ಇಂದಿರಾ ಕ್ಯಾಂಟೀನ್ ಉದ್ಘಾಟನೆ


ನವಲಗುಂದ,ಆ.೧೬: ಬಡವರು, ಕೂಲಿಕಾರರು ಹಸಿವಿನಿಂದ ಬಳಲಬಾರದು ಎಂದು ಅನ್ನರಾಮಯ್ಯ ಎನಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲರೂ ಹೊಟ್ಟೆತುಂಬಾ ಊಟ ಮಾಡಬೇಕೆಂಬ ಆಸೆಯಂತೆ ರಾಜ್ಯದಲ್ಲಿ ೧೬೦ ಇಂದಿರಾ ಕ್ಯಾಂಟಿನ್‌ಗಳನ್ನು ಪ್ರಾರಂಭಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.


ಅವರು ಪಟ್ಟಣದ ಪುರಸಭೆ ಎದುರಿಗೆ ಇರುವ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟಿನ ಉದ್ಘಾಟಿಸಿ ಉಪಹಾರ ಸೇವಿಸಿ ಮಾತನಾಡಿದರು
ಜನತೆಯ ಆಶೀರ್ವಾದದಿಂದ ೧೩೬ ಶಾಸಕರನ್ನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಶಕ್ತಿಯೋಜನೆ, ಗೃಹಲಕ್ಷಿ÷್ಮÃ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಅಂತಹ ಐದು ಗ್ಯಾರೆಂಟಿಗಳನ್ನು ನೀಡಿ ಯತಾವಥ್ಥಾಗಿ ಫಲಾನುಭವಿಗಳಿಗೆ ನೇರವಾಗಿ ಯೋಜನೆಗಳನ್ನು ಜಾರಿಮಾಡಿ ನುಡಿದಂತೆ ನಡೆದಿದೆ ಎಂದರು.


ತಹಶೀಲ್ದಾರ ಸುಧೀರ್ ಸಾಹುಕಾರ ಮುಖ್ಯಧಿಕಾರಿ ಎಸ್ ಪಿ ಪೂಜಾರ ಸರ್ಕಾರದ ಗ್ಯಾರೆಂಟಿ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಶಿವಾನಂದ ತಡಸಿ, ಫರೀದಾಬೇಗಂ ಬಬರ್ಚಿ, ಜೀವನ ಪವಾರ, ಅಪ್ಪಣ್ಣ ಹಳ್ಳದ, ಮಂಜು ಜಾಧವ, ಮೋದಿನ ಶಿರೂರ, ಸುರೇಶ ಮೇಟಿ, ಹನಮಂತ ವಾಲಿಕಾರ, ಹುಸೇನಬಿ ದಾರವಾಡ, ಮಂಜುಳಾ ಸುಣಗಾರ, ಮುದಕವ್ವ ಬೆಂಡಿಗೇರಿ, ಜ್ಯೋತಿ ಗೊಲ್ಲರ, ಭಾರತಿ ಕಲಾಲ, ಪದ್ಮಾವತಿ ಪೂಜಾರ, ಜೈತುನಬಿ ನಾಶಿಪುಡಿ, ಸಂತೋಷಗೌಡ ಪಾಟೀಲ, ಅಶ್ಪಾಕ ಚಾಹುಸೇನ, ಬಸವರಾಜ ಮುಧೋಳ, ಮದಾರಸಾಬ ಉಗರಗೋಳ ಇತರರು ಇದ್ದರು