
ಬೀದರ್: ನ.19:ಸಾಹಿತ್ಯದ ಬಗ್ಗೆ ಜಿಲ್ಲೆಯ ಮಹಿಳೆಯರಲ್ಲಿ ಒಲವು ಹೆಚ್ಚುತ್ತಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಭಾನುವಾರ ನಡೆದ ನಾಡ ಹಬ್ಬ ಆಚರಣೆ, ಅತಿಥಿ ಉಪನ್ಯಾಸ, ಸಂಗೀತ, ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೇಖಕಿಯರ ಸಂಘ ಮಹಿಳೆಯರಲ್ಲಿ ಸಾಹಿತ್ಯದ ಜಾಗೃತಿ ಮೂಡಿಸುತ್ತಾ ಬಂದಿದೆ. ಅದರ ಫಲವಾಗಿ ಅನೇಕ ಮಹಿಳೆಯರ ಸಣ್ಣ ಕತೆ, ಕಾದಂಬರಿ, ಜನಪದ ಹಾಡು, ವಚನ ಹಾಡು, ಗಜಲ್ ಮೊದಲಾದ ಕೃತಿಗಳು ಹೊರ ಬಂದಿವೆ ಎಂದು ತಿಳಿಸಿದರು.
ಸಂಘ ಶಾಲಾ, ಕಾಲೇಜು, ಧಾರ್ಮಿಕ ಸ್ಥಳಗಳಲ್ಲಿ ಕಾರ್ಯಕ್ರಮ ಸಂಘಟಿಸಿ, ಕನ್ನಡ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕಿ ಡಾ. ಜಗದೇವಿ ತಿಬಶೆಟ್ಟಿ ಅವರು, ಕನ್ನಡ, ನಾಡು ನುಡಿ, ಬೀದರ್ ಜಿಲ್ಲೆಯ ಸಾಹಿತ್ಯ, ಲೇಖಕ-ಲೇಖಕಿಯರ ಕುರಿತು ವಿವರವಾಗಿ ಮಾತನಾಡಿದರು. ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳದ ಕಾರ್ಯದರ್ಶಿ ಪುಣ್ಯವತಿ ವಿಸಾಜಿ ಅವರು, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸಾಧನೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನ ಸರ್ವಾಧ್ಯಕ್ಷರು ಶುಭ ಹಾರೈಸಿದರು.
ರಾಜ್ಯಪಾಲರಿಂದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಶಸ್ತಿ ಪುರಸ್ಕøತರಾದ ಪ್ರಯುಕ್ತ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆಯೂ ಆದ ಸಮಾರಂಭದ ಸರ್ವಾಧ್ಯಕ್ಷೆ ಡಾ. ಗುರಮ್ಮ ಸಿದ್ದಾರೆಡ್ಡಿ ಅವರನ್ನು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ತುಳಸಮ್ಮ ಸಂಗ್ರಾಮ ಸಿಂಧೆ, ಡಾ. ದೇವಕಿ ನಾಗೂರೆ, ಜಯಶ್ರೀ ಸುಕಾಲೆ, ರೂಪಾ ಪಾಟೀಲ, ಸರಸ್ವತಿ ಪುಂಡಲೀಕ, ಡಾ. ಸುನೀತಾ ಕೂಡ್ಲಿಕರ್, ಮೀನಾಕ್ಷಿ ಪೆÇಲ್ಲಾ, ಡಾ. ಶ್ರೇಯಾ ಮಹೇಂದ್ರಕರ್, ಕಸ್ತೂರಿ ಹಾಲಹಳ್ಳಿಕರ್, ಮಲ್ಲಮ್ಮ ಸಂತಾಜಿ, ಮಹೇಶ್ವರಿ ಪಾಂಚಾಳ, ರೇಖಾ ಸೌದಿ, ಕಸ್ತೂರಿ ಸ್ವಾಮಿ, ಸುವರ್ಣಾ ಚಿಮಕೋಡೆ, ಪ್ರಿಯಾಂಕ ಗುರು, ಕವಿತಾ ಉದಗಿರೆ, ವಜ್ರಾ ಪಾಟೀಲ ಹಾಗೂ ಪದ್ಮಾ ದತ್ತಾತ್ರಿ ಅವರಿಗೆ ಕರ್ನಾಟಕ ಲೇಖಕಿಯರ ಸಂಘ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳ ವತಿಯಿಂದ ಕನ್ನಡಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಓಡಿ ಹೋದಾಕಿ ಕಾದಂಬರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಪ್ರಯುಕ್ತ ಸಾಹಿತಿ ಪಾರ್ವತಿ ಸೋನಾರೆ ಅವರನ್ನು ಸನ್ಮಾನಿಸಲಾಯಿತು.
ಬಸವಕಲ್ಯಾಣದಲ್ಲಿ ನ. 29 ಮತ್ತು 30 ರಂದು ನಡೆಯಲಿರುವ 46ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ರೇಖಾ ಸೌದಿ, ರೇಣುಕಾ ಎಂ., ಪ್ರಿಯಾಂಕ ಎಸ್. ಹಾಗೂ ಮಹೇಶ್ವರಿ ಪಿ. ನಾಡಗೀತೆ ಹಾಡಿದರು. ಸಮಾರಂಭದ ಸರ್ವಾಧ್ಯಕ್ಷೆ ಹಾಗೂ ಗಣ್ಯರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆಯರಾದ ಲೀಲಾವತಿ ನಿಂಬೂರೆ, ವಜ್ರಾ ಪಾಟೀಲ, ಕಸ್ತೂರಿ ಪಟಪಳ್ಳಿ, ಅಕ್ಕ ಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಆಧ್ಯಕ್ಷೆ ಡಾ. ಸಾವಿತ್ರಿ ಹೆಬ್ಬಾಳೆ ಉಪಸ್ಥಿತರಿದ್ದರು.
ಜಯದೇವಿ ಯದಲಾಪುರೆ ಸ್ವಾಗತಿಸಿದರು. ಪ್ರತಿಭಾ ಚಾಮಾ ನಿರೂಪಿಸಿದರು. ಮಂಗಲಾ ಭಾಗವತ್ ವಂದಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.






















