ಮೋದಿ ವಿಶ್ವಾಸ
ಪಾಟ್ನಾಅ.೪- ೨೦೧೪ ರ ಮೊದಲು, ಭಾರತವನ್ನು ದುರ್ಬಲ ಆರ್ಥಿಕತೆಯ ದೇಶ ಎಂದು ಪರಿಗಣಿಸಲಾಗಿತ್ತು, ಆದರೆ ಇಂದು ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕ ದೇಶವಾಗಿದೆ.ಶೀಘ್ರದಲ್ಲೇ ಮೂರನೇ ಆರ್ಥಿಕ ರಾಷ್ಟ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಈ ಮುಂಚೆ ಬೆಳವಣಿಗೆ ದರ ,ಉದ್ಯೋಗ ನೇಮಕಾತಿ ಪ್ರಮಾಣ ತುಂಬಾ ಕಡಿಮೆಯಾಗಿತ್ತು. ಈಗ ಅಭಿವೃದ್ಧಿ ಗೆ ಆದ್ಯತೆ ನೀಡಲಾಗಿದೆ. ದೇಶದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಇರುವ ರಾಜ್ಯಗಳಲ್ಲಿ ಪ್ರಗತಿಯ ವೇಗ ಹೆಚ್ಚಾಗಿದೆ ಅದಕ್ಕೆ ಬಿಹಾರವೇ ಸಾಕ್ಷಿ ಎಂದಿದ್ದಾರೆ
ಯುವಜನರನ್ನು ಕೌಶಲ್ಯಭರಿತರನ್ನಾಗಿ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ದೇಶಾದ್ಯಂತ ೧,೦೦೦ ಐಟಿಐ ಮೇಲ್ದರ್ಜೆಗೇರಿಸಲು ೬೨,೦೦೦ ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಪಿಎಂ-ಸೇತು ಉಪಕ್ರಮಕ್ಕೆ ಬಿಹಾರ ರಾಜಧಾನಿ ಪಾಟ್ನದಲ್ಲಿಂದು ಚಾಲನೆ ನೀಡಿ ಮಾತನಾಡಿದ ಅವರು ದೇಶದಲ್ಲಿ ’ಜಿಎಸ್‌ಟಿ ಉಳಿತಾಯ ಉತ್ಸವ’ ನಡೆಯುತ್ತಿದೆ. ಬೈಕ್‌ಗಳು ಮತ್ತು ಸ್ಕೂಟರ್‌ಗಳ ಮೇಲಿನ ಜಿಎಸ್‌ಟಿ ಕಡಿತದಿಂದ ಯುವ ಸಮುದಾಯ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಅಗತ್ಯವಿರುವ ಹೆಚ್ಚಿನ ವಸ್ತುಗಳ ಮೇಲೆ ಜಿಎಸ್‌ಟಿ ಕಡಿತಗೊಳಿಸಿದ್ದಕ್ಕಾಗಿ ಬಿಹಾರದ ಯುವಕರು ಮತ್ತು ದೇಶದ ಯುವಕರಿಗೆ ಅನುಕುಲವಾಗಿದೆ ಎಂದು ತಿಳಿಸಿದ್ದಾರೆ
ಕಳೆದ ಕೆಲವು ವರ್ಷಗಳಲ್ಲಿ ಬಿಹಾರದ ಯುವಕರಿಗೆ ಸುಮಾರು ೧೦ ಲಕ್ಷ ಶಾಶ್ವತ ಸರ್ಕಾರಿ ಉದ್ಯೋಗ ನೀಡಿರುವುದೂ ಸೇರಿದಂತೆ ಎರಡು ದಶಕಗಳ ಅವಧಿಯಲ್ಲಿ ರಾಜ್ಯದಲ್ಲಿ ೫೦ ಲಕ್ಷ ಯುವಕರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದ್ದಾರೆ
“ಬಿಹಾರದ ಯುವಕರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಎನ್‌ಡಿಎ ಸರ್ಕಾರ ಸಂಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದೆ. ಆರ್‍ಜೆಡಿ-ಕಾಂಗ್ರೆಸ್ ಆಡಳಿತಕ್ಕೆ ಹೋಲಿಸಿದರೆ ಬಿಹಾರದ ಶಿಕ್ಷಣ ಬಜೆಟ್ ಅನ್ನು ಹಲವಾರು ಪಟ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ
ಬಿಹಾರದ ಬಹುತೇಕ ಪ್ರತಿಯೊಂದು ಹಳ್ಳಿಯಲ್ಲೂ ಶಾಲೆ ಇದೆ. ಎಂಜಿನಿಯರಿಂಗ್ ಕಾಲೇಜುಗಳಾಗಲಿ ಅಥವಾ ವೈದ್ಯಕೀಯ ಕಾಲೇಜುಗಳಾಗಲಿ, ಅವುಗಳ ಸಂಖ್ಯೆಯೂ ಹಲವು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ
ಇತ್ತೀಚೆಗೆ, ಕೇಂದ್ರ ಸರ್ಕಾರ ಬಿಹಾರದ ೧೯ ಜಿಲ್ಲೆಗಳಿಗೆ ಕೇಂದ್ರೀಯ ವಿದ್ಯಾಲಯ ತೆರೆಯಲು ಅನುಮತಿ ನೀಡಿದೆ, ಬಿಹಾರದಲ್ಲಿ ಕ್ರೀಡೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಟ್ಟದ ಮೂಲಸೌಕರ್ಯ ಸಹ ಹೊಂದಿರದ ಕಾಲವಿತ್ತು. ಬಿಹಾರದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ನಡೆಸುತ್ತಿದೆ ಎಂದಿದ್ದಾರೆ.
ಎರಡೂವರೆ ದಶಕಗಳ ಹಿಂದೆ ಬಿಹಾರದಲ್ಲಿ ಶಿಕ್ಷಣ ವ್ಯವಸ್ಥೆ ಎಷ್ಟು ವಿನಾಶಕಾರಿಯಾಗಿತ್ತು ಎಂಬುದನ್ನು ಪೀಳಿಗೆಗೆ ಅರಿವಿಲ್ಲದಿರಬಹುದು. ಶಾಲೆಗಳು ತೆರೆದಿರಲಿಲ್ಲ, ನೇಮಕಾತಿ ನಡೆಯುತ್ತಿರಲಿಲ್ಲ, ಹೀಗಾಗಿ ಲಕ್ಷಾಂತರ ಮಕ್ಕಳು ಬಿಹಾರವನ್ನು ತೊರೆದು ವಾರಣಾಸಿ, ದೆಹಲಿ ಮತ್ತು ಮುಂಬೈಗೆ ಹೋಗಬೇಕಾಯಿತು. ಆದರ ಇಂದು ಬಿಹಾರದ ಜನರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸರ್ಕಾರದ ಜವಾಬ್ದಾರಿ ವಹಿಸಿದ ನಂತರ ಎನ್‌ಡಿಎ ಸರ್ಕಾರ ತಂಡವಾಗಿ ಕೆಲಸ ಮಾಡಿತ್ತಿದೆ. ಇದರಿಂದ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲವಾಗಿದೆ ಎಂದಿದ್ದಾರೆ.
ಕರ್ಪೂರಿ ಠಾಕೂರ್ ಅವರನ್ನು ಸಾಮಾಜಿಕ ಮಾಧ್ಯಮದ ಟ್ರೋಲ್‌ಗಳು ’ಜನ ನಾಯಕ್’ ಮಾಡಲಿಲ್ಲ. ಬಿಹಾರದ ಜನರು ಅವರನ್ನು ’ಜಟಿ ನಾಯಕ್’ ಮಾಡಿದರು. ಈ ಹಿನ್ನೆಲೆಯಲ್ಲಿ ಬಿಹಾರದ ಜನರು ಜಾಗರೂಕರಾಗಿರಬೇಕು. ಇತ್ತೀಚಿನ ದಿನಗಳಲ್ಲಿ, ’ಜನ ನಾಯಕ್’ ಎಂಬ ಬಿರುದನ್ನು ಸಹ ಕದಿಯಲು ಪ್ರಯತ್ನಿಸುತ್ತಿದ್ದಾರೆ. ಕರ್ಪೂರಿ ಠಾಕೂರ್ ಅವರಿಗೆ ಜನರು ನೀಡಿರುವ ಗೌರವವನ್ನು ಕದಿಯದಂತೆ ಬಿಹಾರದ ಜನರು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ
ಬಿಹಾರದಲ್ಲಿ ಹೊಸ ಕೌಶಲ್ಯ ವಿಶ್ವವಿದ್ಯಾಲಯ ಆರಂಭಿಸಲಾಗಿದ್ದು ಅದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ ಈ ವಿಶ್ವವಿದ್ಯಾಲಯಕ್ಕೆ ಭಾರತ ರತ್ನ ಕರ್ಪೂರಿ ಠಾಕೂರ್ ಅವರ ಹೆಸರನ್ನು ಇಟ್ಟಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ, ಸರ್ಕಾರ ಐಟಿಐ ವಿದ್ಯಾರ್ಥಿಗಳಿಗಾಗಿ ಘಟಿಕೋತ್ಸವ ಹೊಸ ಸಂಪ್ರದಾಯ ಆರಂಬಿಸಲಾಯಿತು. ಭಾರತ ಕೌಶಲ್ಯಗಳಿಗೆ ನೀಡುವ ಪ್ರಾಮುಖ್ಯತೆ ನೀಡುತ್ತಿದೆ. ದೇಶಾದ್ಯಂತ ಯುವಕರಿಗಾಗಿ ಇನ್ನೂ ಎರಡು ಪ್ರಮುಖ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ಜಯಂತ್ ಚೌಧರಿ ಮಾತನಾಡಿ. ಹನ್ನೊಂದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಮಹತ್ವ ಗುರುತಿಸಿ, ಹೊಸ ಇಲಾಖೆ ಸ್ಥಾಪಿಸುವ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದರು. ೨೦೪೭ ರ ವೇಳೆಗೆ ದೇಶ ಅಭಿವೃದ್ಧಿ ಹೊಂದಬೇಕು ಎಂಬ ದೃಷ್ಟಿಕೋನವನ್ನು ಹಿನ್ನೆಲೆಗೆ ಅಡಿಪಾಯ ಹಾಕಿದ್ದಾರೆ ಎಂದು ತಿಳಿಸಿದರು
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ ದೇಶಾದ್ಯಂತದ ಐಟಿಐ ಟಾಪರ್‌ಗಲಿಳಿಗೆ ಕೌಶಲ್ಯ ಘಟಿಕೋತ್ಸವ ಸಮಾರಂಭ ಆಯೋಜಿಸಿರುವುದು ಬಹಳ ಸಂತೋಷದ ವಿಷಯ”.ಯುವ ಆಯೋಗ ಮತ್ತು ಜನ್ ನಾಯಕ್ ಕರ್ಪೂರಿ ಠಾಕೂರ್ ಕೌಶಲ್ಯ ವಿಶ್ವವಿದ್ಯಾಲಯವನ್ನು ಬಿಹಾರದಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ ಬಿಹಾರದ ಯುವಕರಿಗೆ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿದೆ ಮತ್ತು ೨೫ ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಬಿಹಾರದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದಿದ್ದಾರೆ
ಬಿಹಾರ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಯೋಜನೆಗೂ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು ಇದರಿಂದ ೪ ಲಕ್ಷ ರೂ.ಗಳವರೆಗೆ ಸಂಪೂರ್ಣ ಬಡ್ಡಿರಹಿತ ಶಿಕ್ಷಣ ಸಾಲವನ್ನು ಒದಗಿಸುತ್ತದೆ. ಆ ಮೂಲಕ ಉನ್ನತ ಶಿಕ್ಷಣದ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.
ಈ ಯೋಜನೆಯಡಿ ೩.೯೨ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ೭,೮೮೦ ಕೋಟಿ ರೂ.ಗಳಿಗೂ ಹೆಚ್ಚು ಸಾಲ ಪಡೆದಿದ್ದಾರೆ. ರಾಜ್ಯದಲ್ಲಿ ಯುವ ಸಬಲೀಕರಣವನ್ನು ಮತ್ತಷ್ಟು ಬಲಪಡಿಸುವ ಮೂಲಕ, ೧೮ ರಿಂದ ೪೫ ವರ್ಷದೊಳಗಿನ ಜನರಿಗೆ ಶಾಸನಬದ್ಧ ಆಯೋಗವಾದ ಬಿಹಾರ ಯುವ ಆಯೋಗಕ್ಕೂ ಚಾಲನೆ ನೀಡಿದರು


























