ಸ್ವಾತಂತ್ರö್ಯ ಹಲವರ ತ್ಯಾಗದ ಫಲವಾಗಿದೆ:ಬೆಳಗುಂದಿ

ಸೈದಾಪುರ:ಅ.೧೬:ನಮ್ಮ ದೇಶದ ಸ್ವಾತಂತ್ರö್ಯ ಹಲವರ ತ್ಯಾಗ, ಬಲಿದಾನದ ಫಲವಾಗಿದೆ. ಇದನ್ನು ತಿಳಿದು ಪ್ರತಿಯೊಬ್ಬ ನಾಗರಿಕರು ಸೇವಾ ಮನೋಭಾವನೆಯೊಂದಿಗೆ ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಇಲ್ಲಿನ ಪ್ರತಿಷ್ಠಿತ ವಿದ್ಯಾ ವರ್ಧಕ ಸಂಘದ ವಿವಿಧ ವಿಭಾಗಗಳ ವತಿಯಿಂದ ೭೯ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಷ್ಟçಪಿತ ಮಹಾತ್ಮ ಗಾಂಧಿಜೀಯವರ ಅಹಿಂಸ ಮಾರ್ಗದ ಮೂಲಕ ಸಾಕಷ್ಟು ಜನರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರö್ಯ ದೊರೆತಿದೆ. ಈದೀಗ ಭಾರತ ವಿಶ್ವದಲ್ಲಿ ಪ್ರಭಲ ರಾಷ್ಟçವಾಗಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ. ಇದು ಹೆಮ್ಮೆ ಪಡುವ ವಿಷಯವಾಗಿದ್ದೂ ಇದನ್ನು ಬೆಳಸಿಕೊಂಡು ಹೋಗುವ ಜವಬ್ದಾರಿ ಮುಂದಿನ ನಾಗರಿಕರಾಗುವ ನಿಮ್ಮೆ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.
ದೈಹಿಕ ಶಿಕ್ಷಕರಾದ ವಿಶ್ವನಾಥರೆಡ್ಡಿ ಪಾಟೀಲ, ರಾಜಶೇಖರ ಪಾಟೀಲ, ಹಿರಿಯ ಮುಖಂಡರಾದ ಭೀಮರೆಡ್ಡಿ ಪಾಟೀಲ ಶೆಟ್ಟಹಳ್ಳಿ, ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಪ್ರೇಮರಾಜ ದೋಖಾ, ಬಸ್ಸಯ್ಯ ಸ್ವಾಮಿ, ವಿಶ್ವನಾಥರೆಡ್ಡಿಗೌಡ ಚಿಗಾನೂರ, ಸಂಸ್ಥೆಯ ಸಹಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಸುರೇಶ ಆನಂಪಲ್ಲಿ, ಓಂಕಾರ ತಿವಾರಿ, ಮಲ್ಲಣ್ಣಗೌಡ ಮುನಗಾಲ, ಶಾಂತಗೌಡ ಬಾಡಿಯಾಳ, ರಾಘವೇಂದ್ರ ಬದಾಮಿ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಸಂಸ್ಥೆಯ ಹಿರಿಯ ಸದಸ್ಯರು, ಯುವಕರು, ಗ್ರಾಮದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.