ಪಿಇಎಸ್ ಸಂಸ್ಥೆಯಲ್ಲಿ ಸ್ವತಂತ್ರ ದಿನಾಚರಣೆ

ಬೆಂಗಳೂರು, ಆ.೧೫-ನಗರದ ಆಚಾರ್ಯ ಪಾಠಶಾಲೆ ಶಿಕ್ಷಣ ಸಂಸ್ಥೆಯು ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಅಂದರೆ ೧೨ ವರ್ಷಗಳ ಮುಂಚಿತವಾಗಿಯೇ ೧೯೩೫ರ ಆಗಸ್ಟ್ ೧೫ರಂದೆ ಶ್ರೇಷ್ಠ ಮಾನವತವಾದಿ, ಶಿಕ್ಷಣ ಶಿಲ್ಪಿ ಪ್ರೊ.ಎನ್.ಅನಂತಚಾರ್ಯರು ಪ್ರಾರಂಭಿಸಿದ್ದಾರೆ. ಇದು ಭಾರತೀಯರ ಬುದ್ದಿ ಕೌಶಲ್ಯ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದೇ ಹೇಳಬಹುದು.


೭೯ನೇ ಸ್ವಾತಂತ್ರ್ಯೊತ್ಸವವನ್ನು ಆಚಾರ್ಯ ಪಾಠಶಾಲ ಶಿಕ್ಷಣ ಸಂಸ್ಥೆಯ ಆಟದ ಮೈದಾನದಲ್ಲಿ ಎ.ಪಿ.ಎಸ್ ಸಮೂಹ ಸಂಸ್ಥೆಗಳೆಲ್ಲವೂ ಒಟ್ಟಿಗೆ ಸೇರಿ ಸಂಭ್ರಮಿಸಿದ್ದಾರೆ. ೫೦೦೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಪುಟ್ಟ ಮಕ್ಕಳ ಕಣ್ಣಲ್ಲಿ ದೊಡ್ಡ ವ್ಯಕ್ತಿತ್ವಗಳ ವೇಷಭೂಷಣ ಹಾಗೂ ವಿಶೇಷ ಚೇತನ ಅಂಧ ವಿದ್ಯಾರ್ಥಿಗಳ ಪಥಸಂಚಲನ ಎಲ್ಲರ ಕಣ್ಮನವನ್ನು ಸೆಳೆಯಿತು.


ಸಂಸ್ಥೆಯ ಎನ್.ಸಿ.ಸಿ, ಎನ್.ಎಸ್.ಎಸ್, ವೈ.ಆರ್.ಸಿ ಹೀಗೆ ಎಲ್ಲಾ ಘಟಕದ ಕೆಡೆಟ್‌ಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಒಟ್ಟಿಗೆ ಪಥಸಂಚಲನದಲ್ಲಿ ಭಾಗವಹಿಸಿದ್ದು, ಭಾರತಾಂಬೆಗೆ ನಾವು ತೋರಿಸುವ ಗೌರವ ಪೂರ್ವಕ ಪ್ರಣಾಮಗಳಾಗಿತ್ತು. ಈ ಸ್ವಾತಂತ್ರ್ಯ ಸಂಭ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೇಜರ್ ಜನರಲ್ ರವಿಮುರುಗನ್, PVSM, AVSM ನಿವೃತ್ತ ರವರು ಹಾಗೂ ಬ್ರಿಗೇಡಿಯರ್ ಸಂದೀಪ್ ಕುಮಾರ್, ಗಿSಒ ನಿವೃತ್ತ ರವರು ಆಗಮಿಸಿದ್ದರು. ಎ.ಪಿ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿಎ.ಡಾ.ವಿಷ್ಣುಭರತ್ ಅಲಂಪಲ್ಲಿ ರವರು ಧ್ವಜಾರೋಹಣವನ್ನು ನೇರವೇರಿಸಿದರು. ಈ ಸುವರ್ಣ ಸಂಭ್ರಮಕ್ಕೆ ಎ.ಪಿ.ಎಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಸಾಕ್ಷಿಭೂತರಾದರು.


ಧ್ವಜಾರೋಹಣ ಹಾಗೂ ಪಥಸಂಚಲನದ ನಂತರ ಮಾತನಾಡಿದ ಮೇಜರ್ ಜನರಲ್ ರವಿಮುರುಗನ್ ಪಥಸಂಚಲನಕ್ಕೆ ಅಭಿನಂದನೆ ಸಲ್ಲಿಸಿದರು, ಈ ಸ್ವಾತಂತ್ರ್ಯ ಇದು ಬಹುಮಾನವಲ್ಲ ಇದು ಕಷ್ಟಪಟ್ಟು ಗಳಿಸಿದ್ದು, ಎಂದು ಹೇಳಿ ಯುವಕರ ತಮ್ಮ ಶಕ್ತಿ ಮತ್ತು ಸಾಮರ್ಥ್ಯದಲ್ಲಿ ನಂಬಿಕೆ ಇರಿಸಿ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಾವಿಣ್ಯತೆ ಗಳಿಸಿ ದೇಶವನ್ನು ಮುನ್ನಡಿಸುವಲ್ಲಿ ಶ್ರಮವಹಿಸಬೇಕಿದೆ ಎಂದು ಹೇಳಿದರು.