ಧಾರವಾಡ,ನ.೨೮:;ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭಾದ ಆಡಳಿತ ಕಚೇರಿಯಲ್ಲಿ, ವೇದಿಕೆ ಹಾಗೂ ಪ್ರಾಂಗಣ ಉದ್ಘಾಟನೆಯನ್ನು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀ ಮದುತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ದೀಪ ಬೆಳಗುವ ಮೂಲಕ ನೆರವೆರಿಸಿದರು.
ಕಾರ್ಯಾಧ್ಯಕ್ಷರಾದ ಈರೇಶ ಅಂಚಟಗೇರಿ ಮಾತನಾಡಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರ ಮಾರ್ಗದರ್ಶನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಜರುಗಿದ್ದು, ಈ ಬೃಹತ್ ವೇದಿಕೆಯನ್ನ ಪ್ರಹ್ಲಾದ ಜೋಶಿಯವರ ಹುಟ್ಟುಹಬ್ಬದ ದಿನದಂದು ಲೋಕಾರ್ಪಣೆ ಮಾಡುತ್ತಿದ್ದು ಅತ್ಯಂತ ಸಂತಸದ ಸಂಗತಿ . ಈ ಭಾಗದ ಜನತೆಗೆ ನಾಗರಿಕರಿಗೆ ಇದು ಅನುಕೂಲಕರವಾಗಲಿದ್ದು, ಈ ವೇದಿಕೆಗೆ ಭಾರತ ರತ್ನ ಅಟಲಬಿಹಾರಿ ವಾಜಪೇಯಿ ಹೆಸರಿನಿಂದ ಚಾಲನೆ ನೀಡಿದ್ದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಶ್ರೀಧರ ನಾಡಗೇರ,ಗೊವಿಂದ ಜೋಶಿ, ರಾಘವೇಂದ್ರ ತವನಪ್ಪನವರ, ಶ್ರೀಶೈಲ ಯಕ್ಕುಂಡಿಮಠ,ಜಗದೀಶ ಮಳಗಿ ಉಪಸ್ಥಿತರಿದ್ದರು.























