
ಗುರುಮಠಕಲ್:ಡಿ.೩೦: ಮಿನಿ ನಾವಿನ್ಯತೆ ಕೇಂದ್ರದ ವತಿಯಿಂದ ಆವಿಷ್ಕಾರ ಮೇಳ ಯಶಸ್ವಿ
ಸಮಗ್ರ ಶಿಕ್ಷಣ ಕರ್ನಾಟಕ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕೃತಿಕ ಸಂಘ (ರಿ)
ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಆಶ್ರಯದಲ್ಲಿ ಮಿನಿ ನಾವಿನ್ಯತೆ ಕೇಂದ್ರ, ಗುರುಮಠಕಲ್ ವತಿಯಿಂದ ಇಂದು ಡಿ. ೨೯-೨೦೨೫ ರಂದು ಗುರುಮಠಕಲ್ ತಾಲ್ಲೂಕಿನ ಸರಕಾರಿ ಪ್ರೌಢಶಾಲೆ ಪುಟಪಾಕ್ ಶಾಲೆಯಲ್ಲಿ ಆವಿಷ್ಕಾರ ಮೇಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಹೇಮಲತಾ ಶೆಟ್ಟಿ ಅವರು ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ರೆಡ್ಡಿ, ಶಿವರಾಜ ಸಾಕ, ಅಶೋಕ ಕುಮಾರ, ಕಾಶಿನಾಥ, ನರಸಪ್ಪ, ನಾಗರಾಜ, ಬಸವರಾಜ ಹಾಗೂ ದೀಪಾಕ್ ಅವರು ಹಾಗೂ ಮಿನಿ ನಾವಿನ್ಯತೆ ಕೇಂದ್ರ ಗುರುಮಠಕಲ್‌ನ ಮುಖ್ಯಸ್ಥರಾದ ನಾಗೇಶ್ ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ನಾಗೇಶ್ ಡಿ ಅವರು ಮಾತನಾಡಿ ವಿನ್ಯಾಸ ಚಿಂತನೆಯ ಪ್ರಕ್ರಿಯೆಯ ವಿವಿಧ ಹಂತಗಳನ್ನು ಆಧರಿಸಿ ಈ ಆವಿಷ್ಕಾರ ಮೇಳವನ್ನು ಆಯೋಜಿಸಿರುವುದು ಸಂತೋಷದ ವಿಷಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡ ಸಮಸ್ಯೆಗಳಿಗೆ ಮಾದರಿಗಳ ಮೂಲಕ ಪರಿಹಾರ ಕಂಡುಕೊAಡಿದ್ದಾರೆ ಹಾಗೂ ಮಕ್ಕಳಲ್ಲಿ ಅನ್ವೇಷಣೆಯ ಮನೋಭಾವನೆ ಮತ್ತು ಆವಿಷ್ಕಾರ ಚಿಂತನೆ ಬೆಳೆಸುವುದು ಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಅಧ್ಯಕ್ಷತೆ ಭಾಷಣದಲ್ಲಿ ಮಾತನಾಡಿದ ಶ್ರೀಮತಿ ಹೇಮಲತಾ ಶೆಟ್ಟಿ ಮೇಡಂ ಅವರು, ಈ ರೀತಿಯ ಆವಿಷ್ಕಾರ ಮತ್ತು ವಿಜ್ಞಾನಾಧಾರಿತ ಕಾರ್ಯಕ್ರಮಗಳು ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಬಹಳ ಸಹಕಾರಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಆವಿಷ್ಕಾರ ಮೇಳದಲ್ಲಿ ೮ನೇ ತರಗತಿ ವಿದ್ಯಾರ್ಥಿಗಳು ವಿನ್ಯಾಸ ಚಿಂತನೆ ಆಧಾರಿತ ಮಾದರಿಗಳನ್ನು ಹಾಗೂ ೯ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬAಧಿಸಿದ ಮಾದರಿಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ವಿನ್ಯಾಸ ಚಿಂತನೆಯ ಮೂಲ ಮಾದರಿಗಳು ಸುಮಾರು ೧೦ ರಿಂದ ೧೫ ಹಾಗೂ ವಿಜ್ಞಾನ ಸಂಬAಧಿತ ೨೦ ರಿಂದ ೩೦ ಮಾದರಿಗಳು ಸೇರಿದಂತೆ ಒಟ್ಟಾರೆ ಸುಮಾರು ೫೦ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಆವಿಷ್ಕಾರ ಮೇಳದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು.

























