
ಇಂಡಿ,ಆ.೨೫-ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಾನುವಾರ ಕ್ಷತ್ರಿಯ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭ ಜರುಗಿತು.
ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ರಾಮನಗೌಡ ಪಾಟೀಲ ಅವರು, ಕ್ಷತ್ರಿಯ ಸೌಹಾರ್ದತ ಬ್ಯಾಂಕ್ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಈ ಬ್ಯಾಂಕ್ ಅತಿ ಶೀಘ್ರದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಟಬು, ಕಟಬರ ಸಮಾಜದ ಧರ್ಮ ಗುರುಗಳಾದ ಕಲ್ಲಿನಾಥ ಮಹಾಸ್ವಾಮಿಗಳು ಮಾತನಾಡಿ, ಕ್ಷತ್ರಿಯ ಸಮಾಜ ಅತ್ಯಂತ ಕಳಕಳಿಯ ಸಮಾಜವಾಗಿದ್ದು, ಬಡವರ ಏಳಿಗೆ ಮತ್ತು ಸಹಾಯ ಮಾಡುವಲ್ಲಿ ಕ್ಷತ್ರಿಯ ಸೌಹಾರ್ದ ಸಹಕಾರಿ ಸಂಘ ಬ್ಯಾಂಕ್ ಶ್ರಮಿಸಲಿ. ಈ ಬ್ಯಾಂಕ್ ಸಂತೋಷ್ ಕ್ಷತ್ರಿ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ಪ್ರಗತಿ ಮತ್ತು ದಾಪುಗಾಲ ಹಾಕುವುದರಲ್ಲಿ ಯಾವ ಸಂದೇಹವಿಲ್ಲವೆAದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಷತ್ರಿಯ ಸೌಹಾರ್ದ ಸಹಕಾರ ಬ್ಯಾಂಕಿನ ಅಧ್ಯಕ್ಷ ಸಂತೋಷ್ ಕ್ಷತ್ರಿ, ಕಟಬು, ಕಟಬರ ರಾಜ್ಯ ಅಧ್ಯಕ್ಷರು ಮತ್ತು ಸಿದ್ಧಸಿರಿ ಬ್ಯಾಂಕಿನ ನಿರ್ದೇಶಕರಾದ ಜಗದೀಶ ಕ್ಷತ್ರಿ ,ವಿಜಯಕುಮಾರ್ ನಾಯಕ, ಚಡಚಣ ತಾಲೂಕ ಕಟಬು ಕಟಬರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ದತ್ತು ಶಿಂದೆ, ಮುಖಂಡರಾದ ಶ್ರೀಶೈಲ ಕ್ಷತ್ರಿ ಮಾಶಾಳ, ಕ್ಷತ್ರಿಯ ಸೌಹಾರ್ದ ಸಹಕಾರ ಬ್ಯಾಂಕಿನ ನಿರ್ದೇಶಕ ಅರ್ಜುನ ಕ್ಷತ್ರಿಯ, ಚಿದಾನಂದ ಶಿಂದೆ, ಭೀಮಾ ಶಂಕರ್ ಕ್ಷತ್ರಿಯ, ಸ್ವಾತಂತ್ರ ಸಿಂಧೆ, ಜಿಲ್ಲೆಯ ಕಟುಬು ಕಟಬರ ಕ್ಷತ್ರಿಯ ಅಧ್ಯಕ್ಷರಾದ ಶಿವು ಕಾಟಕರ, ಪತ್ರಕರ್ತ ಲಕ್ಷ್ಮಣ ಶಿಂಧೆ, ಉಮಾ ಶಂಕರ್ ಕ್ಷತ್ರಿಯ ಯುವ ಮುಖಂಡರಾದ ಭೀಮಾಶಂಕರ್ ಶಿಂಧೆ, ದಿಗಂಬರ್ ಶಿಂಧೆ, ಅನೇಕ ಕಟಬು, ಕಟಬರ ಮತ್ತು ಕ್ಷತ್ರಿಯ ಸಮಾಜದವರು ಮಹಿಳೆಯರು, ಯುವಕರು ಹಿರಿಯರು ಸುತ್ತಮುತ್ತಲಿನ ಹಳ್ಳಿಯ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






























