ವಿಕಲಚೇಲನರ ಸವಲತ್ತುಗಳ ಕುರಿತು ಮಾಹಿತಿ

ಕೋಲಾರ,ನ.೨೮: ಕೆ.ಜಿ.ಎಫ್‌ನ ಶಾಂತಿ ಆಶ್ರಮದಲ್ಲಿ ವಿಕಲಚೇತನರಿಗೆ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಸ್ಕಂ ಅಧ್ಯಕ್ಷ ವೆಂಕಟೇಶನ್ ಮಾತನಾಡಿ, ಆಶ್ರಮದಲ್ಲಿ ನಾನಾ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತೆ ಅದರಲ್ಲಿ ವಿಶೇಷ ಅಂದರೆ ಈ ರೀತಿ ವಿಕಲಚೇತನರೊಂದಿಗೆ ನಾವು ಕೈಜೋಡಿಸಿ ಕಾರ್ಯಕ್ರಮವನ್ನು ಮಾಡುವುದು ನಮಗೆ ಮತ್ತು ನಮ್ಮ ಸಂಸ್ಥೆಗೆ ಒಳ್ಳೆಯ ಕಾರ್ಯವಾಗಿದೆ ಆದುದರಿಂದ ಮುಂದಿನ ದಿನಗಳಲ್ಲಿ ಇವರೊಂದಿಗೆ ನಾವು ನಮ್ಮೊಂದಿಗೆ ಇವರು ಸಹ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಉದಾರ ಮನಸ್ಸಿನಿಂದ ತಿಳಿಸಿಕೊಟ್ಟರು.


ಕೆಇಬಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹಾಗೂ ಸುಮತಿ ನಗರ್ ಅಸೋಸಿಯೇಷನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಕಾರ್ಯಕ್ರಮದಲ್ಲಿ ವಿಕಲಚೇತನನ್ನು ನೋಡಿ ಭಾವುಕರಾಗಿ ಮಾತನಾಡುತ್ತಾ, ವಿಕಲಚೇತನರು ಈ ರೀತಿ ಸಾಧನ ಸಲಕರಣೆಗಳನ್ನು ಉಪಯೋಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದರು.


ಸ್ವಾಭಿಮಾನ ವಿಕಲಚೇತನರ ಸಂಘದ ಅಧ್ಯಕ್ಷ ಹಾಗೂ ಸಂಸ್ಥಾಪಕ ಡಾ.ಎಸ್.ಹೆನ್ರಿ ಜೋಸೆಫ್ ಮಾತನಾಡಿ, ಸಂಘದಲ್ಲಿ ನಾನಾ ಕಾರ್ಯಕ್ರಮಗಳನ್ನು ನಮ್ಮ ಕೋಲಾರ ಜಿಲ್ಲೆಯ ಸುತ್ತಮುತ್ತಲಿನ ತಾಲೂಕುಗಳಲ್ಲಿ ಸುಮಾರು ವರ್ಷಗಳಿಂದ ಮಾಡುತ್ತ ಬರುತ್ತಿದ್ದು ಇದರ ಸದುಪಯೋಗಗಳನ್ನು ಜಿಲ್ಲೆಯ ವಿಕಲಚೇತನರು ಪಡೆದುಕೊಂಡು ಜೀವನವನ್ನು ಪ್ರೀತಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬಂದು ಗುರುತಿಸಿಕೊಂಡು ಸಮಾಜದಲ್ಲಿ ಬದುಕಬೇಕು ನಾವು ಅವಕಾಶವಾದಿಗಳು ಮತ್ತು ಅವಕಾಶಗಳನ್ನು ಬಳಸಿಕೊಂಡು ಜೀವನವನ್ನು ರೂಪಿಸಿಕೊಂಡು ನಮಗೆ ಅನುಕಂಪ ಬೇಡ ಅವಕಾಶ ನೀಡಿ ಎಂಬ ಆತ್ಮಸ್ಥೈರ್ಯವನ್ನು ತುಂಬಿದರು.


ಇದೇ ರೀತಿ ನಾವು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತೇವೆ ಸ್ಥಳೀಯ ದಾನಿಗಳು ನಮಗೆ ಸಹಾಯವನ್ನು ಮಾಡಿದ್ದಲ್ಲಿ ಇನ್ನೂ ಈ ರೀತಿಯ ಕಾರ್ಯಕ್ರಮಗಳು ಮಾಡುವುದಕ್ಕೆ ನಮಗೆ ಧೈರ್ಯ ತುಂಬಿದಂತಾಗುತ್ತದೆ ಎಂಬ ವಿಷಯಗಳನ್ನು ನುಡಿದರು ೩೦ ಜನ ವಿಕಲಚೇತನರಿಗೆ ಉಚಿತವಾಗಿ ವೀಲ್ ಚೇರ್‌ಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಭುವನೇಶ್ವರಿ ಖಜಾಂಚಿ ಮತ್ತು ಹಾಗೂ ಶಾಂತಿ ಆಶ್ರಮದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.