Home ಜಿಲ್ಲೆ ಸೇಡಂಕರ್ ಆಸ್ಪತ್ರೆಯಲ್ಲಿ ಸ್ವಯಂ-ಪ್ರೇರಿತ ಅಂಗದಾನಜಾಗೃತಿ ಮತ್ತು ನೋಂದಣಿ ಕೇಂದ್ರ ಉದ್ಘಾಟನೆ

ಸೇಡಂಕರ್ ಆಸ್ಪತ್ರೆಯಲ್ಲಿ ಸ್ವಯಂ-ಪ್ರೇರಿತ ಅಂಗದಾನಜಾಗೃತಿ ಮತ್ತು ನೋಂದಣಿ ಕೇಂದ್ರ ಉದ್ಘಾಟನೆ

ಬೀದರ್, ಜು.೧೦: ನಗರದ ಸೇಡಂಕರ್ ಆಸ್ಪತ್ರೆಯಲ್ಲಿ ಸ್ವಯಂ-ಪ್ರೇರಿತ ಅಂಗದಾನ ಜಾಗೃತಿ ಮತ್ತು ನೋಂದಣಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅಂಗದಾನದ ಮಹತ್ವ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಹೀಮ್ ಖಾನ್, ಆಸ್ಪತ್ರೆ ಮುಖ್ಯಸ್ಥರಾದ ಡಾ. ರಾಜಶೇಖರ ಸೇಡಂಕರ್, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಖದೀರ್, ಬೀದರ್ ಜಿಲ್ಲಾ ಒಬಿಸಿ ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ ಮಾಳಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸುರೇಶ್ ಚನಶೆಟ್ಟಿ, ರೋಟರಿ ಕಲ್ಯಾಣ ವಲಯದ ಮಾಜಿ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ತಾನಾಜಿ ಸಗರ್, ದಕ್ಷಿಣ ಘಟಕದ ಅಧ್ಯಕ್ಷ ಸುನಿಲ್ ಖಾಶಂಪುರ್, ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಟಿಲೆಕರ್, ಸಾಯಿಕುಮಾರ್ ಘೋಡ್ಕೆ, ವೈಜಿನಾಥ್ ಪೋಲ್, ರಮೇಶ್ ಪೋಲ್, ಮೊಹಮ್ಮದ್ ಜಾವೇದ್ ಸೇರಿದಂತೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಗದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು. ಭಾರತದಲ್ಲಿ ಮೂತ್ರಪಿಂಡ, ಯಕೃತ್ತು, ಹೃದಯ, ಶ್ವಾಸಕೋಶ, ಮೇದೋಜೀರಕ ಗ್ರಂಥಿ ಹಾಗೂ ಕರುಳಿನ ಕಸಿ ಕಾನೂನುಬದ್ಧವಾಗಿ ನಡೆಯುತ್ತಿದ್ದು, ಅಂಗಾAಗಗಳ ಹಂಚಿಕೆಯನ್ನು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಂಗಾAಗ ಕಸಿ ಸಂಸ್ಥೆಗಳು ವೈದ್ಯಕೀಯ ಆದ್ಯತೆ, ರಕ್ತದ ಗುಂಪು, ಹೊಂದಾಣಿಕೆ ಹಾಗೂ ಕಾಯುವ ಅವಧಿಯ ಆಧಾರದ ಮೇಲೆ ನಡೆಸುತ್ತವೆ ಎಂದು ತಿಳಿಸಲಾಯಿತು.
ಭಾರತದಲ್ಲಿ ಸಾಮಾನ್ಯವಾಗಿ ಕಸಿ ಮಾಡಲಾಗುವ ಅಂಗಗಳು:
ಮೂತ್ರಪಿAಡ (ಜೀವಂತ ಅಥವಾ ಮೃತ ದಾನಿಗಳಿಂದ) ಯಕೃತ್ತು (ಜೀವಂತ ಅಥವಾ ಮೃತ ದಾನಿಗಳು)ಹೃದಯ (ಮೃತ ದಾನಿಗಳು ಮಾತ್ರ)ಶ್ವಾಸಕೋಶ (ಮೃತ ದಾನಿಗಳು ಮಾತ್ರ)ಮೇದೋಜೀರಕ ಗ್ರಂಥಿ (ಮೃತ ದಾನಿಗಳು ಮಾತ್ರ)ಕರುಳು (ಅಪರೂಪದ, ಮೃತ ದಾನಿಗಳು)
ಭಾರತದಲ್ಲಿ ಅಂಗಾAಗ ಹಂಚಿಕೆಯನ್ನು ರಾಷ್ಟ್ರೀಯ ಅಂಗ ಮತ್ತು ಅಂಗಾAಶ ಕಸಿ ಸಂಸ್ಥೆ (ಓಔಖಿಖಿಔ) ಮತ್ತು ರಾಜ್ಯ ಮಟ್ಟದ ಅಂಗಾAಗ ಕಸಿ ಸಂಸ್ಥೆಗಳ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಮೃತ ದಾನಿಗಳ ಅಂಗಗಳನ್ನು ವೈದ್ಯಕೀಯ ತುರ್ತುಸ್ಥಿತಿ, ಹೊಂದಾಣಿಕೆ, ರಕ್ತದ ಗುಂಪು, ಕಾಯುವ ಸಮಯ ಮತ್ತು ಇತರ ವೈದ್ಯಕೀಯ ಮಾನದಂಡಗಳ ಆಧಾರದ ಮೇಲೆ ಹಂಚಲಾಗುತ್ತದೆ – ಪಾವತಿ ಅಥವಾ ವೈಯಕ್ತಿಕ ಆದ್ಯತೆಯ ಮೇಲೆ ಅಲ್ಲ.

ದೇಶದಲ್ಲಿ ವಿಶೇಷವಾಗಿ ಮೂತ್ರಪಿಂಡ ಹಾಗೂ ಯಕೃತ್ತಿನಂತಹ ಅಂಗಗಳಿಗೆ ಬೇಡಿಕೆ ಹೆಚ್ಚಿದ್ದು, ಸಾವಿರಾರು ರೋಗಿಗಳು ಅಂಗಾAಗ ಕಸಿಗಾಗಿ ಕಾಯುವ ಪಟ್ಟಿಯಲ್ಲಿದ್ದಾರೆ. ಜೀವಂತ ದಾನವನ್ನು ಕೆಲವು ಅಂಗಗಳಿಗೆ ಮಾತ್ರ ಅನುಮತಿಸಲಾಗಿದ್ದು, ಮಾನವ ಅಂಗಾAಗಗಳ ಖರೀದಿ ಮತ್ತು ಮಾರಾಟವು ಕಾನೂನುಬಾಹಿರವಾಗಿದೆ ಎಂದು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಅಂಗದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತ ನೋಂದಣಿಗೆ ಮುಂದಾಗುವAತೆ ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು.