Home ಜಿಲ್ಲೆ ಬೆಂಗಳೂರು ನಗರದ ಎಲ್ಲಾ ಬೀದಿಗಳಿಗೂ ಎಲ್ ಇಡಿ ಲೈಟ್ ಅಳವಡಿಕೆ

ನಗರದ ಎಲ್ಲಾ ಬೀದಿಗಳಿಗೂ ಎಲ್ ಇಡಿ ಲೈಟ್ ಅಳವಡಿಕೆ

ಬೆಂಗಳೂರು, ಮಾ. ೧೦-ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್ ಉಳಿತಾಯ ಮತ್ತು ಉತ್ತಮ ಬೀದಿ ಬೆಳಕಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಎಲ್ ಇಡಿ (ಇಟಿeಡಿgಥಿ ಇಜಿಜಿiಛಿieಟಿಣ ಐಇಆ) ಬೀದಿ ದೀಪಗಳ ಅಳವಡಿಕೆ ಕಾರ್ಯ ವೇಗವಾಗಿ ನಡೆಯುತ್ತಿದೆ.


ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಈಗಿರುವ ಸಾಮಾನ್ಯ ಬೀದಿ ದೀಪಗಳನ್ನು ತೆರವುಗೊಳಿಸಿ, ವಿದ್ಯುತ್ ಉಳಿತಾಯ ಮಾಡುವ ಎನರ್ಜಿ ಎಫಿಷಿಯಂಟ್ ಎಲ್‌ಇಡಿ ದೀಪಗಳನ್ನು ಅಳವಡಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಸರ್ಕಾರದ ಅನುಮೋದನೆ ಬಳಿಕ ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್ (PPP) ಮಾದರಿಯಲ್ಲಿ ಯೋಜನೆ ಜಾರಿಗೆ ತರುವುದಕ್ಕಾಗಿ ವಿದ್ಯುತ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಮೂಲಕ ಟೆಂಡರ್ ಆಹ್ವಾನಿಸಿ ಕಾರ್ಯಾದೇಶ ನೀಡಲಾಗಿದೆ.


ಪ್ರಸ್ತುತ ಈ ಯೋಜನೆಯ ಕಾರ್ಯಗತಗೊಳಿಸುವ ಕೆಲಸವನ್ನು ವಿದ್ಯುತ್ ವಿಭಾಗದ ಮೂಲಕ ಪಾಲಿಕೆಯ ಎಲ್ಲಾ ವಾರ್ಡ್‌ಗಳಲ್ಲಿ ಕೈಗೊಳ್ಳಲಾಗುತ್ತಿದೆ.
ಇದಲ್ಲದೆ, ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ೩ ವಾರ್ಡ್‌ಗಳು ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ೫ ಹೊಸ ವಾರ್ಡ್‌ಗಳು (ಹಿಂದಿನ ೪ ವಾರ್ಡ್‌ಗಳು) ಸೇರಿವೆ.


ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ೧,೨೪,೫೯೧ ಬೀದಿ ದೀಪಗಳು ಇದ್ದು, ಅದರಲ್ಲಿ ೬೪,೮೯೮ ಎಲ್‌ಇಡಿ ಅಲ್ಲದ ದೀಪಗಳು ಹಾಗೂ ೫೯,೬೯೩ ಎಲ್‌ಇಡಿ ದೀಪಗಳು ಸೇರಿವೆ.
ಈಗಾಗಲೇ ಸಾಮಾನ್ಯ ದೀಪಗಳನ್ನು ಎನರ್ಜಿ ಎಫಿಷಿಯಂಟ್ ಎಲ್‌ಇಡಿ ದೀಪಗಳಾಗಿ ಬದಲಾಯಿಸುವ ಕಾರ್ಯದಲ್ಲಿ ೩೭,೨೫೭ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದ್ದು, ಸುಮಾರು ೫೫ ಶೇಕಡಾ ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸಗಳು ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಅಯುಕ್ತರು ತಿಳಿಸಿದರು.


ಈ ಯೋಜನೆಯ ಮೂಲಕ ವಿದ್ಯುತ್ ಬಳಕೆ ಕಡಿಮೆಯಾಗುವ ಜೊತೆಗೆ ನಗರದಲ್ಲಿ ಉತ್ತಮ ಬೀದಿ ಬೆಳಕು ಒದಗಿಸಿ ಸಾರ್ವಜನಿಕರ ಸುರಕ್ಷತೆಗೂ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.