ಸ್ವಾತಂತ್ರ್ಯೋತ್ಸವ ಆಚರಣೆ

ನವಲಗುಂದ,ಆ.16: ಭಾರತ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮಹಾತ್ಮಾ ಗಾಂಧೀಜಿ, ನೇತಾಜಿ ಸುಭಾಸ ಚಂದ್ರ ಭೋಸ್, ಸರ್ದಾರ್ ವಲ್ಲಭ ಬಾಯಿ ಪಟೇಲರಂತ ಅನೇಕ ಹೋರಾಟಗಾರರು ಹಗಲಿರುಳು ಅನೇಕ ಚಳುವಳಿಗಳನ್ನು ಮಾಡಿ ತಮ್ಮ ವೈಯಕ್ತಿಕ ಜೀವನವನ್ನು, ಸುಖ ಸಂಪತ್ತನ್ನು ತ್ಯಾಗ ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥ ಮನೋಭಾವನೆಯಿಂದ ಹೋರಾಟ ಮಾಡಿದ್ದಾರೆ.ಅದರ ಪ್ರತಿಫಲದಿಂದ ಇಂದು ನಾವು ಸ್ವಾತಂತ್ರವನ್ನು ಅನುಭವಿಸುತ್ತಿದ್ದೇವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಗಣೇಶ ಧೋoಗಡಿ ಹೇಳಿದರು.


ಅವರು ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 79 ನೇಯ ಸ್ವಾತಂತ್ರೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು


ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ ಬಿ ಬಾಗಡಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.


ಸವಿತಾ ಚಿಕ್ಕಣ್ಣವರ, ಶ್ರೀಧರ ಲೋನಕರ, ಅಯ್ ಬಿ ಸಾತಿಹಾಳ, ಸಂತೋಷ ಹುಬ್ಬಳ್ಳಿ, ಪ್ರಸನ್ನ ಪಂಢರಿ, ನಾಗರತ್ನ ಕುರಡೆಕರ್, ಬಿ ವಿ ಏಣಗಿ, ಗಂಗಾಧರ ಗೌಡರ್, ರಾಮಣ್ಣ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.