
ನವದೆಹಲಿ,ಜೂ.೧- ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ ಭಾರತದ ಕ್ರಮವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಟೀಕಿಸಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ನಡೆಗೆ ಭಾರತ ತಿರುಗೇಟು ನೀಡಿದೆ.
ಪಾಕಿಸ್ತಾನ ನಿರಂತರವಾಗಿ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಅದಕ್ಕೆ ಪೂರಕವಾಗಿ ನಿಂತಿದೆ. ಸಿಂಧು ಜಲ ಒಪ್ಪಂದ ಅಮಾನತು ಆಗಲು ಕಾರಣ ಪಾಕಿಸ್ತಾನಕ್ಕೆ ಗೊತ್ತಿಲ್ಲವೇ ಎಂದು ಭಾರತ ಖಡಕ್ ಆಗಿಯೇ ತಿರುಗೇಟು ನೀಡಿದೆ.
ಸಿಂಧೂ ಜಲ ಒಪ್ಪಂದದ ಹೇಳಿಕೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತವನ್ನುಪಾಕಿಸ್ತಾನ ಕೆಣಕಿದ ಹಿನ್ನೆಲೆಯಲ್ಲಿ ಸೂಕ್ತ ಉತ್ತರ ನೀಡಿ ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಹೇಳಿಕೆ ಅನಗತ್ಯವಾಗಿದೆ. ಇತರರನ್ನು ದೂಷಿಸುವುದನ್ನು ನಿಲ್ಲಿಸಿ ಕೇಂದ್ರ ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ.
ತಜಿಕಿಸ್ತಾನ್‌ನಲ್ಲಿನ ಹಿಮನದಿಗಳ ಕುರಿತಾದ ವಿಶ್ವಸಂಸ್ಥೆಯ ಸಮ್ಮೇಳನದ ಅಧಿವೇಶನ ಉದ್ದೇಶಿಸಿ ಮಾತಮಾಡಿದ ಅವರು ಪಾಕಿಸ್ತಾನ ಭಯೋತ್ಪಾದನೆಯ ಮೂಲಕ ಒಪ್ಪಂದ ಉಲ್ಲಂಘಿಸುತ್ತಿದೆ. ಅಲ್ಲದೆ ಜಾಗತಿಕ ವೇದಿಕೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
“ರಾಜಕೀಯ ಲಾಭಗಳಿಗೆ ಲಕ್ಷಾಂತರ ಜೀವಗಳನ್ನು ಒತ್ತೆಯಾಗಿ ಇಡಬಾರದು ಮತ್ತು ಪಾಕಿಸ್ತಾನ ಇದಕ್ಕೆ ಅವಕಾಶ ನೀಡುವುದಿಲ್ಲ. ನಾವು ಎಂದಿಗೂ ಕೆಂಪು ರೇಖೆಯನ್ನು ದಾಟಲು ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
“ಪಾಕಿಸ್ತಾನ ಅಂತರಾಷ್ಟ್ರೀಯ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ವೇದಿಕೆಯ ವ್ಯಾಪ್ತಿಗೆ ಬರದ ಸಮಸ್ಯೆಗಳಿಗೆ ಅನಗತ್ಯ ಉಲ್ಲೇಖಗಳನ್ನು ತರಲು ಪ್ರಯತ್ನಿಸುತ್ತಿರುವುದು ನಮಗೆ ಆಘಾತವನ್ನುಂಟು ಮಾಡಿದೆ. ಅಂತಹ ಪ್ರಯತ್ನವನ್ನು ಬಲವಾಗಿ ಖಂಡಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಪರಿಸ್ಥಿತಿಗಳಲ್ಲಿ ಮೂಲಭೂತ ಬದಲಾವಣೆಗಳಾಗಿವೆ ಎಂಬುದು “ನಿರಾಕರಿಸಲಾಗದ ಸತ್ಯ” ಒಪ್ಪಂದದ ಬಾಧ್ಯತೆಗಳ ಮರುಮೌಲ್ಯಮಾಪನದ ಅಗತ್ಯವಿದೆ ಎಂದು ಹೇಳಿದ್ದಾರೆ.
ಏಪ್ರಿಲ್ ೨೨ ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ೨೬ ನಾಗರಿಕರನ್ನು ಕೊಂದ ನಂತರ ಭಾರತ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ದಂಡನಾತ್ಮಕ ಕ್ರಮಗಳ ಸರಣಿಯಲ್ಲಿ ೧೯೬೦ ರ ಸಿಂಧೂ ಜಲ ಒಪ್ಪಂದದ ಅಮಾನತು ಸೇರಿದೆ. ಭಾರತದ ವಿರುದ್ಧದ ಪ್ರಾಕ್ಸಿ ಯುದ್ಧದ ಭಾಗವಾಗಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಇಸ್ಲಾಮಾಬಾದ್ ಬೆಂಬಲಿಸುತ್ತಿದೆ ಮತ್ತು ಸುಗಮಗೊಳಿಸುತ್ತಿದೆ ಎಂದು ನವದೆಹಲಿ ನಿರಂತರವಾಗಿ ಆರೋಪಿಸಿದೆ.
ಹಿಮನದಿಗಳ ಸಂರಕ್ಷಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ, ಶೆಹಬಾಜ್ ಷರೀಫ್ ಶುಕ್ರವಾರ ಒಪ್ಪಂದವನ್ನು ಅಮಾನತುಗೊಳಿಸುವ ನಿರ್ಧಾರ “ನೀರಿನ ಆಯುಧೀಕರಣ” ಮತ್ತು “ಸಿಂಧೂ ಜಲಾನಯನ ಪ್ರದೇಶದ ನೀರಿನ ಹಂಚಿಕೆ ನಿಯಂತ್ರಿಸುವ ಸಿಂಧೂ ಜಲ ಒಪ್ಪಂದ ತಡೆಹಿಡಿಯುವ ಭಾರತದ ಏಕಪಕ್ಷೀಯ ಮತ್ತು ಕಾನೂನುಬಾಹಿರ ನಿರ್ಧಾರ ತೀವ್ರವಾಗಿ ವಿಷಾದಕರ” ಎಂದು ಪಾಕಿಸ್ತಾನ ಪ್ರಧಾನಿ ಶೆಷಬಾದ್ ಷರೀಪ್ ಹೇಳಿದ್ದರು.ಸಿಂಧು ಜಲ ಒಪ್ಪಂದ ರದ್ದು ಕುರಿತು ಪಾಕ್ ಪ್ರಧಾನಿ ಹೇಳಿಕೆ.
- ಭಾರತದಿಂದ ಸೂಕ್ತ ತಿರುಗೇಟು
- ಪರಸ್ಪರ ದೂಷಿಸುವುದನ್ನು ನಿಲ್ಲಿಸಿ ಭಾರತ ತಿರುಗೇಟು
- ಪಾಕಿಸ್ತಾನದಿಂದ ನಿರಂತರವಾಗಿ ಭಯೋತ್ಪಾದನೆಗೆ ಬೆಂಬಲ
- ಸಿಂಧೂ ಜಲ ಒಪ್ಪಂದ ರದ್ದು ಮಾಡಿರುವ ಉದ್ದೇಶ ಪಾಕಿಸ್ತಾನಕ್ಕೆ ತಿಳಿದಿಲ್ಲವೇ
- ಭಾರತದ ಖಡಕ್ ಉತ್ತರಕ್ಕೆ ಪಾಕಿಸ್ತಾನ ತಬ್ಬಿಬ್ಬು