ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೨:ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಅನಿರ್ದಿಷ್ಟ ಧರಣಿಯು ೫ನೇ ದಿನಕ್ಕೆ ಕಾಲಿಟ್ಟಿದ್ದು, ದಿನೇ ದಿನೇ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಧರಣಿಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿವೆ. ಹೋರಾಟದ ಕಾವು ಏರ ತೊಡಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಹಮ್ಮಿಕೊಂಡಿರುವ ೫ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮೆಡಿಕಲ್ ಕಾಲೇಜ್ ಖಾಸಗಿಯವರಿಗೆ ಒಪ್ಬಿಪಿಸುವುದನ್ನು ಈ ಕೂಡಲೆ ಹಿಂತೆಗೆದುಕೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ಆಸ್ಪತ್ರೆಯ ಹಿಂದುಗಡೆ ೧೪೯ ಎಕರೆ ಜಮೀನು ಇದ್ದರೂ ಕೂಡ ಸರ್ಕಾರ ಜಬಾಬ್ದಾರಿ ತೆಗೆದುಕೊಳ್ಳುತ್ತಿಲ್ಕ. ಜನ ಪ್ರತಿನಿಧಿಗಳು ಜನಪರ ಎಂದುಕೊಳ್ಳುವವರು ಧರಣಿ ಸ್ಥಳಕ್ಕೆ ಬರಬೇಕು ಅಥವಾ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಆಟೋ ಯೂನಿಯನ್ ಅಧ್ಯಕ್ಷ ಅಬ್ದುಲ್ ರಜಾಕ್ ಪಟೇಲ್ ಮಾತನಾಡಿ, ಬಡವರಿಗೆ ಉನ್ನತ ಶಿಕ್ಷಣ ಪಡೆಯಲು ಆಸೆ ಇದ್ದರೂ ಅವಕಾಶ ಸಿಗದಿರುವುದಕ್ಕೆ ಅವರ ಕನಸು ನನಸಾಗುತ್ತಿಲ್ಲ. ರಾಜ್ಯ ಸರ್ಕಾರ ಕೆಂದ್ರ ಸರಕಾರಕ್ಕೆ ಒತ್ತಡ ತಂದು ವಿಜಯಪುರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಲೆಂಡಿ ಮಾತನಾಡಿ, ಬೆಳಗಾವಿ ವಿಭಾಗದಲ್ಲಿ ಹೆಚ್ಚು ಸೌಕರ್ಯ ಇರುವ ಜಿಲ್ಲೆ ವಿಜಯಪುರ. ಆದರೆ ಪಕ್ಕದಲ್ಲಿ ಇರುವ ಬಾಗಲಕೋಟೆ ಜಿಲ್ಲೆಗೆ ಸರ್ಕಾರಿ ಕಾಲೇಜು ಅನುಮತಿ ನೀಡಿದ್ದಾರೆ. ಎಲ್ಲಾ ಅವಕಾಶಗಳಿದ್ದರೂ ಕೂಡ ಬಿಜಾಪುರಕ್ಕೆ ಅವಕಾಶ ನೀಡುತ್ತಿಲ್ಲ. ನಮ್ಮ ಸಂಘದ ಎಲ್ಲಾ ಸದಸ್ಯರು ನಿಮ್ಮ ಹೋರಾಟಕ್ಕೆ ಬೆಂಬಲಿಸುತ್ತೇವೆ ಎಂದು ಹೇಳಿದರು.
ಬುದ್ದಿಸ್ಟ್ ಸಮಾಜದ ರಾಜ್ಯ ಕಾರ್ಯದರ್ಶಿ ಬಸವರಾಜ ಹೋಳ್ಕರ್ ಮಾತನಾಡಿ, ನಮ್ಮ ಸಮುದಾಯದಿಂದ ಧರಣಿಗೆ ಸಂಪೂರ್ಣ ಬೆಂಬಲವಿದೆ. ರಾಜ್ಯದಲ್ಲಿ ದೇಶದಲ್ಲಿ ದಲಿತರು, ಹಿಂದುಳಿದವರನ್ನು ಹಿಂದಿಕ್ಕಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅವುಗಳು ಬಡವರಿಗೆ ಸಿಗುವಂತಾಗಬೇಕು. ಮುಖ್ಯವಾದ ಒಂದೇ ಬೇಡಿಕೆಗೂ ಕೂಡಾ ಸರಕಾರ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಮುಸ್ಲಿಂ ಮೈನಾರಿಟಿ ಡೆವಲಪ್ಮೆಂಟ್ ಕಮಿಟಿ ಅಧ್ಯಕ್ಷ ಅಫೀಜ ಸಿದ್ದಿಕಿ ಮಾತನಾಡಿ, ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವವರೆಗೆ ನಾವು ಹೋರಾಟದÀ ಜೊತೆ ಇರುತ್ತೇವೆ. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಬಿಡುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮೊದಲೇ ಸ್ಥಾಪನೆಯಾಗಬೇಕಿತ್ತು. ಬಡವರ ಮಕ್ಕಳು ವೈದ್ಯಕೀಯ ಶುಲ್ಕ ಕಡಿಮೆ ಕೊಟ್ಟು ಓದಲು ಸರ್ಕಾರಿ ವೈದ್ಯಕೀಯ ಕಾಲೇಜು ನಮ್ಮ ಜಿಲ್ಲೆಗೆ ಅವಶ್ಯಕತೆ ಇದೆ. ಇದನ್ನು ಸರ್ಕಾರ ಅರಿತು ಸರ್ಕಾರಿ ವೈದ್ಯಕೀಯ ಕಾಲೇಜ್ ನಿರ್ಮಾಣ ಮಾಡಿಕೊಡಬೇಕೆಂದು ಕರೆ ನೀಡಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷÀ ಬೋಗೇಶ್ ಸೋಲಾಪುರ ಅವರು ಮಾತನಾಡಿ, ಖಾಸಗಿ ವೈದ್ಯಕೀಯ ಕಾಲೇಜ್ ಬೇಡÀ. ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಅಗತ್ಯ ಇದೆ ಎಂದರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಸಂಜು ಕಂಬಾಗಿ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಜನರು ಖಾಸಗಿ ಸಹಭಾಗಿತ್ವ ಖಂಡಿಸಿ ಮತ್ತು ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವAತೆ ಈ ಹಿಂದೆAದಿಗಿAತಲೂ ಗಟ್ಟಿಯಾಗಿ ಜನರು ಹೋರಾಟದ ದ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಜನ ಹೋರಾಟ ಕಟ್ಟಲು ವಿಜಯಪುರ ಜಿಲ್ಲೆಯ ಜನತೆ ಮುಂದೆ ಬರಬೇಕೆಂದು ಕರೆ ನೀಡುತ್ತೇವೆ.
ಸಿವಿಲ್ ಇಂಜಿನಿಯರಿAಗ್ ಅಸೋಸಿಯೇಷನ್ ವತಿಯಿಂದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು.
ಮುಖಂಡರುಗಳಾದ ಅರವಿಂದ ಕುಲಕರ್ಣಿ, ಅಕ್ರಂ ಮಾಶಾಳಕರ, ಮಲ್ಲಿಕಾರ್ಜುನ ಬಟಗಿ, ಬಾಬುರಾವ ಬೀರಕಬ್ಬಿ, ಅನಿಲ ಹೊಸಮನಿ, ಭರತಕುಮಾರ ಹೆಚ್ ಟಿ, ಸಿದ್ದಲಿಂಗ ಬಾಗೇವಾಡಿ, ಗೀತಾ. ಹೆಚ್. ಸಿದ್ರಾಮ ಹಿರೇಮಠ, ಜಯದೇವ ಸರ‍್ಯವಂಶಿ, ಪ್ರಭುಗೌಡ ಪಾಟೀಲ, ಮುಖಂಡರಾದ ಇರ್ಫಾನ್ ಶೇಖ್ , ಅಲ್ತಾಪ್ ಇಟಗಿ, ಜಿ ಎಮ್ ಪಠಾಣ, ಪೀರಪಾಶಾ ಗಚ್ಚಿನಮಲ್, ಶಿವು ಮೇಲಿನಮನಿ, ಅರುಣ ಮಠ, ಸಿ.ಆರ್. ಗಂಗಾಧರ, ಅಶ್ರಫ್ ಕುಡಚಿ, ಮಹೇಶ ರಾಂಪುರ, ಪಾಂಡುರAಗ ದೇಸಾಯಿ, ಸುಭಾಷ್ ಜಾಂಬೋರೆ, ಶಿವಬಾಳಮ್ಮು ಕೊಂಡಗೂಳಿ, ಶ್ರೀಕಾಂತ ಕೊಂಡಗೂಳಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

























