
ಬೀದರ, ಮೇ.೦೬: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಮ್ಮಿಕೊಳ್ಳುವ ಇಂತಹ ನವೀನ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಬಹಳ ಮುಖ್ಯವಾಗಿದೆ ಎಂದು ಬೆಂಗಳೂರು ಅಕ್ಕಪಡೆ ರಾಜ್ಯ ಮಟ್ಟದ ಸಲಹೆಗಾರರಾದ ಶೈನಿ ಪ್ರದೀಪ ಗುಂಟಿ ಹೇಳಿದರು.
ಅವರು ಇತ್ತೀಚಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೀದರ ಇವರ ಸಂಯುಕ್ತಾಶ್ರಯದಲ್ಲಿ “೨೦೨೫-೨೬ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಸರಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರಗಳ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಪ್ರಗತಿಗಾಗಿ ಬೀದರ ಮೈಲೂರಿನ ಸರಕಾರಿ ಬಾಲಕಿಯರ ಬಾಲಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ಕಡೆ ಇಂತಹ ಕಾರ್ಯಕ್ರಮ ಆಗಬೇಕು. ಮಕ್ಕಳು ಶ್ರಮ ಪಟ್ಟು ಕಲಿತಾಗ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯ. ನಾನು ಕೂಡ ತಂದೆ ಇಲ್ಲದೇ ಬೆಳೆದವಳು ಜೀವನದಲ್ಲಿ ತುಂಬಾ ಕಷ್ಟಪಟ್ಟು ಓದಿ ಇಂಜೀನಿಯರಿAಗ್ ಮಾಡಿ ಪಿ.ಹೆಚ್.ಡಿ ಮಾಡುತ್ತಿದ್ದೇನೆ. ನೀವು ಕೂಡ ಎದೆಗುಂದದೆ ನಿಮ್ಮ ಜೀವನದಲ್ಲಿ ಸಾಧನೆ ಮಾಡಬೇಕು ನಿಮಗೆ ಯಾವಾಗಲು ನನ್ನ ಬೆಂಬಲ ಇರುತ್ತದೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆ ಜೀವನವನ್ನು ಬದಲಾಯಿಸುವ ಘಟ್ಟ ಆಗಿದೆ. ವಿದ್ಯಾರ್ಥಿಗಳ ಜೀವನದ ಸಾಧನೆಗೆ ಇದು ಮೊದಲನೇ ಮೆಟ್ಟಿಲಾಗಿದೆ. ತಾವುಗಳು ಕಷ್ಟಪಟ್ಟು ಓದಿದರೆ ಮಾತ್ರ ಮುಂದೆ ಹೋಗಲು ಸಾಧ್ಯ. ತಮಗೆ ಕೊರೆತೆಯಿರುವುದರಿಂದ ಇಲ್ಲಿಗೆ ಬಂದಿರುತ್ತೀರಿ. ನಿಮ್ಮ ಜೊತೆ ಯಾವಾಗಲು ನಾವು ಸದಾ ಇದ್ದೇವೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಾರದಾ ಎನ್. ಕಲ್ಮಲಕರ್ ಮತನಾಡಿ, ಈ ಒಂದು ಕಾರ್ಯಕ್ರಮ ೯ನೇ ಮಕ್ಕಳಿಗೆ ಸ್ಪೂರ್ತಿ ನೀಡಲು ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮ ಮೊದಲನೇ ಸಲ ಆಯೋಜಿಸಲಾಗಿದೆ. ಜೀವನದಲ್ಲಿ ಸಾಧನೆ ಮಾಡಬೇಕೆಂದರೆ ಪರಿಶ್ರಮ ತುಂಬಾ ಅಗತ್ಯ. ಪರಿಶ್ರಮ ಇಲ್ಲದೇ ಏನು ಮಾಡಲು ಸಾಧ್ಯವಿಲ್ಲ. ಎಸ್.ಎಸ್.ಎಲ್.ಸಿ ಮಕ್ಕಳಿಗೆ ಅವರ ಇಚ್ಛೆಗನುಗುಣವಾಗಿ ಮುಂದಿನ ಶೈಕ್ಷಣಿಕ ಅಥವಾ ಕೌಶಲ್ಯ ತರಬೇತಿಯನ್ನು ನೀಡಬೇಕಾಗಿರುತ್ತದೆ. ಅದೇ ರೀತಿ ೧೦ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಹೋಮ್ ಗಾರ್ಡ ಹುದ್ದೆಯನ್ನು ನೀಡುವಂತೆ ಶ್ರೀಮತಿ. ಶೈನಿ, ರಾಜ್ಯ ಮಟ್ಟದ ಸಲಹೆಗಾರರು ಅಕ್ಕಪಡೆ ಬೆಂಗಳೂರು ಅವರಿಗೆ ಮನವಿ ಮಾಡಿಕೊಂಡರು. ಅದೇ ರೀತಿ ಬಾಲಕರ ಬಾಲಮಂದಿರದ ಶಿವಕುಮಾರ ತಂದೆ ಚಿದಾನಂದ್ ಇವನು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೮೦% ಅಂಕಗಳನ್ನು ಪಡೆದು ಉತ್ತೀರ್ಣನಾಗಿರುತ್ತಾನೆ. ಇವನ ಈ ಸಾಧನೆಗೆ ಮೆಚ್ಚಿ ಬೀದರನ ಪ್ರತಿಷ್ಠಿತ ಶಾಹೀನ ಶಿಕ್ಷಣ ಸಂಸ್ಥೆಯವರು ಸದರಿ ಬಾಲಕನಿಗೆ ಉಚಿತ ಶಿಕ್ಷಣ ಮತ್ತು ವಸತಿಯನ್ನು ನೀಡಿರುತ್ತಾರೆಂದು ತಿಳಿಸಿದರು.
೧೦ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ೦೬ ಮಕ್ಕಳಿಗೆ ತಲಾ ರೂ. ೨೫೦೦/- ಮೊತ್ತವನ್ನು ಬಹುಮಾನವಾಗಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೀದರ ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕಿ ರೂಪ ಎಸ್. ಕೋಟೆ ಗೌಡರ್, ಸರಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಮಹಾನಂದಾ, ಸರಕಾರಿ ವೀಕ್ಷಣಾಲಯದ ಅಧೀಕ್ಷಕಿ ಸುನೀತಾ ರಾಠೋಡ ಸೇರಿದಂತೆ ಮಕ್ಕಳು, ಪಾಲಕರು/ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಗೌರಿಶಂಕರ ಪರತಾಪೂರೆ ನಿರ್ವಹಿಸಿದರು, ಪ್ರಶಾಂತ ಬಿರಾದಾರ ಸ್ವಾಗತವನ್ನು ಕೋರಿದರು. ರಘುನಾಥ ವಂದನಾರ್ಪಣೆಯೊAದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

























