ಇಂಧನ ಇಲಾಖೆಯ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಡಿ.೧೬ರಿಂದ ಅನಿರ್ಷ್ಟಾವಧಿ ಪ್ರತಿಭಟನೆ

ಸಂಜೆವಾಣಿ ವಾರ್ತೆ,
ವಿಜಯಪುರ, ಡಿ. ೧೪ : ರೈತ ಭಾರತ ಪಕ್ಷದ ವತಿಯಿಂದ ಡಿ.೧೬ ರಂದು ನಗರದಲ್ಲಿ ಇಂಧನ ಇಲಾಖೆಯ ಲೋಪ ದೋಷಗಳನ್ನು ಸರಿಡಿಸಿ ಸಾರ್ವಜನಿಕರಿಗೆ ನಿಗಧಿತ ಕಾಲಾವಧಿಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ಆಗ್ರಹಿಸಿ ಸಿದ್ಧೇಶ್ವರ ದೇವಸ್ಥಾನದಿಂದ ಕೆಇಬಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಓಸಿ ಹಾಗೂ ಸಿಸಿ ಸೇರಿದಂತೆ ರಾಜ್ಯದ ಎಲ್ಲ ಸಾರ್ವಜನಿಕರಿಗೆ ಎಲ್ಲಾ ಮಾದರಿಯ ವಿದ್ಯುತ್ ಸಂಪರ್ಕಗಳನ್ನು ನೀಡದೆ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಯಲಿದೆ. ರೈತರ ಪಂಪ್ ಸೆಟ್ ಗಳಿಗೆ ಸುಲಭವಾಗಿ ವಿದ್ಯುತ್ ನೀಡಬೇಕು. ರೈತರ ವಿದ್ಯುತ್ ಸಂಪರ್ಕಕ್ಕೆ ೩೬೦೦ ರಿಂದ ೧೦೪೦೦ ರೂ. ವರೆಗೆ ಮಾಡಿದ್ದು ಹಿಂಪಡೆಯಬೇಕು. ಸ್ಮಾರ್ಟ್ ಮೀಟರ್ ದರವನ್ನು ಕಡಿಮೆಗೊಳಿಸಬೇಕು. ತಾತ್ಕಾಲಿಕ ವಿದ್ಯುತ್ ಸ್ಥಾವರಗಳ ಡೆಪಾಜಿಟ್ ಹಣ ೨ ಪಟ್ಟು ತುಂಬಿಸಿಕೊಳ್ಳುತ್ತಿದ್ದು ಅದನ್ನು ಮೊದಲಿನ ಹಾಗೆ ತುಂಬಿಸಿಕೊಳ್ಳಬೇಕು. ಎಎಸ್‌ಡಿ ಹಣವನ್ನು ಒಂದೇ ಕಂತಿನಲ್ಲಿ ತುಂಬಿಸಿಕೊಳ್ಳಬೇಕು. ೧೨೦೦ ಚದರ ಅಡಿ ಮೇಲ್ಪಟ್ಟ ನಿವೇಶನಗಳಿಗೆ ಸೋಲಾರ ರಿಬಟ್ ಪುನಃ ನೀಡಬೇಕು. ಇಲ್ಲದಿದ್ದರೇ ಸೋಲಾರ ಕಂಡಿಷನ್ ತೆಗೆಯಬೇಕು. ಎಲ್ಲಾ ವಿದ್ಯುತ್ ಕಂಪನಿಗಳು ನಷ್ಟದಲ್ಲಿ ಇರಲು ಇಂಧನ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ. ಕೂಡಲೇ ಅವರ ಮೇಲೆ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಸುಟ್ಟ ಟಿಸಿಗಳಿಗೆ ಪರ್ಯಾಯವಾಗಿ ಹೊಸ ಟಿಸಿಗಳನ್ನು ನಿಗಧಿತ ಅವಧಿಯಲ್ಲಿ ನೀಡಬೇಕು. ವಿದ್ಯುತ್ ಅನ್ನು ನೇರವಾಗಿ ಸಂಪರ್ಕ ಮಾಡಿಕೊಂಡಿರುವ ಗ್ರಾಹಕರ ಮೇಲೆ ಜಾಗೃತದಳದವರು ಕೇಸ್ ಹಾಕಬಾರದು. ವಿಜಯಪುರ ಹೆಸ್ಕಾಂ ಗ್ರಾಮೀಣ ಉಪ ವಿಭಾಗವನ್ನು ಶಿವಗಿರಿಗೆ ಸ್ಥಳಾಂತರ ಮಾಡಿರುವ ಕಚೇರಿಯನ್ನು ಪುನಃ ಹಳೆಯ ಜಾಗದಲ್ಲಿಯೇ ಮುಂದುವರೆಸಬೇಕು ಜೊತೆಗೆ ಹೊಸದಾಗಿ ಕಟ್ಟಿಸಿದ ಕಟ್ಟಡದಲ್ಲಿ ನಗರ ಉಪ ವಿಭಾಗ ಮೂರನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬ ವಿಷಯ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರ ಸಂಘ, ಸಿವಿಲ್ ಗುತ್ತಿಗೆದಾರರ ಸಂಘ, ಸ್ಟೀಲ್ ಸಿಮೆಂಟ್ ಹಾಗೂ ಎಲೆಕ್ಟಿçಕಲ್ ಅಂಗಡಿಯವರ ಸಂಘ ಹಾಗೂ ನಗರದ ಗುಂಟಾ ಜಾಗದಲ್ಲಿ ಮನೆ ಕಟ್ಟಿದ ಮಾಲಿಕರು ಹಾಗೂ ನವಸ್ಪೂರ್ತಿ ಸಂಘಟನೆ, ಮರಳು , ಕಲ್ಲು ಹಾಗೂ ಕಡಿ ಮಾಲಿಕರ ಸಂಘ, ಹೊಟೇಲ ಮಾಲಿಕರ ಸಂಘ, ಕೈಗಾರಿಕೆ ಉದ್ಯಮಿಗಳ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಲು ಕೆಂಗನಾಳ ಅವರು ವಿನಂತಿಸಿಕೊAಡಿದ್ದಾರೆ.