ಕೋಲಾರ, ಅ.೨೭-ವೇಮಗಲ್‌ನ ತೋಕಲಘಟ್ಟ-ಪುರಹಳ್ಳಿ ಮಾರ್ಗ ಮದ್ಯೆ ನೂತನವಾಗಿ ನಿರ್ಮಿಸಿರುವ ಶ್ರೀ ಚೌಡೇಶ್ವರಿ ದೇವಿಯ ಪ್ರತಿಷ್ಟಾಪನಾ, ಕುಂಬಾಭಿಷೇಕ, ವಿಮಾನಗೋಪುರ ಮಹೋತ್ಸವವು ಶಾಸ್ತೊಕ್ತವಾಗಿ ನೆರವೇರಿತು.
ಚೌಡೇಶ್ವರಿ ದೇವಿಯ ಪ್ರತಿಷ್ಠಾಪನೆಯ ಪ್ರಯುಕ್ತ ಆಲಯ ಪ್ರವೇಶ, ಗಣಪತಿ ಪೂಜೆ, ಕಳಶ ಸ್ಥಾಪನೆ, ವಾಸ್ತು ಹೋಮ ಮಹಾಮಂಗಳಾರತಿ ನಡೆಯಿತು.
ಗಣಪತಿ ಪೂಜೆ, ಕಲಾಹೋಮ, ಚೌಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪನೆ, ಕುಂಬಾಭಿಷೇಕ, ವಿಮಾನಗೋಪುರ ಪ್ರತಿಷ್ಠಾಪನೆ, ದೇವಿಯ ಅಲಂಕಾರ, ಮಹಾಮಂಗಳಾರತಿ ನಡೆಯಿತು. ಸಹಸ್ರಾರು ಮಂದಿ ಭಕ್ತಾದಿಗಳು ಪೂಜೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಡಿಸಿಪಿ ದೇವರಾಜ್, ಎಲ್.ಜಿ ಪೌಂಡೇಷನ್ ಸಂಸ್ಥಾಪಕ ವಲ್ಲಬ್ಬಿ ಲಕ್ಷ್ಮಣಗೌಡ, ಸಮಾಜಸೇವಕಿ ಕುರ್ಕಿ ರಾಜೇಶ್ವರಿ, ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವದೂತ ಸ್ವಾಮಿ, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದ ನಾಥ ಸ್ವಾಮಿ, ಕೆಂಗೇರಿ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮಿ, ನಾಗಲಾಪುರ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿ, ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ವಕೀಲ ಕೆ.ವಿ.ಶಂಕರಪ್ಪ, ನಾಗನಾಳ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡ ಡಾ.ನಾಗನಾಳ ಮುನಿರಾಜು, ನಿರ್ದೇಶಕ ಯಲುವಳ್ಳಿ ರಮೇಶ್, ಮುಖಂಡ ಉದಯ್ ಶಂಕರ್, ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ವಿ.ಎಂ.ಮುನಿಯಪ್ಪ, ಯೋಜನಾ ಪ್ರಾಧಿಕಾರ ಸದಸ್ಯ ಚೊಕ್ಕಪುರ ಚೌಡಪ್ಪ, ಪಪಂ ಮುಖ್ಯಾಧಿಕಾರಿ ವೆಂಕಟೇಶ್, ಪಪಂ ಅಧ್ಯಕ್ಷೆ ಅನುಷಾ ಮುನಿರಾಜು, ಉಪಾಧ್ಯಕ್ಷ ವೆಂಕಟೇಶ್ ಇದ್ದರು.


























