Home ಜಿಲ್ಲೆ ಬೀದರ್ ತಾಲ್ಲೂಕು ಕರವೇ ಪದಾಧಿಕಾರಿಗಳ ಪದಗ್ರಹಣ

ಬೀದರ್ ತಾಲ್ಲೂಕು ಕರವೇ ಪದಾಧಿಕಾರಿಗಳ ಪದಗ್ರಹಣ

ಬೀದರ್,ಆ.೩೦: ಜಿಲ್ಲೆಯ ಪ್ರತಿ ಹೋಬಳಿ ಹಾಗೂ ಗ್ರಾಮಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಘಟಕ ರಚಿಸುವ ಗುರಿ ಹೊಂದಲಾಗಿದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಹೇಳಿದರು.
ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಬೀದರ್ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇದಿಕೆಯ ಎಲ್ಲ ತಾಲ್ಲೂಕು ಘಟಕಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬರುವ ದಿನಗಳಲ್ಲಿ ವೇದಿಕೆಯನ್ನು ಇನ್ನಷ್ಟು ಬಲಗೊಳಿಸಲಾಗುವುದು ಎಂದು ತಿಳಿಸಿದರು.
ಟಿ.ಎ. ನಾರಾಯಣಗೌಡರ ಸಾರಥ್ಯದ ವೇದಿಕೆ ೨೭ ವರ್ಷಗಳಿಂದ ಕನ್ನಡ ನಾಡು, ನುಡಿ ರಕ್ಷಣೆ, ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಾ ಬಂದಿದೆ. ಮುಂದೆಯೂ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ವೇದಿಕೆಯ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ವೀರಶೆಟ್ಟಿ ಗೌಸಪುರ ಮಾತನಾಡಿ, ತಾಲ್ಲೂಕಿನಲ್ಲಿ ವೇದಿಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಬರುವ ದಿನಗಳಲ್ಲಿ ಇನ್ನೂ ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊAಡು ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ವೇದಿಕೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಖಾದರ್ ಪಾಷಾ, ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಬಂಡೆಪ್ಪ ಕರ್ಸಣ್ಣ, ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷÀ ಸಚಿನ್ ತಿಪಶೆಟ್ಟಿ, ಪ್ರಮುಖರಾದ ಶ್ರೀಮಂತ ಬಿರಾದಾರ, ರೇವಣಸಿದ್ದ ಬಂಬಳಗಿ, ಸೋಮಶೇಖರ ಸಜ್ಜನ್, ಸತೀಶ್ ಗುತ್ತೆದಾರ್, ತಾಲ್ಲೂಕು ಘಟದ ಉಪಾಧ್ಯಕ್ಷರಾದ ಪಂಢರಿ ನಾರಾಯಣ, ಸುನೀಲ್ ಅಲಿಯಾಬಾದ್, ಕಾರ್ಯದರ್ಶಿಗಳಾದ ಅಲ್ಲಾಬಕ್ಷ ಹೊನ್ನಡ್ಡಿ, ನಾಗೇಶ್ ಉಪ್ಪಾರ, ಅಶೋಕ್ ಆನಂದ, ನಾಗೇಶ್ ಚಿಂತಲಗೇರಾ, ರಾಜಗೊಂಡ ಬರೂರ ಮತ್ತಿತರರು ಇದ್ದರು.
ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಧರ್ಮಪುರ ಸ್ವಾಗತಿಸಿದರು. ಗೌರವಾಧ್ಯಕ್ಷ ಚಂದ್ರಕಾAತ ಮಡಕಿ ನಿರೂಪಿಸಿದರು.