
ಮಾದನಹಿಪ್ಪರಗಿ: ಫೆ.೧೪:ಒಂದು ಗ್ರಾಮ ಒಂದು ಸಂಸ್ಕೃತಿಕವಾಗಿ, ಧಾರ್ಮಿಕವಾಗಿ ಎತ್ತರಕ್ಕೆ ಬೆಳೆಯಲು ಅಲ್ಲಿನ ಮಠಗಳ ಪೂಜ್ಯರ ಶ್ರಮ ಮತ್ತು ಮಾರ್ಗದರ್ಶನವಿರುತ್ತದೆ. ಈ ನಾಡಿನಲ್ಲಿ ವೀರಶೈವ ಲಿಂಗಾಯತ ಮಠಗಳು ಸಂಪ್ರದಾಯ ಸಂಸ್ಕೃತಿ ನಾಗರೀಕತೆಗೆ ವಿಶ್ವಕ್ಕೆ ಮಾದರಿಯಾಗಿವೆ ಎಂದು ನಂದಗಾAವ ವಿರಕ್ತ ಮಠದ ಡಾ.ರಾಜಶೇಖರ ಸ್ವಾಮಿಗಳು ನುಡಿದರು.
ಇಂದು ಮಾದನಹಿಪ್ಪರಗಿಯ ಸಂಗಮೇಶ್ವರ ಹಾಗೂ ಖಂಡೇಶ್ವರ ದೇವಸ್ಥಾನ ನೂತನ ಮಹಾದ್ವಾರ ಉದ್ಘಾಟಿಸಿ ಧರ್ಮ ಸಭೆಯನ್ನುದ್ದೇಶಿಸಿ ಮಾತನಾಡುತ್ತ, ಈಗಿನ ಕಾಲದಲ್ಲಿ ಎಲ್ಲಾ ರೀತಿಯ ಅನುಕೂಲಗಳಿದ್ದರು ದೇವರು, ಧರ್ಮ, ಜಾತ್ರೆ ಉತ್ಸವಗಳು ಮಾಡಲು ಇಚ್ಛಾಶಕ್ತಿ ಇರುವುದಿಲ್ಲ. ಈ ಗ್ರಾಮದ ಭಕ್ತರು ಪುಣ್ಯಕಾರ್ಯಗಳಿಗೆ ಧಾರ್ಮಿಕ ಕಾರ್ಯಗಳಿಗೆ ಸದಾ ಮುಂದೆ. ಭಾರತೀಯ ಸಂಸ್ಕೃತಿ, ನಾಗರೀಕತೆ ಜಗತ್ತಿನಲ್ಲಿ ಶ್ರೇಷ್ಠವಾಗಿದೆ. ಜಾತಿ ಮತ ಪಂಗಡಗಳಿದ್ದರೂ ನಾವೆಲ್ಲರೂ ಒಂದೇ ಎಂದು ಅರಿತುಕೊಂಡು ಹೋಗುವ ಧರ್ಮವೇ ವೀರಶೈವ ಧರ್ಮವಾಗಿದೆ. ಬಸವಣ್ಣನ ತತ್ವದಡಿಯಲ್ಲಿ ಎಲ್ಲರೂ ನನ್ನವರು ಎನ್ನುವ ಪರಂಪರೆಯಲ್ಲಿ ಧರ್ಮ, ನ್ಯಾಯ, ನೀತಿಯಲ್ಲಿ ಬಾಳಲು ಎಲ್ಲರು ಕೈ ಜೋಡಿಸಿದ್ದಾರೆ. ಜಾತ್ರೆ ಉತ್ಸವಗಳ ತವರೂರು ಮಾದನಹಿಪ್ಪರಗಿಯಲ್ಲಿ ತಿಂಗಳಿಗೊAದು ಜಾತ್ರೆ ಉತ್ಸವ ನಡೆದೇ ಇರುತ್ತದೆ. ಯುವಕರು ಧರ್ಮ ಗುರುಪರಂಪರೆ ನ್ಯಾಯದ ದಾರಿಯಲ್ಲಿ ಸಾಗಲು ಇಂತ ಧರ್ಮ ಸಭೆಗಳು ಅವಶ್ಯವಾಗಿವೆ ಎಂದರು. ಧರ್ಮ ಸಭೆಯನ್ನು ಉದ್ಗಾಟಿಸಿದ ಯಳಸಂಗಿಯ ಸಿದ್ದಾರೂಢ ಮಠದ ಪರಮಾನಂದ ಸ್ವಾಮಿಗಳು ಮಾತನಾಡಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾದರೆ ಅಲ್ಲಿ ರೋಗಿಗಳ ತವರೂರ, ಪೊಲೀಸರ ಠಾಣೆಗಳು ಹೆಚಾಗಿದ್ದರೆ ಕಳ್ಳರು, ಲಫಂಗರು, ಅಪರಾಧಿಗಳು ಹೆಚ್ಚಾಗಿದ್ದಾರೆಂದು ಅರ್ಥ. ಹಾಗೇ ಎಲ್ಲಿ ಸತ್ಸಂಗಗಳು ಅಧ್ಯಾತ್ಮಕ ಪ್ರವಚನಗಳು ಜಾತ್ರೆಗಳು ನಡೆಯುತ್ತವೆಯೋ ಅಲ್ಲಿ ಸಂಸ್ಕಾರವAತರ ತರೂರು ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ ಎಂದರು.
ಸೋಲಾಪುರ ಲೋಕ ಸಭೆಯ ಮಾಜಿ ಸಂಸದ ಹಾಗೂ ಗೌಡಗಾಂವ ಸಂಸ್ಥಾನ ಹಿರೇಮಠದ ಡಾ.ಜಯಸಿದ್ದೇಶ್ವರ ಶಿವಾಚಾರ್ಯರು ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತ, ಈ ಗ್ರಾಮವೂ ಈ ನಾಡಿಗೆ ಸುಮಾರು ೨೦ ಮಠಾಧೀಶರನ್ನು ನೀಡಿದೆ. ಗುರುಪರಂಪರೆಯಲ್ಲಿ ಎಲ್ಲವೂ ಮುಂದೆ ಸಾಗಿದೆ. ದೇವರು ನಮಗೆ ಎಲ್ಲವನ್ನು ದಾನದ ರೂಪದಲ್ಲಿ ಕೊಟ್ಟಿದ್ದಾನೆ. ಗಾಳಿ ನೀರು ಬೆಳಕು ಎಲ್ಲವನ್ನು ನೀಡಿದ್ದಾನೆ. ಅವನ ಸ್ಮರಣೆಯಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು. ಉಪ್ಪಿನ ಬೆಟಗೇರಿ ಕುಮಾರ ವಿರೂಪಾಕ್ಷ ಸ್ವಾಮಿಗಳು , ಸ್ಥಳೀಯ ಹಿರೇಮಠದ ಶಾಂತವೀರ ಶಿವಾಚಾರ್ಯರು, ಆಳಂದದ ರೇವಣಸಿದ್ದ ಶಿವಶರಣ ಮಂಟಪದ ಚೆನ್ನಬಸವ ಪಟ್ಟದೇವರು ಮಾತನಾಡಿದರು. ವೇದಿಕೆಯ ಮೇಲೆ ಅಭಿನವ ಶಿವಲಿಂಗ ಸ್ವಾಮಿಗಳು, ಸರಸಂಬಾದ ವೀರಸೋಮಶ್ವರ ದೇವರು ಹಾಗು ಕಲಬುರಗಿ ಬೀದರ ಯಾದಗೀರ ಹಾಲೂ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ಉಪಸ್ಥಿತರಿದ್ದರು.
ಇಂದು ಮುಂಜಾನೆ ಖಂಡೇಶ್ವರ ಪಾದಗಟ್ಟೆಯಿಂದ ಬೃಹತ ಕುಂಬೋತ್ಸವ ಹಾಗೂ ಕಳಸಗಳ ಮೆರವಣಿಗೆ ನಡೆದು ನಂತರ ದೇವಸ್ಥಾನದಲ್ಲಿ ಅಕ್ಕಮಹಾದೇವಿ ಹಾಗೂ ನಂದಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಗುರುಶಾಂತೇಶ್ವರ ವೈದಿಕ ವೃಂದದರಿAದ ಹೋಮ ಹವನ ಕಾರ್ಯಕ್ರಮ ಜರುಗಿತು.



























