Home ಜಿಲ್ಲೆ ಸಾಧಕರೊಂದಿಗೆ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟನೆ ಸಮಾರಂಭ

ಸಾಧಕರೊಂದಿಗೆ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟನೆ ಸಮಾರಂಭ

ಧಾರವಾಡ,ಆ೨೧: ಚಿತ್ರಕಲಾ ಶಿಲ್ಪಿ ಶ್ರೀ ಡಿ. ವಿ. ಹಾಲಭಾವಿ ರಾಷ್ಟಿçÃಯ ಸ್ಮಾರಕ ಟ್ರಸ್ಟ್ದಿಂದ ಸಾಧಕರೊಂದಿಗೆ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಕಲಾವಿದ ಬಾಬು ಜತ್ತಕರ ಅವರ ಚಿತ್ರಕಲಾ ಪ್ರದರ್ಶನ-ಪ್ರಾತ್ಯಕ್ಷಿಕೆ-ಸಂವಾದ ಕಾರ್ಯಕ್ರಮದ ಉದ್ಘಾಟನೆಯನ್ನು ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.


ಈ ಸಂದರ್ಭದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ರಾಷ್ಟಿçÃಯ ಸ್ಮಾರಕ ಟ್ರಸ್ಟ್ನ ಅಧ್ಯಕ್ಷ ರಂಜಾನ್ ದರ್ಗಾ, ಚಿತ್ರಕಲಾ ಶಿಲ್ಪಿ ಶ್ರೀ ಡಿ. ವ್ಹಿ. ಹಾಲಭಾವಿ ರಾಷ್ಟಿçÃಯ ಸ್ಮಾರಕ ಟ್ರಸ್ಟ್ನ ಅಧ್ಯಕ್ಷ ಬಿ. ಮಾರುತಿ, ಟ್ರಸ್ಟ್ ಸದಸ್ಯರಾದ ಎಫ್. ವ್ಹಿ ಚಿಕ್ಕಮಠ, ಡಾ. ಬಿ.ಎಲ್. ಚವ್ಹಾಣ, ಡಾ. ಬಿ.ಎಚ್. ಕುರಿಯವರ, ಎಸ್. ಕೆ. ಪತ್ತಾರ, ಡಾ. ರೇಣುಕಾ ಮಾರ್ಕಂಡೇಯ ಅವರು ಉಪಸ್ಥಿತರಿದ್ದರು.


ಚಿತ್ರಕಲಾ ಶಿಲ್ಪಿ ಶ್ರೀ ಡಿ. ವ್ಹಿ. ಹಾಲಭಾವಿ ರಾಷ್ಟಿçÃಯ ಸ್ಮಾರಕ ಟ್ರಸ್ಟ್ನ ಸದಸ್ಯ ಸುರೇಶ ಹಾಲಭಾವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು, ಡಿ.ಎಂ. ಬಡೀಗೇರ ಅವರು ವಂದಿಸಿದರು.