
ವಿಜಯಪುರ,ಜ೨೬: ಪಟ್ಟಣದ ನಿವಾಸಿ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ. ಪ್ರಶಾಂತ ಇವರಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ ಬೆಂಗಳೂರು ನಗರ ಜಿಲ್ಲಾ ಮೇರಾ ಯುವ ಭಾರತ್ ವತಿಯಿಂದ ಆಯೋಜಿಸಲಾದ ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಎಂಬ ಪ್ರಶಸ್ತಿಯನ್ನು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ .ಡಿ. ಗೋವಿಂದಪ್ಪ ವಿತರಿಸಿ ಮಾತನಾಡಿ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ಈ ವೈವಿಧ್ಯತೆಯನ್ನು ಅರಿಯಲು ದೇಶದ ಯುವಜನತೆಯನ್ನು ಒಂದುಗೂಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗ್ಗಿದ್ದು ಇದು ಒಂದು ಪ್ರವಾಸದ ಬದಲಾಗಿ ಜ್ಞಾನ ಮತ್ತು ಸಂಸ್ಕೃತಿಯನ್ನು ಯುವಜನರಿಗೆ ಹಂಚುವ ಕಾರ್ಯಕ್ರಮಗಳಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಮೇರಾ ಯುವ ಭಾರತ್ ನಾ ರಾಜ್ಯ ನಿರ್ದೇಶಕ ಅಶೋಕ್ ಕುಮಾರ್ ದಾಶ್, ಬೆಂಗಳೂರು ನಗರ ಜಿಲ್ಲಾ ಯುವ ಅಧಿಕಾರಿ ಎ.ನಾಗಲಕ್ಷ್ಮಿ, ಸಹಾಯಕ ಕಾರ್ಯಕ್ರಮಾಧಿಕಾರಿ ಡಿಂಪಲ್ ಪ್ರತೀಕ್ ಶೃಂಗೇರಿ, ಹಿರಿಯ ಸರ್ವೋದಯ ಕಾರ್ಯಕರ್ತ ಇ.ಪಿ ಮೆನನ್, ಎಂ. ಎಸ್. ಕಾಲೇಜಿನ ಪ್ರಾಂಶುಪಾಲೆ ನಂದಿನಿ ಪ್ರಕಾಶ್, ಸಮಾಜ ಸೇವಕ ಏಜೆಸ್ ಭಾಷಾ, ಸ್ವಯಂ ಸೇವಕರಾದ ಆರ್.ನಿಖಿಲ್, ಡಿ ವರ್ಷಕ್ ಹಾಜರಿದ್ದರು.



























