Home ಜಿಲ್ಲೆ ಜಗತ್ತಿಗೆ ಸಾಂಸ್ಕøತಿಕ ಬೆಳಕು ನೀಡಿದ ಭಾರತ: ಶಂಭುಲಿಂಗ ಶಿವಾಚಾರ್ಯರು

ಜಗತ್ತಿಗೆ ಸಾಂಸ್ಕøತಿಕ ಬೆಳಕು ನೀಡಿದ ಭಾರತ: ಶಂಭುಲಿಂಗ ಶಿವಾಚಾರ್ಯರು

ಕಮಲನಗರ :ಮೇ.15:ಜಗತಿನ ಮೇಲೆ ಯುದ್ಧದ ಕಾರ್ಮೋಡ ಕವಿದಿದೆ ಭಾರತ ಒಂದು ಜಗತ್ತಿಗೆ ಮಾರ್ಗದರ್ಶಕವಾಗಿ ಪರಿಣಮಿಸುತಿದೆ ಎಂದು ಡೋಣಗಾಂವ (ಎಂ) ಉದಗೀರ ಹಾವಗಿಸ್ವಾಮಿ ಮಠದ ಪೀಠಾಧಿಪತಿಗಳಾದ ಡಾ ಶಂಭುಲಿಂಗ ಶಿವಾಚಾರ್ಯರು ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಡೋಣಗಾಂವ (ಎಂ) ಗ್ರಾಮದಲ್ಲಿ ನಡೆದ ಸಾಕ್ಷಿ ಹನುಮಾನ ಮಂದಿರದ ಕಳಸಾರೋಹಣ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಧಾರ್ಮಿಕರು ಶರಣರು ಸಮಾಜದ ಸುಧಾಕರು ನೀಡಿರುವ ಕೊಡುಗೆ ಅಪಾರವಾಗಿ ಅವರು ನೀಡಿರುವ ಧರ್ಮದ ಪರಂಪರೆಯನ್ನು ಉಳಿಸಿ ಬೆಳೆಸುವುದು ಸಂಕಲ್ಪ ವಾಗಬೇಕು ಎಂದು ಅವರು ತಿಳಿಸಿದರು.

ಬಳಿಕ ಕಾರ್ಯಕ್ರಮದ ಘನ ನೇತೃತ್ವ ವಹಿಸಿರುವ ಪೂಜ್ಯ ಡಾ. ಶಾಂತವೀರ ಶ್ರೀಗಳು ಮಾತನಾಡಿ ಮನುಷ್ಯ ಪ್ರೀತಿಯಿಂದ ಬದುಕಲು ಕಲಿಯೋದು ಮುಖ್ಯ ದೇವರು ಮನುಷ್ಯನ ಆತ್ಮದಲ್ಲಿ ಅಡಗಿದ್ದಾನೆ, ಜೀವನದಲ್ಲಿ ತಾವುಗಳು ಒಳ್ಳೆ ಕೆಲಸಗಳನ್ನು ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವ
ಸಾಯೀಗಾಂವ ಶ್ರೀ ಮಾತನಾಡಿ “ದೇವನೊಬ್ಬ ನಾಮ ಹಲವು
ಎಂಬುವ ಹಾಗೆ ಒತ್ತಡದ ಜೀವನದಲ್ಲಿ ದೇವರ ನಾಮಸ್ಮರಣೆ ಮುಖ್ಯ ಎಂದರು.
ಗ್ರಾಮದ ಸುತ್ತಮುತ್ತಲಿನ ಸಾವಿರಾರು ಹೆಣ್ಣು ಮಕ್ಕಳು ತಲೆಯ ಮೇಲೆ ಕಳಸ ಹೊತ್ತಿಕೊಂಡು ವಿವಿಧ ಬಡಾವಣೆಯ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ನವಯುವಕರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಭಕ್ತಿ ಭಾವದಿಂದ ಮೇರೆದರು. ವಿವಿಧ ಗ್ರಾಮಗಳಿಂದ ಆಗಮಿಸಿರುವ ಊರಿನ ಹೆಣ್ಣು ಮಕ್ಕಳಿಗೆ ಕಾಣಿಕೆ ನೀಡಲಾಯಿತು. ಕಾರ್ಯಕ್ರಮಕ್ಕೆ ಬಂದಿರುವಂತಹ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿಸಿದ್ದರು.
ಕಾರ್ಯಕ್ರಮಕ್ಕೆ ಮೊದಲು ವಿಶೇಷ ಪೂಜೆ ಸಲ್ಲಿಸಿದರು ಶ್ರೀ ಶಂಭುಲಿಂಗ ಶಿವಾಚಾರ್ಯರು ಹಸ್ತದಿಂದ ಕಳಸಾರವನ್ನು ನೆರವೇರಿತು.
ಈ ಕಾರ್ಯಕ್ರಮವು ಮಠದ ಉಮಾಕಾಂತ ದೇಶಿಕೇಂದ್ರಸ್ವಾಮಿಜಿ ಉಪಸ್ಥಿತಿಯಲ್ಲಿ ಭವ್ಯವಾಗಿ ಮತ್ತು ದಿವ್ಯವಾದ ಕಾರ್ಯಕ್ರಮವನ್ನು ನೆರವೇರಿತು.

ಈ ಸಂಧರ್ಭದಲ್ಲಿ ಸೈಲೇಶ್ ದೇಶಮುಖ, ವಿಜಕುಮಾರ್ ದೇಶಮುಖ, ಬಾಲಾಜಿ ದೇಶಮುಖ್, ಅಪ್ಪಸಾಬ್ ದೇಶಮುಖ, ರವಿ ಚಿಂಚನ್ಸೂರೆ, ಗಣೇಶ್ ಕಾರೆಗವೆ, ಒಂದೇವಿ ಟೀಚರ್, ಮಲ್ಲಿಕಾರ್ಜುನ ಹೊಂಡಾಳೆ, ಸಿದ್ದು ಹೂಗಾರ್, ದಿಲೀಪ್ ವಲೂರೆ, ಮಾಣಿಕರಾವ ಹೊಂಡಾಳೆ,ಹಾವಗಿ ಬಳ್ತೆ, ವೈಜೀನಾಥ ಹೊಂಡಾಳೆ, ಬಬನ ಪಾಟೀಲ್ ಗ್ರಾಮದ ಭಕ್ತರು ಹಾಗೂ ಗ್ರಾಮಸ್ಥರು ಭಜನೆ ಮಂಡಳಿಯವರು ಉಪಸ್ಥಿತರಿದ್ದರು.ಹಾವಗಿ ಮಠಪತಿ, ಪ್ರವೀಣ್ ಹೊಂಡಾಳೆ ನಿರೂಪಿಸಿದರು.