
ಬೀದರ್: “ಗ್ರಾಹಕರಿಗೆ ಗುಣಮಟ್ಟದ ಟೈರ್ಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಸಿಂಧೋಲ್ ಟೈರ್ಸ್ ಮಾಲೀಕ ಸುರೇಂದ್ರ ಸಿಂಧೋಲ್ ಹೇಳಿದರು.
ನಗರದ ಉದಗಿರ್ ರಸ್ತೆ, ಸಿಂಡೋಲ್ ವೃತ್ತದಲ್ಲಿ ಶನಿವಾರ ಆರಂಭಗೊAಡ ಎಂಆರ್ಎಫ್ ಟೈರ್ಸ್ ಆಯಿಂಡ್ ಸರ್ವಿಸ್ ಕೇಂದ್ರದ ಉದ್ಘಾಟನಾ ಸಂದರ್ಭದಲ್ಲಿ ಅವರು ಮಾತನಾಡಿದರು.
ಭಾರತದ ಪ್ರಮುಖ ಟೈರ್ ತಯಾರಿಕಾ ಸಂಸ್ಥೆಯಾದ ಎಂಆರ್ಎಫ್ನ ಈ ಫ್ರಾಂಚೈಸಿಯಲ್ಲಿ ವೀಲ್ ಅಲೈನ್ಮೆಂಟ್, ವೀಲ್ ಬ್ಯಾಲೆನ್ಸಿಂಗ್, ಸ್ವಯಂಚಾಲಿತ ಟೈರ್ ಅಳವಡಿಕೆ, ಟ್ಯೂಬ್ಲೆಸ್ ಟೈರ್ ದುರಸ್ತಿ ಹಾಗೂ ನೈಟ್ರೋಜನ್ ಗಾಳಿ ತುಂಬುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಎಂಆರ್ಎಫ್ನ ಹಿರಿಯ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ರವಿ ಸಿ. ಮಾತನಾಡಿ, ಆಧುನಿಕ ಆಮದು ಯಂತ್ರೋಪಕರಣಗಳು ಮತ್ತು ತರಬೇತಿ ಪಡೆದ ತಂತ್ರಜ್ಞರ ನೆರವಿನಿಂದ ವಾಹನ ಸವಾರರಿಗೆ ನಿಖರ ಹಾಗೂ ಗುಣಮಟ್ಟದ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಸಹಾಯಕ ಜಿಲ್ಲಾ ವ್ಯವಸ್ಥಾಪಕ ರಾಕೇಶ್ ಮಾತನಾಡಿ, ಎಂಆರ್ಎಫ್ನ ಗುಣಮಟ್ಟದ ಟೈರ್ ಉತ್ಪನ್ನಗಳೊಂದಿಗೆ ಅತ್ಯಾಧುನಿಕ ಸೇವೆಗಳನ್ನು ಗ್ರಾಹಕರಿಗೆ ತಲುಪಿಸುವುದು ಕೇಂದ್ರದ ವಿಶೇಷತೆಯಾಗಿದೆ ಎಂದರು.
ಕೇAದ್ರದಲ್ಲಿ ಗ್ರಾಹಕರಿಗಾಗಿ ಹವಾನಿಯಂತ್ರಿತ ವಿಶ್ರಾಂತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಎಂಆರ್ಎಫ್ನ Zಐಘಿ ಮತ್ತು ಪರ್ಫಿನ್ಜಾ ಕಾರ್ ರೇಡಿಯಲ್ ಟೈರ್ಗಳು ಸೇರಿದಂತೆ ವಿವಿಧ ಉತ್ಪನ್ನಗಳು ಇಲ್ಲಿ ಲಭ್ಯವಿರಲಿವೆ.





















