ಭಾರತ, ರಷ್ಯಾದಿಂದ ತೈಲ ಖರೀದಿಸಲ್ಲ:ಟ್ರಂಪ್

ವಾಷಿಂಗ್ಟನ್, ಆ.೨-ಭಾರತವು ರಷ್ಯಾದೊಂದಿಗೆ ತೈಲ ಖರೀದಿ ನಿಲ್ಲಿಸುತ್ತಿರುವ ಬಗ್ಗೆ ಕೇಳಲ್ಪಟ್ಟೆ, ಇದು ಉತ್ತಮ ನಡೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಬಾಂಬ್ ಸಿಡಿಸಿದ್ದಾರೆ.

ಭಾರತ ಹಾಗೂ ರಷ್ಯಾ ಆರ್ಥಿಕತೆಯನ್ನು ಟೀಕಿಸಿದ ಇದರ ಬೆನ್ನಲ್ಲೇ ಈಗ ಮತ್ತೆ ಹೊಸ ಹೇಳಿಕೆಯೊಂದು ನೀಡಿದ್ದು, ಇನ್ನು ಮುಂದೆ ಭಾರತವು ರಷ್ಯಾದಿಂದಿ ತೈಲ ಖರೀದಿ ಮಾಡುವುದಿಲ್ಲ ಎಂದು ಕೇಳಿದ್ದೇನೆ, ಆದರೆ ಇದು ಸತ್ಯವೋ ಇಲ್ಲವೋ ಗೊತ್ತಿಲ್ಲ, ಆದರೆ ಇದು ಒಳ್ಳೆಯ ಹೆಜ್ಜೆ ಮುಂದೇನಾಗುತ್ತದೆ ನೋಡೋಣ ಎಂದು ಹೇಳಿದ್ದಾರೆ.

ರಷ್ಯಾ ಹಾಗೂ ಭಾರತದ ಆರ್ಥಿಕತೆಯು ಸತ್ತ ಆರ್ಥಿಕತೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಟ್ರಂಪ್, ರಷ್ಯಾದೊಂದಿಗೆ ತೈಲ ವ್ಯಾಪಾರ ಮಾಡುತ್ತಿರುವುದಕ್ಕೆ, ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿರುವ ಹಿನ್ನೆಲೆ, ಭಾರತದ ಸರಕುಗಳಿಗೆ ಅಮೆರಿಕದಲ್ಲಿ ೨೫% ಪ್ರತಿಸುಂಕ ತೆರಿಗೆಯನ್ನೂ ಘೋಷಿಸಿದರು. ಇದೀಗ ಮತ್ತೆ ವರಸೆ ಬದಲಿಸಿದ ಟ್ರಂಪ್ ಭಾರತದ್ದು ಉತ್ತಮ ನಡೆ ಎಂದಿದ್ದಾರೆ.

ಅಮೆರಿಕದ ವಿರೋಧಿ ದೇಶವಾದ ರಷ್ಯಾ ಜೊತೆ ಭಾರತವು ತೈಲ ಹಾಗೂ ರಕ್ಷಣಾ ಸಲಕರಣೆಗಳ ಖರೀದಿ ಬಗ್ಗೆ ಟ್ರಂಪ್ ಕಳೆದೆರಡು ದಿನದಿಂದ ಕಿಡಿಕಾರಿದ್ದಾರೆ. ಭಾರತ ಹಾಗೂ ರಷ್ಯಾದ್ದು ಸತ್ತ ಆರ್ಥಿಕತೆ ಎಂದೂ ಟೀಕೆ ಮಾಡಿದ್ದು, ಅತಿ ಹೆಚ್ಚು ತೆರಿಗೆ ಹೊಂದಿರುವ ಭಾರತದ ಜೊತೆ ನಾವು ಕಡಿಮೆ ವ್ಯಾಪಾರ ಮಾಡುತ್ತೇವೆ ಎಂದಿದ್ದರು,

ಆದರೆ ಭಾರತ ಧಿಕೃತವಾಗಿ ತಲ ಖರೀದಿ ನಿಲ್ಲಿಸುತ್ತಿರುವ ಬಗ್ಗೆ ಯಾವ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ.