ಜಂಕ್ ಫುಡ್, ಟ್ರೆಸ್ ನಿಂದಾಗಿ ಬಂಜೆತನ ಪ್ರಕರಣಗಳಲ್ಲಿ ಹೆಚ್ಚಳ : ಡಾ. ಎ.ಎ.ಮಾಗಿ

ಸಂಜೆ ವಾಣಿ ವಾರ್ತೆ,
ಜಮಖಂಡಿ;ಜ.೮:ಜAಕ್ ಫುಡ್ ಒತ್ತಡದ ಜೀವನ ಶೈಲಿ, ವ್ಯಾಯಾಮ ರಹಿತ ಜೀವನದಿಂದಾಗಿ ಇಂದಿನ ಯುವ ಪೀಳಿಗೆಯಲ್ಲಿ ಬಂಜೆತನದ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ವಿಜಯಪುರದ ಡಾ. ಎ,ಎ,ಮಾಗಿ ತಿಳಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧುಮೇಹ ತಜ್ಞನಾಗಿ, ಸೇವೆ ಸಲ್ಲಿಸುತ್ತಿದ್ದೇನೆ, ಕಳೆದ ೧೨ ವರ್ಷಗಳಿಂದ ಬಂಜೆತನ ನಿವಾರಣೆಗೆ ಆಯುರ್ವೇದದ ಚಿಕಿತ್ಸೆ ನೀಡುತ್ತಿದ್ದು ಇದರಿಂದ ಸಾಕಷ್ಟು ಜನರಿಗೆ ಮಕ್ಕಳನ್ನು ಪಡೆಯುವ ಭಾಗ್ಯ ದೊರೆತಿದೆ ಎಂದು ತಿಳಿಸಿದರು. ತಮ್ಮ ತಂದೆಯವರು ಆಯುರ್ವೇದ ತಜ್ಞರಾಗಿದ್ದರು ಅವರು ಬಂಜೆತನ ನಿವಾರಣೆಗೆ ಚಿಕಿತ್ಸೆ ನೀಡುತ್ತಿದ್ದರು, ಅವರು ತೀರಿಹೊಗಿದ್ದರಿಂದ ಸಾರ್ವಜನಿಕರ ಒತ್ತಡದ ಮೆರೆಗೆ ತಾವೇ ಸ್ವತಹ ಕೆಲ ಬದಲಾವಣೆಯನ್ನು ಮಾಡಿಕೊಂಡು ಮಕ್ಕಳಾಗದವರಿಗೆ ಚಿಕಿತ್ಸೆ ನೀಡುತ್ತಿದ್ದು ಉತ್ತಮ ಫಲಿತಾಂಶ ಬಂದಿದೆ ಎಂದು ತಿಳಿಸಿದರು. ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿ ಕೊಳ್ಳಬೇಕು, ಆಹಾರದಲ್ಲಿ ತರಕಾರಿ ಹಣ್ಣುಗಳನ್ನು ಬಳಸುವದು ನಿಯಮಿತ ವ್ಯಾಯಾಮ ಹಾಗೂ ವಾಕಿಂಗ್‌ನಿAದ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಮಹಿಳೆಯರಲ್ಲಿ ಮಾತ್ರ ಸಮಸ್ಯೆ ಇದೆ ಎಂದು ಭಾವಸಲಾಗುತ್ತದೆ ಆದರೆ ಗಂಡು ಮಕ್ಕಳಲ್ಲಿಯೂ ಬಂಜೆತನದ ಸಮಸ್ಯೆ ಇರುತ್ತದೆ. ಆರೋಗ್ಯಕರ ವೀರ್ಯ ಉತ್ಪತ್ತಿ ಇರದ ಕಾರಣ ಬಂಜೆತನ ಬಂದಿರುತ್ತದೆ ಅದಕ್ಕಾಗಿ ಗಂಡಸರನ್ನು ಪರಿಕ್ಷೆಗೆ ಒಳ ಪಡಿಸಿ ಸರಿಯಾದ ಚಿಕಿತ್ಸೆ ಯಿಂದ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ತಂಬಾಕು, ಮಾವಾ,ಗುಠಕಾ, ಸಿಗರೇಟ್, ಮಧ್ಯಪಾನ ಮುಂತಾದ ಚಟಗಳು, ವ್ಯಾಯಾಮ ರಹಿತ ಒತ್ತಡದ ಜೀವನಶೈಲಿ ಯಿಂದಾಗಿ ಸಕ್ಕರೆ ಕಾಯಿಲೆ ಜೊತೆಗೆ ಬಂಜೆ ತನದಂತಹ ರೋಗಗಳು ಕಾಡುತ್ತಿವೆ ಎಂದು ವಿವರಿಸಿದರು. ಸಕ್ಕರೆ ಕಾಯಿಲೆ ಯಿಂದ ಬಳಲುವರು ಸೂಕ್ತ ಚಿಕಿತ್ಸೆ, ಸರಿಯಾದ ವೈದ್ಯರ ಮಾರ್ಗದರ್ಶನ ಪಡೆದು ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು, ಸಕ್ಕರೆ ಕಾಯಿಲೆಯು ಬಂಜೆ ತನಕ್ಕೆ ಕಾರಣವಾಗಿದೆ ಎಂದು ಹೇಳಿದರು. ಅದರಂತೆ ಹೆಣ್ಣು ಮಕ್ಕಳಲ್ಲಿಯೂ ಅನೇಕ ತೊಂದರೆಗಳಿರುತ್ತವೆ ಸರಿಯಾದ ತಪಾಸಣೆ ನಡೆಸಿ, ಚಕಿತ್ಸೆ ಪಡೆದರೆ ಬಂಜೆತನ ನಿವಾರಿಸಿ ಕೊಳ್ಳಬಹುದು. ತಮ್ಮ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ಬಂಜೆತನ ನಿವಾರಣೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು ೪ ತಿಂಗಳ ಚಿಕಿತ್ಸೆ ಪಡೆದರೆ ಬಂಜೆ ತನ ದಿಂದ ಮುಕ್ತಿ ಪಡೆಯಬಹುದೆಂದು ಹೇಳಿದರು. ಹೆಚ್ಚಿನ ಮಾಹಿತಿಗೆ ೯೪೪೮೨೧೦೪೪೬, ಅಥವಾ ೯೯೮೬೨೫೧೭೯೬ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.