
ಲಕ್ಷೆ÷್ಮÃಶ್ವರ,ಅ೨೨: ಇಂದು ನಮ್ಮಲ್ಲಿರುವ ದೈತ್ಯ ಗುಣಗಳಾದ ಕೋಪ ದ್ವೇಷ, ಅಸೂಯೆ ಅವುಗಳನ್ನು ಮನಸ್ಸಿನಿಂದ ತೊಡೆದು ಹಾಕುವ ಸಂಕಲ್ಪ ಮಾಡುವ ದಿನ. ನಮ್ಮಲ್ಲಿರುವ ದುಷ್ಟ ಗುಣಗಳನ್ನು ತೊಡೆದು ಹಾಕಿ ಅದರಲ್ಲಿ ವಿಜಯಶಾಲಿಗಳಾಗುವುದೇ ವಿಜಯದಶಮಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಪಟ್ಟಣದ ಕೋರ್ಟ್ ಸರ್ಕಲ್ ಹತ್ತಿರ ಇರುವ ಶ್ರೀ ಗ್ರಾಮದೇವಿ ದೊಡ್ಡ ದ್ಯಾಮವ್ವ ದೇವಿಯ ದೇವಸ್ಥಾನದ ಮಹಾದ್ವಾರ ಉದ್ಘಾಟನೆ, ಕಳಸಾರೋಹಣ ಹಾಗೂ ಫಲಕದ ಉದ್ಘಾಟನೆಯ ಸಮಾರಂಭದಲ್ಲಿ ಭಾಗವಹಿಸಿ, ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಇಂದುಶುಭ ದಿನ ವಿಜಯ ದಶಮಿಯ ದಿನ ಟ್ರಸ್ಟ್ ಕಮಿಟಿಯವರು ಮತ್ತು ಓಣಿಯ ಹಿರಿಯರು ದೊಡ್ಡ ದ್ಯಾಮವ್ವನ ಜೀರ್ಣೋದ್ಧಾರದ ಹಲವು ಕಾರ್ಯಕ್ರಮ ಹಮ್ಮಿಕೊಂಡು ಸ್ತುತ್ಯವಾದ ಕೆಲಸವನ್ನು ಮಾಡಿದೀರಿ ಎಂದು ಹೇಳಿದರು.
ನವರಾತ್ರಿಯ ಅಂತಿಮ ದಿನ ದಶಮಿಯ ದಿನ ಪವಿತ್ರ ದಿನ. ಒಂದೊAದು ಅವತಾರ ಇದೆ. ಅದರಲ್ಲಿ ಹಲವು ದೈತ್ಯರನ್ನು ಸಂಹಾರ ಮಾಡಿರುವುದು ಪುರಾಣದಲ್ಲಿದೆ. ದೈತ್ಯರನ್ನು ಸಂಹಾರ ಮಾಡಲು ಯಾರಿಂದಲೂ ಸಾಧ್ಯವಾಗದಿದ್ದಾಗ ತಾಯಿ ಬೇರೆ ಬೇರೆ ರೂಪದಲ್ಲಿ ಬಂದು ದೈತ್ಯರನ್ನು ಸಂಹಾರ ಮಾಡಿದ್ದಾಳೆ. ಅಂದು ರಕ್ತದ ಕೋಡಿ ಹರಿಯುತ್ತಿತ್ತು. ಈಗ ಅಂತಾ ದೈತ್ಯರು ಯಾರೂ ಇಲ್ಲ. ಆದರೆ, ದೈತ್ಯರ ಗುಣಗಳಿವೆ. ನಮ್ಮಲ್ಲಿರುವ ದೋಷಗಳು, ಕೋಪ ದ್ವೇಷ, ಅಸೂಯೆ ಯಾವುದಾದರೂ ಇದ್ದರೆ ಅವುಗಳನ್ನು ಮನಸ್ಸಿನಿಂದ ತೊಡೆದು ಹಾಕುವ ಸಂಕಲ್ಪ ಮಾಡುವ ದಿನ. ನಮ್ಮಲ್ಲಿರುವ ದುಷ್ಟ ಗುಣಗಳನ್ನು ತೊಡೆದು ಹಾಕಿ ಅದರಲ್ಲಿ ವಿಜಯಶಾಲಿಗಳಾಗುವುದೇ ವಿಜಯದಶಮಿ ಆಚರಣೆ ಮಾಡುವುದು. ಮನುಷ್ಯರು ಕಾಮ ಕೋಧ ಮದ ಮತ್ಸರದ ಸಂಕೋಲೆಯಲ್ಲಿ ಸಿಲುಕಿಕೊಂಡಿದ್ದೇವೆ . ಸಂಕಷ್ಟಗಳ ಸುಳಿಯಲ್ಲಿ ದೇವಿಯನ್ನು ನೆನೆದು ತಾಯಿಯ ಆಶೀರ್ವಾದ ಪಡೆಯಬೇಕು ಎಂದು ಹೇಳಿದರು.
ಅಗಾಧವಾದ ಶಕ್ತಿ ರಾವಣನಿಗೂ ಇತ್ತು. ದೈತ್ಯರಿಗೂ ಇತ್ತು ಅವರ ವಿಚಾರದಲ್ಲಿ ದೋಷ ಇದ್ದಿದ್ದರಿಂದ ಅವರ ಸಂಹಾರ ಆಯಿತು. ಮನುಷ್ಯನಲ್ಲಿ ಸದ್ಗುಣ ಮತ್ತು ದುರ್ಗುಣ ಇವೆ. ಇವೆರಡೂ ನಮಗೆ ಬರಲು ಸಾಧ್ಯತೆ ಇದೆ. ಅಧಿಕಾರ ದುಡ್ಡು ಬಂದಾಗ ಅಹಂಕಾರ ದುರ್ಬುದ್ದಿ ಬರುತ್ತದೆ. ಅದೆಲ್ಲ ಭಗವಂತ ಕೊಟ್ಟಿದ್ದು ಅಂತ ಸದ್ಗುಣದಿಂದ ಜನರ ಸೇವೆ ಮಾಡಬೇಕು. ಹಣೆ ಬಹರ ಎಲ್ಲ ಸುಳ್ಳು.ಒಳಗಿರುವ ಬುದ್ದಿ ನಮ್ಮ ಭವಿಷ್ಯ ಬರೆಯುತ್ತದೆ. ಹೀಗಾಗಿ ನಾವೆಲ್ಲ ದುಷ್ಟ ಶಕ್ತಿ ದೂರ ಮಾಡಿ ಶಿಷ್ಟ ಶಕ್ತಿಗೆ ತಲೆಬಾಗಿ ದೇವಿಯ ಸ್ತುತಿ ಮಾಡಿ ಪುನೀತರಾಗೋಣ ಎಂದರು.
ಗ್ರಾಮ ದೇವತೆ ಸಂತುಷ್ಟಳಾದರೆ ಗಾಮಕ್ಕೂ ಒಳ್ಳೆಯದಾಗುತ್ತದೆ. ಹಿಂದೆ ಮಾರಕರೋಗಗಳು ಬಂದಾಗ ಗ್ರಾಮ ದೇವತೆಗಳನ್ನು ಆರಾಧನೆ
ಮಾಡುತ್ತಿದ್ದರು. ಸೀಮೆ ಕಾಯಲು ಸೀಮೆ ಬಸವಣ್ಣ ಇದ್ದಾನೆ. ಅವುಗಳ ಹಿಂದೆ ಅರ್ಥ ಇದೆ. ಅದನ್ನು ನಾವು ತಿಳಿದುಕೊಳ್ಳಬೇಕು. ಎಂದರು.
ಮುಕ್ತಿ ಮಂದಿರ ಬಹಳ ದೊಡ್ಡ ಶಕ್ತಿ ಕೇಂದ್ರವಾಗಿ ಬೆಳೆಯುತ್ತಿದೆ . ಮುಕ್ತಿ ಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಇಪ್ಪತ್ತು ವರ್ಷಗಳ ಶ್ರಮ ಈಗ ಕಾಲ ಕೂಡಿ ಬರುತ್ತಿದೆ. ನಮ್ಮ ಕಣ್ಣ ಮುಂದೆಯೇ ಲಿಂಗ ಸ್ಥಾಪನೆ ಮಾಡಿ ಅದ್ಭುತ ಕಾರ್ಯ ಮಾಡಿದ್ದಾರೆ. ಸಂಸದರ ಅನುದಾನದಲ್ಲಿ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಪ್ರಕಟಿಸಿದರು.
ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿ ವಹಿಸಿಕೊಂಡವರು ಜವಾಬ್ದಾರಿ ಮರಿಯಬಾರದು ದೇವರ ದುಡ್ಡು ಬಂಗಾರ ಎಲ್ಲಿಯೂ ಸೋರಬಾರದುಎಂದು ಬೊಮ್ಮಾಯಿ ಹೇಳಿದರು.
ಈ ಸಂಧರ್ಭದಲ್ಲಿ ಶ್ರೀ ಷ.ಬ್ರ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಮುಕ್ತಿಮಂದಿರ ಹಾಗೂ ಕರೆ ವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀಗಳು ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿದರು. ಕಮೀಟಿಯ ಅಧ್ಯಕ್ಷರಾದ ಮಹೇಶ ಲಿಂಬಯ್ಯಸ್ವಾಮಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖಂಡರುಗಳಾದ ಶಂಕ್ರಪ್ಪ ಗೊರವರ, ಎಂ.ಆರ್ ಪಾಟೀಲ, ಶಿವನಗೌಡ ಪಾಟೀಲ, ವೆಂಕಣ್ಣ ಚೌರಡ್ಡಿ, ಜಯಕ್ಕ ಕಳ್ಳಿ, ದಾನಿ ಶಾಂತವ್ವ ಗಡೆದ ಭರಮಗೌಡ್ರು ಪಾಟೀಲ ಪ್ರಹ್ಲಾದ್ ರಾವ್ ಕುಲಕರಣಿ ದಿಗಂಬರ ಪೂಜಾರ ಗಿರೀಶ ಚೌರಡ್ಡಿ ಬಸವರಾಜ್ ಚಕ್ರಸಾಲಿ ಗುರುನ ಗೌಡ ಪಾಟೀಲ ಅರ್ಚಕ ವಾಸು ಬಡಿಗೇರ ಮಹಾದ್ವಾರ ಶಿಲ್ಪಿ ದ್ವಾರಕಾಚಾರ ಸೇರಿದಂತೆ ದೇವಸ್ಥಾನದ ಟ್ರಸ್ಟ್ ಕಮಿಟಿಯ ಸರ್ವ ಸದಸ್ಯರು ಹಿರಿಯರು ಪಾಲ್ಗೊಂಡಿದ್ದರು.
ನ್ಯಾಯವಾದಿ ಬಸವರಾಜ ಬಾಳೇಶ್ವರ ಮಠ ನಿಂಗಪ್ಪ ಬನ್ನಿ ಶಂಕರ ಮರಾಠೆ ನಿರ್ವಹಿಸಿದರು.





















