Home ಜಿಲ್ಲೆ ಭಾರತದ ಸಂವಿಧಾನ ಜಗತ್ತಿಗೆ ಮಾದರಿ

ಭಾರತದ ಸಂವಿಧಾನ ಜಗತ್ತಿಗೆ ಮಾದರಿ

ಚನ್ನಮ್ಮನ ಕಿತ್ತೂರು,ಮಾ22: ಭಾರತದ ಸಂವಿಧಾನ ಜಗತ್ತಿಗೆ ಮಾದರಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ ಕಾಂಬಳೆ ಹೇಳಿದರು.


ಸಮೀಪದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಬೆಳಗಾವಿ ಇತಿಹಾಸ ವಿಭಾಗ, ಸಮಾಜ ವಿಜ್ಞಾನ ಸಂಘ ಹಾಗೂ ಐ.ಕ್ಯೂ.ಎ.ಸಿ.ಗಳ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತೀಯ ಸಂವಿಧಾನದ ಚಾರಿತ್ರಿಕ ಬೆಳವಣಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ. ಭಾರತದ ಸಂವಿಧಾನವು ಡಾ.ಬಿ.ಆರ್. ಅಂಬೇಡ್ಕರ್‍ರವರ ಮಾರ್ಗದರ್ಶನದಲ್ಲಿ ಬುದ್ಧನ ಸಮಾನತೆ , ಸ್ವಾತಂತ್ರ್ಯ ಹಾಗೂ ಭ್ರ್ರಾತೃತ್ವ ತತ್ವಗಳ ಮೇಲೆ ರೂಪಿತವಾಗಿದೆ. ಅಂಬೇಡ್ಕರ ಅವರು ಭೌದ್ಧ ಧರ್ಮದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಭಾರತೀಯ ಸಂವಿಧಾನದ ರಚನೆಯ ಹಿಂದೆ ಅನೇಕ ಚಾರಿತ್ರಿಕ ಅಂಶಗಳು ಅಡಗಿವೆ. ಬ್ರಿಟಿಷರು ಭಾರತದಲ್ಲಿ ತಮ್ಮ ಆಡಳಿತದ ಅನುಕೂಲಕ್ಕಾಗಿ ಅನೇಕ ಕಾಯ್ದೆಗಳನ್ನು ಜಾರಿಗೆ ತಂದರು.

ಅವುಗಳಲ್ಲಿ ರೆಗ್ಯುಲೆಟಿಂಗ್ ಕಾಯ್ದೆ, ಚಾರ್ಟರ್ ಕಾಯ್ದೆಗಳು ಹಾಗೂ 1909, 1919 ಹಾಗೂ 1935ರ ಕಾಯ್ದೆಗಳು ಭಾರತೀಯ ಸಂವಿಧಾನ ರಚನೆಯಲ್ಲಿ ಮಹತ್ವದ ಮೂಲಾಧಾರಗಳಾಗಿವೆ ಎಂದರು.
ಪ್ರಾಚಾರ್ಯ ಡಾ. ಎಸ್. ಸಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸರ್ವತೋಮೂಖ ಅಭಿವೃದ್ಧಿಗಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಉಪಪ್ರಾಚಾರ್ಯ ಡಾ. ಅರ್ಜುನ ಜಂಬಗಿ ಪ್ರಸ್ಥಾವಿಕವಾಗಿ ಮಾತನಾಡಿ ಭಾರತೀಯ ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ ರವರ ಶ್ರಮ ಹಾಗೂ ಕೊಡುಗೆಗಳ ಕುರಿತು ವಿವರಿಸಿದರು.


ಈ ವೇಳೆ ಉಪನ್ಯಾಸಕ ಡಾ. ಸದಾಶಿವ ಮುಗಳಿ, ಡಾ. ನೂತನ ದೇಸಾಯಿ, ವಾಣಿಜ್ಯ ಶಾಸ್ತ್ರ ಡಾ. ಮುಕುಂದ ಮುಂಡರಗಿ, ಕಾಲೇಜಿನ ಎಲ್ಲ ಬೋಧಕÀ, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು. ಸ್ವಾಗತ ಸಾಕ್ಷೀ ಬಾಳಕರ, ಅತಿಥಿ ಪರಿಚಯ ಜ್ಯೋತಿ ಚಾಪಗಾಂವ, ಪ್ರಾರ್ಥಣೆ ಪ್ರಿಯಾಂಕಾ ತಿಲಗರ, ನಿರೂಪಣೆ ವಿದ್ಯಾಶ್ರೀ ಜನಗೌಡ, ಲಕ್ಷ್ಮೀ ಕದಮ ವಂದಿಸಿದರು.