
ಕೋಲಾರ, ಆ,೨೦- ಯುವಜನರು ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಂಡು ಹೊಸ ಆವಿಷ್ಕಾರಗಳ ಮೂಲಕ ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಲು ಶ್ರಮಿಸಬೇಕು ಎಂದು ಎಲೆಕ್ಟ್‌ರೋ-ಆಪ್‌ಟಿಕ್ಸ್ ಸಿಸ್ಟಮ್ಸ್ ಪ್ರಯೋಗಾಲಯದ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಆರ್. ವೆಂಕಟೇಶ್ವರನ್ ಕರ ನೀಡಿದರು.
ಇಸ್ತ್ರೋ ಬಾಹ್ಯಾಕಾಶ ಸಂಸ್ಥೆಯ ’ಲೀಓಸ್ ಹಾಗೂ ಬಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಆಯೋಜಿಸಲಾಗಿದ್ದ ’ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣ-೨೦೨೬’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಗಸ್ಟ್ ೨೩, ೨೦೨೩ ರಂದು ಚಂದ್ರಯಾನ-೩ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಕ್ಷಣದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ ಎಂದ ವೆಂಕಟೇಶ್ವರನ್, “ಒಂದು ಕಾಲದಲ್ಲಿ ಸೈಕಲ್ ಮತ್ತು ಎತ್ತಿನ ಬಂಡಿಗಳಲ್ಲಿ ರಾಕೆಟ್ ಉಪಕರಣ ಸಾಗಿಸುತ್ತಿದ್ದ ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಇಂದು ಇಡೀ ವಿಶ್ವವೇ ತಿರುಗಿ ನೋಡುವಷ್ಟು ಬಳದಿದೆ. ’ವಿಕಸಿತ ಭಾರತ’ದ ಗುರಿ ತಲುಪಲು ಯುವಜನರಲ್ಲಿ ವೈಜ್ಞಾನಿಕ ಚಿಂತನೆ ಪ್ರಚೋದಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟ ಅವರು, ಬಾಹ್ಯಾಕಾಶ ನೀತಿ ಸುಧಾರಣಗಳಿಂದಾಗಿ ಖಾಸಗಿ ರಂಗದ ಸಹಭಾಗಿತ್ವ ಹೆಚ್ಚಾಗಿದ್ದು, ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಸಂಖ್ಯ ೨೦ ರಿಂದ ೪೦೦ರ ಗಡಿದಾಟಿದೆ ಎಂದರು.
ಬಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಬಿ.ಕೆ. ರವಿ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಅಧ್ಯಾಯನ ಮಾಡುವ ವಿದ್ಯಾರ್ಥಿಗಳ ಸಂಖ್ಯ ಕಡಿಮೆಯಾಗುತ್ತಿರುವುದು ದೇಶಕ್ಕ ಆತಂಕಕಾರಿ ಬಳವಣಿಗ. ವಿಶ್ವವಿದ್ಯಾನಿಲಯಗಳಲ್ಲಿ ಬಿ.ಎಸ್ಸಿ., ಎಂ.ಎಸ್ಸಿ. ಹಾಗೂ ಪಿಎಚ್.ಡಿ. ಮಟ್ಟದಲ್ಲಿ ವಿಜ್ಞಾನ ಕಲಿಯುವವರ ಸಂಖ್ಯ ಹೆಚ್ಚಾಗಬೇಕು. ಬಾಹ್ಯಾಕಾಶ ಕ್ಷೇತ್ರಕ್ಕೂ ಹೆಚ್ಚಿನ ಪ್ರತಿಭಾವಂತರ ಅಗತ್ಯವಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಇಸ್ತ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿರುವ ಕೋಲಾರದ ಶೀಲಾ ಅವರ ವಿಶೇಷ ಆಸಕ್ತಿಯಿಂದಾಗಿಯೇ ಈ ಅರಿವು ಕಾರ್ಯಕ್ರಮವನ್ನು ಕೋಲಾರದಲ್ಲಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಬಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಪ್ರೊ. ಕೆ. ಸಿದ್ದಪ್ಪ ಮಾತನಾಡಿ, ದೇಶದ ರಕ್ಷಣಾ ವ್ಯವಸ್ಥೆ, ಕೃಷಿ, ಆರೋಗ್ಯ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಯಾಟಲೈಟ್‌ಗಳ ಕೊಡುಗ ಅಪಾರವಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗದ ಕುಲಸಚಿವೆ ಪ್ರೊ. ಕುಮುದಾ, ಲೀಓಸ್ ಸಹ ನಿರ್ದೇಶಕ ಮುರಳಿದರ ಕೆ.ಆರ್., ಮುಖ್ಯ ಸಂಪನ್ಮೂಲ ವ್ಯಕ್ತಿ ಎಂ.ಎನ್. ಶ್ರೀನಿವಾಸ್ ಅನುರೂಪ, ಲೀಓಸ್ ಸಂಚಾಲಕಿ ಶೈಲಾ ಹಾಗೂ ಸಿಂಡಿಕೇಟ್ ಸದಸ್ಯರಾದ ಜೈದೀಪ್ ಎಂ. ಸೀಸಂದ್ರ ಗೋಪಾಲ್ ಗೌಡ,, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಆಶಾ ಸುಲ್ತಾನ, ಉಪ ನಿರ್ದೇಶಕ ಗಿರಿಲಾಲ್, ಉಪಸ್ಥಿತರಿದ್ದರು.
































