ಕೋಲಾರ,ಆ.೧೪: ತಾಲೂಕಿನ ಯಾನಾದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಅನೇಕ ಮಹನೀಯರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಇಂದು ಅವರನ್ನು ಸ್ಮರಿಸುವ ಮೂಲಕ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸ್ವಾತಂತ್ರ್ಯ ದಿನದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್ ವೈ.ವಿ, ಹಿರಿಯರಾದ ವೆಂಕಟಪ್ಪ, ಚಂದ್ರಶೇಖರ್, ರಮೇಶ್‌ಬಾಬು, ವೆಂಕಟೇಶಪ್ಪ, ಮೋದಿನ್ ಸಾಬ್, ನವೀನ್, ವಿವೇಕ್, ಚರನ್, ನಿತೀಶ್, ಅನಿಲ್, ವೈ.ಎ ನಾಗೇಶ್, ವೆಂಕಟರಾಮಣ್ಣ, ಕಾಯಕಬಂಧು ಮಂಜುನಾಥ್, ಶ್ರೇಯಸ್, ಶಾಲಾ ಶಿಕ್ಷಕಿ ರತ್ನಮ್ಮ, ಅಡುಗೆ ಸಹಾಯಕಿ ಪ್ರಮೀಳಮ್ಮ, ಅಂಗನವಾಡಿ ಶಿಕ್ಷಕಿ ವರಲಕ್ಷ್ಮಿ, ಸುಜಾತಮ್ಮ, ಭಾಗ್ಯಮ್ಮ, ಶೋಭಾ, ಗೀತಾ ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.


























