಾವ ಬೀರುವ ಕಾರ್ಯ ಮಾಡದೇ ಭಾರತದ ಭವಿಷ್ಯ ರೂಪಿಸುವ ನಾಯಕನನ್ನು ರೂಪಿಸಿ ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕಾರ್ಯ ಮಾಡಿ ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಜಾಲಹಳ್ಳಿಯ ಸಂಸ್ಥಾನ ಬೃಹನ್ ಮಠದ ಶ್ರೀ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ತಂದೆ ತಾಯಿಯ ಪಾದಪೂಜೆ ಮಾಡಿಸುವ ಸಂಸ್ಕತಿ ಹುಟ್ಟಿದ್ದು ಭಾರತದಲ್ಲಿ ಇಂದು ಪಾಶ್ಚಿಮಾತ್ಯ ಸಂಸ್ಕೃತಿಗೆ ಕೆಲವರು ಹೊಂದಿಕೊಂಡಿದ್ದರಿಂದ ಪಾದ ಪೂಜೆಗೆ ವಿರೋಧಿಸುವುದರೊಂದಿಗೆ ನಮ್ಮ ಸಂಸ್ಕೃತಿ ನಶಿಸಸಲು ಹತ್ತಿದೆ. ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಇಂಡೊನೇಶಿಯಾ ದೇಶದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಇಂತಹ ಪಾದಪೂಜೆಯಂತಹ ಅದ್ಭುತ್ ಕಾರ್ಯ ಮಾÀ್ದ ಸಂಸ್ಥೆಯ ಕೆಲಸಕ್ಕೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದರು. ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ ಇರುತ್ತದೆ ಆ ಪ್ರತಿಭೆ ಅರಳಿಸಿವ ಕಾರ್ಯ ಶಿಕ್ಷಕರು ಮಾಡಬೇಕು ತಂದೆ ತಾಯಿ ಪಾದಪೂಜೆಯಲ್ಲಿ ವಿಶೇಷತೆ ಇದೆ ನಮ್ಮ ದೇಶದ ಅಗಮ್ಯವಾದ ಸಂಸ್ಕೃತಿಯನ್ನು ಅನುಸರಿಸುವಂತಹದ್ದಾಗಿದೆ ತಂದೆ ತಾಯಿಯ ಕಾಲಲ್ಲಿನ ಮಣ್ಣು ಸ್ವರ್ಗಕ್ಕಿಂತಲೂ ಶ್ರೇಷ್ಠವಾದದ್ದಾಗಿದೆ ಅಂತಹ ಸ್ವರ್ಗದ ದಾರಿ ಬ್ರಿಲಿಯಂಟ್ ಶಾಲೆಯವರು ತೋರಿಸಿಕೊಟ್ಟಿದ್ದಾರೆ ಮಕ್ಕಳಿಗೆ ಮನೆಯಲ್ಲಿ ಪ್ರಾರಂಭದಿಂದ ಸಂಸ್ಕಾರ ಕಲಿಸುವ ಕಾರ್ಯ ಪಾಲಕರು ಮಾಡಬೇಕು ಆ ಸಂಸ್ಕಾರ ಕಲಿಸದಿದ್ದರೆ ವೃದ್ದಾಶ್ರಮದ ದಾರಿಗೆ ನೀವು ಹೋಗುತ್ತಿರಿ ಇದ್ದನ್ನು ಪ್ರತಿಯೊಬ್ಬ ಪಾಲಕರು ಅರಿತುಕೊಳ್ಳಬೇಕು ಇಂತಹ ಸಂಸ್ಕಾರ ಕಲಿಸಿದ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಕಾರ್ಯ ಮೆಚ್ಚಿವಂತಹದ್ದಾಗಿದೆ ಎಂದರು.
ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಸಿಂಚನಾ ಶಿವನಗೌಡ ಪಾಟೀಲ ವಿದ್ಯಾರ್ಥಿನಿಗೆ ದಿ.ಎನ್.ಎಂ.ಬಿರಾದಾರ ಅವರ ಸ್ಮರಣಾರ್ಥ ಅವರ ಮಗನಾದ ಬ್ರೀಲಿಯಂಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಕು.ಡಾ.ಶಶಿದರ ಬಿರಾದಾರ ಅವರು 10 ಸಾವಿರ ರೂ. ಬಹುಮಾನ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಪುರಸ್ಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ ಅವರು ಮಾತನಾಡಿ ಉತ್ತಮ ಸಮಾಜಕ್ಕೆ ಬೇಕಾಗಿರುವ ಮೌಲ್ಯಗಳು ಮತ್ತು ಮಕ್ಕಳಿಗೆ ಯಾವ ರೀತಿ ಸಂಸ್ಕಾರ ನೀಡಬೇಕು ಎಂಬುದರ ಕುರಿತು ವಿವರಿಸಿದ ಅವರು ಮಕ್ಕಳಿಗೆ ಓದಿನ ಜೊತೆಗೆ ನೀಡುವ ಸಂಸ್ಕಾರ ಸಮಾಜಕ್ಕೆ ಕೊಡುಗೆಯಾಗಬೇಕು. ಆ ರೀತಿ ಮಕ್ಕಳನ್ನು ಬೇಳೆಸಬೇಕೆಂದ ಅವರು ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಶಿಕ್ಷಣ ಒದಗಿಸುವಂತಹ ಕಾರ್ಯ ಪಾಲಕರು ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅದ್ಯಕ್ಷರಾದ ಭರಮಣ್ಣ ಕಾಮನ್, ಲಕ್ಷ್ಮೀ ಕಾಮನ್ ದಂಪತಿಗಳಿಗೆ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಸಾಧನೆಗೈದ ರಾಜ್ಯಕ್ಕೆ ಎರಡನೇ ರ್ಯಾಂಕ ಪಡೆದ ಸಿಂಚನಾ ಶಿವನಗೌಡ ಪಾಟೀಲ, ಗಗನ್‍ಸಿಂಗ್ ಜೈಸಿಂಗ್ ಮೂಲಿಮನಿ, ಲಕ್ಷ್ಮೀ ಚೌದ್ರಿ, ಸೃಷ್ಟಿ ಮೇಲಿನಮನಿ, ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಆರ್.ಬಿ.ನಡುವಿನಮನಿ, ಕಾರ್ಯದರ್ಶಿಗಳಾದ ಎಂ.ಬಿ.ಮಡಿವಾಳರ, ನಿರ್ದೇಶಕರಾದ ಎಸ್.ಎಚ್.ಪಾಟೀಲ, ಶಶಿಧರ ಬಿರಾದಾರ, ಎಲ್.ಎಂ.ಬಿರಾದಾರ, ಎನ್.ಎಸ್.ಗಡಗಿ, ಮುಖ್ಯಗುರು ವಿನಾಯಕ ಪಟಗಾರ, ಹಾಗೂ ಶಿಕ್ಷಕ ಎಸ್.ಎಂ.ಪಾಲ್ಕಿ, ಮೊದಲಾದವರು ಉಪಸ್ಥಿತರಿದ್ದರು.
ಸಿದ್ಧನಗೌಡ ಪಾಟೀಲ ಸ್ವಾಗತಿಸಿದರು. ಎಸ್.ಸಿ.ಕರಡಿ ನಿರೂಪಿಸಿದರು. ಚನ್ನು ಮೂಲಿಮನಿ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.